»   » ಪವರ್ ಸ್ಟಾರ್ ಪುನೀತ್ ರಾಜ್ ಹೊಸ ಚಿತ್ರ ರಣವಿಕ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಹೊಸ ಚಿತ್ರ ರಣವಿಕ್ರಮ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಗೂಗ್ಲಿ' ಎಸೆಯಲು ಪವನ್ ಒಡೆಯರ್ ಸಿದ್ಧರಾಗಿದ್ದಾರೆ. ಸದ್ಯಕ್ಕೆ ಪುನೀತ್ ಅವರು 'ನಿನ್ನಿಂದಲೇ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಯುಎಸ್ ನಲ್ಲಿದ್ದಾರೆ.

ಅಲ್ಲಿಂದ ಅವರು ಹಿಂತಿರುಗಿದ ಕೂಡಲೆ ಎರಡು ಚಿತ್ರಗಳಿಗೆ ಸಹಿ ಹಾಕಲಿದ್ದಾರೆ ಎಂಬ ಸುದ್ದಿ ಇದೆ. ಒಂದು ದುನಿಯಾ ಸೂರಿ ಜೊತೆಗಿನ ಚಿತ್ರ. ಇನ್ನೊಂದು ಗೂಗ್ಲಿ, ಗೋವಿಂದಾಯ ನಮಃ ಚಿತ್ರದ ಯಶಸ್ವಿ ಸೂತ್ರಧಾರ ಪವನ್ ಒಡೆಯರ್ ಜೊತೆಗಿನದು.

Power Star Puneeth Rajkumar

ಪವನ್ ಆಕ್ಷನ್ ಕಟ್ ಹೇಳಲಿರುವ ಚಿತ್ರಕ್ಕೆ ರಣವಿಕ್ರಮ ಎಂದು ಹೆಸರಿಡಲಾಗಿದೆ. ಈಗಾಗಲೆ ಕಥೆಯನ್ನೂ ಪುನೀತ್ ಅವರಿಗೆ ಹೇಳಲಾಗಿದ್ದು ಓಕೆ ಎಂದಿದ್ದಾರಂತೆ. ಕೆಲ ತಿಂಗಳ ಹಿಂದೆ ರಾಘವೇಂದ್ರ ರಾಜ್ ಕುಮಾರ್ ಅವರೂ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರೆ.

ದುನಿಯಾ ಸೂರಿ ಚಿತ್ರಕ್ಕೂ ಪುನೀರ್ ಓಕೆ ಎಂದಿದ್ದು ಮೊದಲು ಆ ಚಿತ್ರವೇ ಸೆಟ್ಟೇರಲಿದೆ. ಅದಾದ ಬಳಿಕ ಪವನ್ ಒಡೆಯರ್ ಜೊತೆಗಿನ ಚಿತ್ರ ಆರಂಭ. ಪುನೀತ್ ಅವರು ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಇನ್ನು ದುನಿಯಾ ಸೂರಿ ಸಹ ಅಷ್ಟೇ. (ಏಜೆನ್ಸೀಸ್)

English summary
Power Star Puneeth Rajkumar next film titled as Ranavikrama with Pavan Wadeyar. Puneeth is currently busy shooting in the US for Ninnindale, but rumours about his future projects always do the rounds in Gandhinagar.
Please Wait while comments are loading...