»   » ವಿತರಕ ಪ್ರಸಾದ್ ವಿರುದ್ದ ಹರಿಹಾಯ್ದ ಪವರ್ ಸ್ಟಾರ್ ಪುನೀತ್

ವಿತರಕ ಪ್ರಸಾದ್ ವಿರುದ್ದ ಹರಿಹಾಯ್ದ ಪವರ್ ಸ್ಟಾರ್ ಪುನೀತ್

Posted By:
Subscribe to Filmibeat Kannada
Puneeth Rajakumar and Distributor Prasad
ಅಣ್ಣನ ನಂತರ ಈಗ ತಮ್ಮನ ಸರದಿ. ಶಿವರಾಜ್ ಕುಮಾರ್ ವಿತರಕ ಪ್ರಸಾದ್ ಗೆ ತಿರುಗೇಟು ನೀಡಿದ ನಂತರ ಈಗ ತಮ್ಮ ಪುನೀತ್ ರಾಜಕುಮಾರ್. ಪ್ರಸಾದ್ ಕನ್ನಡ ಚಿತ್ರರಂಗಕ್ಕೆ ಐರನ್ ಲೆಗ್ ನಂತೆ ಕಾಲಿಟ್ಟಿದ್ದಾರೆ. ಚಿತ್ರೋದ್ಯಮದ ಮಟ್ಟಿಗೆ ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ಸಮರ್ಥ ವೆಂಚರ್ಸ್ ಪ್ರಸಾದ್ ವಿರುದ್ದ ಸಿಟ್ಟು ವ್ಯಕ್ತ ಪಡಿಸಿದ್ದಾರೆ.

ಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸುವುದು ನನ್ನ ಜಾಯಮಾನವಲ್ಲ. ಆದರೆ ಅವರ ಹಿನ್ನಲೆ, ಇತಿಹಾಸ ಯಾವ ಮಟ್ಟದ್ದು ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಪ್ರಸಾದ್ ಏನು ಅನ್ನೋದು ಜನರಿಗೆ ಗೊತ್ತಿದೆ. ಅದೇ ರೀತಿ ನಮ್ಮ ಸಂಸ್ಥೆಯ ಮೂಲಕ ಒಳ್ಳೆ ಚಿತ್ರಗಳನ್ನು ಕೊಟ್ಟಿದ್ದೆವೇಯೋ ಇಲ್ಲವೋ ಅನ್ನೋದನ್ನಾ ಪ್ರೇಕ್ಷಕ ಬಲ್ಲ. ಆತ ಅದಕ್ಕೆ ಉತ್ತರಿಸುತ್ತಾನೆ ಎಂದು ಪುನೀತ್ ಹೇಳಿದ್ದಾರೆ.

ಪ್ರಸಾದ್ ಅಂಥವರು ಹೇಳಿಕೆ ಕೊಡಲು ಅವರಿಗೆ ಯಾವ ನೈತಿಕತೆ ಅನ್ನೋದೇ ಇರುವುದಿಲ್ಲ. ಅವರಿಗೆ ಚಿತ್ರರಂಗದ ಬಗ್ಗೆ ಕಾಮೆಂಟ್ ಮಾಡುವಷ್ಟು ಅನುಭವವಾಗಲಿ, ಅದರ ಬಗ್ಗೆ ತಿಳುವಳಿಕೆಯಾಗಲಿ ಏನೊಂದೂ ಇಲ್ಲ. ಯಾರು ಹೇಗೆ ಹಣ ಮಾಡಿದರು ಅನ್ನೋದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪುನೀತ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಪ್ರಸಾದ್ ಲಾಟರಿ ಟಿಕೆಟ್ ಮೂಲಕವಾದರೂ ಹಣ ಮಾಡಿರಲಿ, ಶೇರು ಮಾರ್ಕೆಟ್ ಮೂಲಕ ಗಳಿಸಿದ ಹಣ ತಂದು ಚಿತ್ರಗಳ ಮೇಲೆ ಸುರಿದಿರಲಿ. ಅದರಿಂದ ನಮಗೇನೂ ಆಗಬೇಕಾಗಿದ್ದಿಲ್ಲ. ಒಂದಂತೂ ಸ್ಪಷ್ಟವಾಗಿ ಹೇಳಲು ಇಚ್ಚಿಸುತ್ತೇನೆ ಒಗ್ಗಟ್ಟಿನಿಂದ ಇರುವ ಕನ್ನಡ ಚಿತ್ರರಂಗಕ್ಕೆ ಪ್ರಸಾದ್ ಐರನ್ ಲೆಗ್ ನಂತೆ ಕಾಲಿಟ್ಟಿದ್ದಾರೆ ಎಂದು ಪುನೀತ್ ಝೂಡಿಸಿದ್ದಾರೆ.

ಆಡಿಯೋ ಬಿಡುಗಡೆ ಸಮಾರಂಭವೊಂದರಲ್ಲಿ ಐವತ್ತು ವರ್ಷಗಳಿಂದ ಚಿತ್ರ ನಿರ್ಮಾಣದಲ್ಲಿರುವ ಕೆಲವು ಸಂಸ್ಥೆಗಳು ಕಥೆಯೇ ಇಲ್ಲದ ಸಿನಿಮಾ ಮಾಡಿ ಡಿಸ್ತ್ರಿಬ್ಯೂಟರ್ ಮತ್ತು ಪ್ರೇಕ್ಷಕರನ್ನು ವಂಚಿಸುತ್ತಿವೆ ಎಂದು ರಾಜ್ ಬ್ಯಾನರ್ ಗುರಿಯಾಗಿ ಇಟ್ಟುಕೊಂಡು ಹೇಳಿಕೆ ನೀಡಿದ್ದರು.

ಯಾರೋ ನಮ್ಮ ಕುಟುಂಬವನ್ನು ಟೀಕಿಸಿದರೆ ನಾವು ಅವರ ಮಟ್ಟಕ್ಕೆ ಇಳಿದು ಟೀಕಿಸಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ನಮಗೂ ಅವರಿಗೂ ಏನು ವ್ಯತ್ಯಾಸವಿಲ್ಲ ಎಂದು ಇತ್ತೀಚಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿತರಕ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

English summary
After a controversial statement from Prasad against Dr. Raj banner movies, Power Star Puneeth Rajakumar said, entire Karnataka knows about Raj banner movies. Prasad is new to this industry and he dont have any rights to talk about Vajreshwari or Poornima combines movies. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada