»   » ಅಪ್ಪು, ಜಗ್ಗೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಅಪ್ಪು, ಜಗ್ಗೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada
Puneeth Rajkumar and Jaggesh
ಬೆಂಗಳೂರು, ಮಾ.17 : ಕನ್ನಡ ಚಿತ್ರರಂಗದ ಇಬ್ಬರು ನಟರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 38ಕ್ಕೆ ಕಾಲಿಟ್ಟರೆ, ನಗುವಿನಲ್ಲೇ ಕಚಕುಳಿ ಇಡುವ ನವರಸ ನಾಯಕ ಜಗ್ಗೇಶ್ 50ಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಸದಾಶಿವನಗರದ ನಿವಾಸದಲ್ಲಿ ಭಾನುವಾರ ಬೆಳಗ್ಗೆ, ಆಗಮಿಸಿದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಸಹೋದರ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಪುನೀತ್ ಗೆ ಶುಭಾಶಯ ಕೋರಿ, ಉಡುಗೊರೆ ನೀಡಿದರು.

ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾ ಘೋಷಣೆಯಾಗುವುದು ಹಿಂದಿನಿಂದ ಬಂದ ಸಂಪ್ರದಾಯ. ಹುಟ್ಟುಹಬ್ಬದ ಸಂದರ್ಭದಲ್ಲಿ ಪುನೀತ್ ರ ನೂತನ "ನಿನ್ನಿಂದಲೇ" ಸಿನಿಮಾದ ಮುಹೂರ್ತವೂ ನಡೆಯಿತು.

ಇದರಿಂದ ಅಪ್ಪುವಿನ ಹೊಸ ಚಿತ್ರ ಯಾವಾಗ ಪ್ರಾರಂಭ ಎಂಬ ಪ್ರಶ್ನೆಗೂ ಉತ್ತರ ದೊರಕಿತು. ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡ ಪುನೀತ್ ಕನ್ನಡದ ಕೋಟ್ಯಾಧಿಪತಿ ಚಿತ್ರೀಕರಣದಿಂದಾಗಿ ಹೊಸ ಸಿನಿಮಾ ಘೋಷಿಸುವುದು ಸ್ವಲ್ಪ ತಡವಾಯಿತು ಎಂದರು.

ಉತ್ತಮ ಕಥೆಗಾಗಿ ಹುಟುಕಾಟ ನಡೆಸುತ್ತಿದ್ದೆ, ಈಗ ಕಥೆ ನಿನ್ನಿಂದಲೇ ಕಥೆ ಇಷ್ಟವಾಗಿದೆ ಎಂದು ಹೇಳಿದರು. ಚಿತ್ರಕ್ಕೆ ನಾಯಕಿ ಮತ್ತು ಉಳಿದ ಪಾತ್ರ ವರ್ಗಗಳ ಆಯ್ಕೆ ಇನ್ನೂ ನಡೆಯುತ್ತಿದೆ. ಈ ಚಿತ್ರ ಮುಗಿಯುವ ವೇಳೆಗೆ ಮೂರು ಚಿತ್ರಗಳನ್ನು ಒಪ್ಪಿಕೊಳ್ಳಲಾಗುವುದು ಎಂದು ತಿಳಿಸಿದರು.

50 ಹೊಡೆದ ಜಗ್ಗೇಶ್ : ನವರಸ ನಾಯಕ ಜಗ್ಗೇಶ್ ಇಂದು 50 ನೇ ರ್ವಷಕ್ಕೆ ಕಾಲಿಟ್ಟರು. ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮಖದಲ್ಲಿ ಕೇಕ್ ಕತ್ತರಿಸುವ ಮೂಲಕ ಐವತ್ತಕ್ಕೆ ಕಾಲಿಟ್ಟರು. ಕನ್ನಡ ಒನ್ ಇಂಡಿಯಾ ಪರವಾಗಿ ಇಬ್ಬರು ನಟರಿಗೂ ಹುಟ್ಟುಹಬ್ಬದ ಶುಭಾಶಯಗಳು. (ಕನ್ನಡದ ಕೋಟ್ಯಾಧಿಪತಿ' ಪುನೀತ್ ಗೆ ವಿಶ್ ಮಾಡಿ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Kannada film actors Puneeth Rajkumar and Jaggesh birthday today. On, Sunday, March 17, Both stars celebrate their birthday with their fans. Puneeth Rajkumar announce his new film Ninnindale this time.
Please Wait while comments are loading...