For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದಂತೆ ಶೂಟಿಂಗ್ ನಡೆಸಿದ ಪುನೀತ್ 'ಮೈತ್ರಿ'

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರದ ಶೂಟಿಂಗ್ ಸದ್ದಿಲ್ಲದಂತೆ ನಡೆಯುತ್ತಿದೆ. ಈಗಾಗಲೆ ದ್ವಿತೀಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಪುನೀತ್ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯಿಸುತ್ತಿದ್ದಾರೆ.

  ಈ ಚಿತ್ರಕ್ಕೆ 'ಮೈತ್ರಿ' ಎಂದು ಹೆಸರಿಡಲಾಗಿದೆ. ಬೆಂಗಳೂರಿನ ತಾವರೆಕೆರೆಯಲ್ಲಿ ಹಾಕಿರುವ ಕೋರ್ಟ್ ಸೆಟ್ ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಈ ಭಾಗದ ಚಿತ್ರೀಕರಣದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಮೋಹನ್ ಲಾಲ್ ಇಬ್ಬರೂ ಜೊತೆಯಾಗಿ ಅಭಿನಯಿಸುತ್ತಿದ್ದಾರೆ.

  ಮೂಲಗಳ ಪ್ರಕಾರ ಪುನೀತ್ ಅವರದು ಚಿತ್ರದಲ್ಲಿ ಟಿವಿ ನಿರೂಪಕನ ಪಾತ್ರ. ಮೋಹನ್ ಲಾಲ್ ಅವರು ವಿಜ್ಞಾನಿಯಾಗಿ ಅಭಿನಯಿಸಲಿದ್ದಾರೆ. ಆದರೆ ಈ ಬಗ್ಗೆ ಚಿತ್ರದ ನಿರ್ದೇಶಕ ಗಿರಿರಾಜ್ ಆಗಲಿ ನಿರ್ಮಾಪಕ ವಜ್ರೇಶ್ವರಿ ಕುಮಾರ್ ಆಗಲಿ ಯಾರೂ ಬಾಯ್ಬಿಡುತ್ತಿಲ್ಲ.

  'ಮೈತ್ರಿ' ಚಿತ್ರದ ಚಿತ್ರೀಕರಣ ಜುಲೈ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆಗಳಿವೆ. ಈ ಚಿತ್ರದ ನಿರ್ದೇಶಕರಾದ ಗಿರಿರಾಜ್ ಅವರು ಈ ಹಿಂದೆ 'ಅದ್ವೈತ' ಹಾಗೂ 'ಜಟ್ಟಾ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇನ್ನು ಕಥೆಯ ವಿಚಾರಕ್ಕೆ ಬಂದರೆ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಗೆಳೆತನಕ್ಕೆ ಒತ್ತು ಕಥಾವಸ್ತು ಎನ್ನಬಹುದು.

  ಇದೇ ಮೊದಲ ಬಾರಿಗೆ ಪುನೀತ್ ಚಿತ್ರಕ್ಕೆ ಇಳಯರಾಜಾ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ನಾಯಕಿ ಭಾವನಾ. ಅಂದಹಾಗೆ ಮೈತ್ರಿ ಶೀರ್ಷಿಕೆಯನ್ನು ಸಜೆಸ್ಟ್ ಮಾಡಿದವರು ರಾಘವೇಂದ್ರ ರಾಜ್ ಕುಮಾರ್ ಅವರಂತೆ. ಚಿತ್ರದ ಪಾತ್ರವರ್ಗದಲ್ಲಿ 'ಆ ದಿನಗಳು' ಖ್ಯಾತಿಯ ಅರ್ಚನಾ ವೇದವ್ಯಾಸ್ ಸಹ ಇದ್ದಾರೆ. (ಏಜೆನ್ಸೀಸ್)

  English summary
  The shooting of Power Star Puneet Rajkumar and Malayalam SuperStar Mohanlal lead Kannada film 'Mythri' in brisk progress. It is said that Puneet is playing the role of a TV anchor. Ilaiyaraja is giving music for the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X