For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ರಣ ವಿಕ್ರಮ'ಕ್ಕೆ ಮಾರ್ಚ್ ನಲ್ಲಿ ಮುಹೂರ್ತ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಪುನೀತ್ ಅಭಿಮಾನಿಗಳು ಹಾಗೂ ಚಿತ್ರೋದ್ಯಮ ಬೆರಗುಗಣ್ಣುಗಳಿಂದ ಎದುರು ನೋಡುತ್ತಿದೆ. ಅಷ್ಟರಲ್ಲೇ ಮತ್ತೊಂದು ಚಿತ್ರದ ಬಗ್ಗೆ ಪುನೀತ್ ಸುಳಿವು ಬಿಟ್ಟುಕೊಟ್ಟಿದ್ದಾರೆ.

  'ಗೂಗ್ಲಿ' ಹಾಗೂ 'ಗೋವಿಂದಾಯ ನಮಃ' ಚಿತ್ರಗಳ ಮೂಲಕ ಭರವಸೆಯ ನಿರ್ದೇಶಕ ಎನ್ನಿಸಿಕೊಂಡಿರುವ ಪವನ್ ಒಡೆಯರ್ ಇದೇ ಮೊದಲ ಬಾರಿಗೆ ಪುನೀತ್ ಜೊತೆ ಕೈಜೋಡಿಸಿದ್ದಾರೆ. ಚಿತ್ರಕ್ಕೆ ರಣ ವಿಕ್ರಮ ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ.

  ಜಯಣ್ಣ ನಿರ್ಮಿಸುತ್ತಿರುವ ಈ ಚಿತ್ರ ಮಾರ್ಚ್ 2014ಕ್ಕೆ ಚಿತ್ರ ಸೆಟ್ಟೇರಲಿದೆ. ಚಿತ್ರ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಪವನ್ ಒಡೆಯರ್ ಅವರದೇ. ಸದ್ಯಕ್ಕೆ ಪುನೀತ್ ಅವರು 'ನಿನ್ನಿಂದಲೇ' ಹಾಗೂ 'ಮೈತ್ರಿ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

  ಜಯಂತ್ ಸಿ ಪರಾಂಜಿ ನಿರ್ದೇಶನದ 'ನಿನ್ನಿಂದಲೇ' ಚಿತ್ರದ ಬಹುತೇಕ ಸಿದ್ಧವಾಗಿದೆ. ಅದಾದ ಬಳಿಕ 'ಮೈತ್ರಿ' ಶುರುವಾಗಲಿದೆ. ಇತ್ತೀಚೆಗೆ ನಿನ್ನಿಂದಲೇ ಶೂಟಿಂಗ್ ಬ್ಯಾಂಕಾಕ್ ನಲ್ಲಿ ನಡೆದಾಗ ತೊಂದರೆ ಎದುರಿಸಿತ್ತು. ಈ ಚಿತ್ರದಲ್ಲಿ ಕಿಸ್ಸಿಂಗ್ ಸ್ಟಾರ್ ತಿಲಕ್ ಅಭಿನಯಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Power Star Puneeth Rajkumar and Pawan Wodeyar film Rana Vikrama will start in March 2014. Along with directing Pawan writing the story, screenplay, dialogues and lyrics for Puneeth's film. At present Puneet is busy in Ninnindale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X