»   » ಮಲಯಾಳಂನಲ್ಲಿ ಮೋಡಿ ಮಾಡಲಿದೆ ಪುನೀತ್ 'ಮೈತ್ರಿ'

ಮಲಯಾಳಂನಲ್ಲಿ ಮೋಡಿ ಮಾಡಲಿದೆ ಪುನೀತ್ 'ಮೈತ್ರಿ'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಚಿತ್ರ 'ಮೈತ್ರಿ'. ಈ ಸೂಪರ್ ಹಿಟ್ ಕನ್ನಡ ಸಿನಿಮಾ ಈಗ ಮಾಲಿವುಡ್ ಬೆಳ್ಳಿತೆರೆಗೆ ಅಪ್ಪಳಿಸುವುದಕ್ಕೆ ಅಣಿಯಾಗುತ್ತಿದೆ.

ಹೌದು, ಕರ್ನಾಟಕದಲ್ಲಿ 50 ದಿನಗಳ ಪ್ರದರ್ಶನ ಕಂಡ 'ಮೈತ್ರಿ' ಸಿನಿಮಾ ಈಗ 'ಮೈ ಹೀರೋ ಮೈತ್ರಿ' ಆಗಿ ಮಲಯಾಳಂನಲ್ಲಿ ಬಿಡುಗಡೆ ಆಗುವುದಕ್ಕೆ ರೆಡಿಯಾಗುತ್ತಿದೆ. ಈ ಮೂಲಕ ಮಾಲಿವುಡ್ ಅಂಗಳಕ್ಕೂ ಅಪ್ಪು ಕಾಲಿಡುತ್ತಿದ್ದಾರೆ.


Puneeth Rajkumar-Mohan Lal starrer Mythri to release in Malayalam

ಹೇಳಿ ಕೇಳಿ ನಟ ಮೋಹನ್ ಲಾಲ್, ಮಾಲಿವುಡ್ ಸೂಪರ್ ಸ್ಟಾರ್. 'ಮೈತ್ರಿ' ಚಿತ್ರದಲ್ಲಿ ನಟಿಸುವುದಕ್ಕೆ ಮೋಹನ್ ಲಾಲ್ ಒಪ್ಪಿಕೊಂಡಾಗಲೇ ಮಲಯಾಳಂನಲ್ಲಿ ಸಿನಿಮಾ ತಯಾರು ಮಾಡುವ ಪ್ಲಾನ್ ಆಗಿತ್ತು. ಅದರಂತೆ 'ಮೈತ್ರಿ' ದ್ವಿಭಾಷೆಯಲ್ಲಿ ಸಿದ್ಧವಾಯ್ತು. [ಚಿತ್ರ ವಿಮರ್ಶೆ: ಬಿಂದಾಸ್ ಐತ್ರಿ ಪುನೀತ್ 'ಮೈತ್ರಿ']


ಅತಿಥಿ ಪಾತ್ರಗಳಲ್ಲಿ ಕೊಂಚ ಬದಲಾವಣೆ ಬಿಟ್ಟರೆ, 'ಮೈ ಹೀರೋ ಮೈತ್ರಿ' ಕನ್ನಡದ 'ಮೈತ್ರಿ'ಕ್ಕಿಂತ ಭಿನ್ನ ಇಲ್ಲ. ಇಲ್ಲಿಯವರೆಗೂ ಪುನೀತ್ ಅಭಿನಯದ ಚಿತ್ರಗಳು ಮಲಯಾಳಂನಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದ್ದವು. ಆದ್ರೆ, 'ಮೈ ಹೀರೋ ಮೈತ್ರಿ' ಅಪ್ಪು ಅಭಿನಯದ ಮೊದಲ ಮಲಯಾಳಂ ಸಿನಿಮಾ. ['ಮೈತ್ರಿ' ಚಿತ್ರದ ನಿರ್ದೇಶಕ ಗಿರಿರಾಜ್ ವಿಶೇಷ ಸಂದರ್ಶನ]


ಸದ್ಯಕ್ಕೆ ರಿಲೀಸ್ ಗೆ ರೆಡಿಯಾಗಿರುವ 'ಮೈ ಹೀರೋ ಮೈತ್ರಿ' ಸೆನ್ಸಾರ್ ಅಂಗಳಕ್ಕೆ ತಲುಪಿದೆ. ಬಹುಬೇಗ ಸೆನ್ಸಾರ್ ಸೆರ್ಟಿಫಿಕೇಟ್ ಸಿಕ್ಕರೆ ಏಪ್ರಿಲ್ 24 ರಂದು, ಇಲ್ಲ ಕೊಂಚ ತಡವಾದರೆ ಮೇ 1 ರಂದು 'ಮೈ ಹೀರೋ ಮೈತ್ರಿ' ಬಿಡುಗಡೆ ಮಾಡಲು ನಿರ್ಮಾಪಕ ಎನ್.ಎಸ್.ರಾಜ್ ಕುಮಾರ್ ಓಡಾಡುತ್ತಿದ್ದಾರೆ. (ಏಜೆನ್ಸೀಸ್)

English summary
Puneeth Rajkumar and Mohan Lal starrer 'Mythri' is now set to be released as 'My Hero Mythri' in Malayalam. Producer NS Rajkumar and the rest of the team are headed to Trivandrum to get film censored.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada