For Quick Alerts
  ALLOW NOTIFICATIONS  
  For Daily Alerts

  'ಗಂಧದಗುಡಿ' ಮೇಕಿಂಗ್ ವಿಡಿಯೋ: ಶೂಟಿಂಗ್ ವೇಳೆ ನಗುವಿನ ರಾಜಕುಮಾರ ಕಂಡಿದ್ದು ಹೀಗೆ!

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿರುವ ಕೊನೆಯ ಸಿನಿಮಾ 'ಗಂಧದಗುಡಿ'. ಅಮೋಘವರ್ಷ ಸಾರಥ್ಯದಲ್ಲಿ ಈ ಸಾಕ್ಷ್ಯ ಚಿತ್ರ ಸಿನಿಮಾ ನಿರ್ಮಾಣವಾಗಿದೆ. ಅಕ್ಟೋಬರ್ ಕೊನೆ ವಾರದಲ್ಲಿ ಸಿಲ್ವರ್‌ ಸ್ಕ್ರೀನ್‌ಗಳಲ್ಲಿ ಈ ವಿಶೇಷ ಸಿನಿಮಾ ಪ್ರದರ್ಶನವಾಗಲಿದೆ. ಸದ್ಯ ಚಿತ್ರದ ಮೇಕಿಂಗ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

  'ಗಂಧದಗುಡಿ' ದಿವಂಗತ ನಟ ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್. ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಜಗತ್ತನ್ನು ಇದರಲ್ಲಿ ಅನಾವರಣ ಮಾಡಲಾಗಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದು, ಪ್ರೇಕ್ಷಕರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಡ್‌ಸ್ಕಿಪರ್ ಸಂಸ್ಥೆ ಜಂಟಿಯಾಗಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಮಾಡಿವೆ. ಸದ್ಯ ಸಿನಿಮಾ ಚಿತ್ರೀಕರಣದ ವೇಳೆ ಒಂದು ತಮಾಷೆಯ ಪ್ರಸಂಹ ವಿಡಿಯೋ ರಿಲೀಸ್ ಆಗಿದೆ.

  Exclusive: ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ'ಗೆ ಕಾಂಪಿಟೇಷನ್: ಯಾರಿಗೆ ಸೇರುತ್ತೆ ಹಕ್ಕು?Exclusive: ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ'ಗೆ ಕಾಂಪಿಟೇಷನ್: ಯಾರಿಗೆ ಸೇರುತ್ತೆ ಹಕ್ಕು?

  ಸ್ವತಃ ಪುನೀತ್ ರಾಜ್‌ಕುಮಾರ್ ಕ್ಯಾಮರಾ ಹಿಡಿದು ಶೂಟಿಂಗ್ ವೇಳೆ ಎಷ್ಟು ಖುಷಿ ಖುಷಿಯಾಗಿ ಕಾಲ ಕಳೆದಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ತಂಡದ ಸದಸ್ಯರೊಬ್ಬರು ಜಗ್ಗೇಶ್ ಸಿನಿಮಾಗಳ ಸನ್ನಿವೇಶಗಳನ್ನು ಅಭಿನಯಿಸಿ ತೋರಿಸುತ್ತಿದ್ದು, ಅದನ್ನು ನೋಡಿ ಎಂಜಾಯ್ ಮಾಡುತ್ತಾ ಪುನೀತ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ನಂತರ ತಾವು ಕೂಡ ಅದನ್ನು ಮಾಡಿ ತೋರಿಸಿದ್ದಾರೆ. ಈ ವಿಡಿಯೋದಲ್ಲಿ ನಗುವಿನ ರಾಜಕುಮಾರನನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅಪ್ಪು ನಿಧನದ ನಂತರ ಅವರು ಹೀರೊ ಆಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು.

  ಇನ್ನು ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ಲಕ್ಕಿಮ್ಯಾನ್' ಸಿನಿಮಾ ಕೂಡ ಪ್ರೇಕ್ಷಕರ ಮನಗೆದಿದ್ದೆ. ಈ ಚಿತ್ರದಲ್ಲಿ ಅಪ್ಪು ದೇವರಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಪುನೀತ್ ರಾಜ್‌ಕುಮಾರ್ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಹಾಗೂ ಸಹಾಯ ಮಾಡುವ ಗುಣದಿಂದ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದರು. 'ಜೇಮ್ಸ್' ಹಾಗೂ 'ಲಕ್ಕಿಮ್ಯಾನ್' ಸಿನಿಮಾಗಳಲ್ಲಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದರು.

  Puneeth Rajkumar Funny Moments On Gandhada Gudi Documentary Film Shooting Location

  ಈ ಹಿಂದೆ ಅಮೋಘವರ್ಷ ಮಾಡಿದ 'ವೈಲ್ಡ್ ಕರ್ನಾಟಕ' ಡಾಕ್ಯೂಮೆಂಟರಿಯನ್ನು ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗಿತ್ತು. 'ಗಂಧದಗುಡಿ' ಡಾಕ್ಯೂ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿರವುದರಿಂದ ಭಾರಿ ನಿರೀಕ್ಷೆ ಮೂಡಿಸಿದೆ. ಈ ಡಾಕ್ಯೂಮೆಂಟರಿಗಾಗಿ ಅಮೋಘ ವರ್ಷ ಮತ್ತವತ ತಂಡದ ಜೊತೆ ಸಾಕಷ್ಟು ದಿನ ಪುನೀತ್ ರಾಜ್‌ಕುಮಾರ್ ಕರ್ನಾಟಕದ ಕಾಡು ಮೇಡುಗಳಲ್ಲಿ ಅಲೆದಾಡಿದ್ದಾರೆ. ಅಭಿಮಾನಿಗಳು ಮತ್ತೊಮ್ಮೆ ಅಪ್ಪುನ ಬೆಳ್ಳಿಪರದೆ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

  English summary
  Puneeth Rajkumar Funny Moments On Gandhada Gudi Documentary Film Shooting Location. Know More.
  Tuesday, September 27, 2022, 17:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X