For Quick Alerts
  ALLOW NOTIFICATIONS  
  For Daily Alerts

  'ರಾಜರಥ' ಚಾಲೆಂಜ್ ಗೆ ಚಾಲನೆ ನೀಡಿದ 'ರಾಜಕುಮಾರ'

  By Bharath Kumar
  |
  'ರಾಜರಥ' ಚಾಲೆಂಜ್ ಗೆ ಚಾಲನೆ ನೀಡಿದ 'ರಾಜಕುಮಾರ' | Filmibeat Kannada

  'ರಂಗಿತರಂಗ' ಚಿತ್ರದ ನಂತರ ಭಂಡಾರಿ ಬ್ರದರ್ಸ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ 'ರಾಜರಥ' ಸಿನಿಮಾ ಮುಂದಿನವಾರ ರಾಜ್ಯಾದಂತ್ಯ ತೆರೆಕಾಣುತ್ತಿದೆ. ಈ ಮಧ್ಯೆ 'ಮೈರಾಜರಥ' ಎಂಬ ವಿಭಿನ್ನ ಚಾಲೆಂಜ್ ಒಂದನ್ನ ಚಿತ್ರತಂಡ ಹಮ್ಮಿಕೊಂಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದ್ದಾರೆ.

  'ಮೈರಾಜರಥ' ಚಾಲೆಂಜ್ ಗೆ ಚಾಲನೆ ನೀಡಿರುವ ಅಪ್ಪು ತಮ್ಮ ಸೈಕಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಿಮ್ಮ ವಾಹನದ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿ #myrajaratha ಎಂಬ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿ. ಹೀಗೆ ಮಾಡಿದ 10 ಅದೃಷ್ಟಶಾಲಿಗಳಿಗೆ ಎರಡೆರಡು ಟಿಕೆಟ್ ಉಚಿತವಾಗಿ ನೀಡಲಾಗುತ್ತೆ. ಈ ಅದೃಷ್ಟಶಾಲಿಗಳು ಮಾರ್ಚ್ 22 ರಂದು 'ರಾಜರಥ' ಸೆಲೆಬ್ರಿಟಿ ಶೋನಲ್ಲಿ ಸಿನಿತಾರೆಯರ ಜೊತೆ ಸಿನಿಮಾ ನೋಡಬಹುದು.

  ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!

  ಅನೂಪ್ ಭಂಡಾರಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿದ್ದು, ಅವಂತಿಕಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ತಮಿಳು ನಟ ಆರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರವಿಶಂಕರ್ ಬಹುಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ.

  ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್

  ಈಗಾಗಲೇ ಟ್ರೈಲರ್ ಮತ್ತು ಹಾಡಿನ ಮೂಲಕ ಗಮನ ಸೆಳೆದಿರುವ 'ರಾಜರಥ' ಮಾರ್ಚ್ 23 ರಂದು ರಾಜರಥ ಸಿನಿಮಾ ತೆರೆಕಾಣುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ತಯಾರಾಗಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ಜಾನಿ ಮಾಸ್ಟರ್ ಮತ್ತು ಬೋಸ್ಕೋ ಕೇಸರ್ ಕ್ಯಾಮರಾ ನಿರ್ವಹಿಸಿದ್ದಾರೆ.

  English summary
  Powerstar Puneeth Rajkumar has started 'My Rajaratha' challenge by posing with his Rajaratha (cycle). Post a pic with your favorite vehicle with #MyRajaratha & 10 lucky winners get 2 tickets each to the celebrity premiere show on Mar 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X