twitter
    For Quick Alerts
    ALLOW NOTIFICATIONS  
    For Daily Alerts

    'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಅಪ್ಪು 'ಗಂಧದಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ!

    |

    'ಗಂಧದಗುಡಿ' ಚಿತ್ರ ಪ್ರೀ ರಿಲೀಸ್ ಈವೆಂಟ್ ಅರಮನೆ ಮೈದಾನದಲ್ಲಿ ಬಹಳ ಅದ್ಧೂರಿಯಾಗಿ ನಡೀತಿದೆ. ಕನ್ನಡ ಚಿತ್ರರಂಗದ ತಾರೆಯರ ಜೊತೆಗೆ ಪರಭಾಷೆಯ ಸೂಪರ್ ಸ್ಟಾರ್‌ಗಳು ಕೂಡ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಡ್ಯಾನ್ಸ್, ಗಾನಬಜಾನಾ ಮೂಲಕ ಕಾರ್ಯಕ್ರಮ ಕಳೆ ಕಟ್ಟಿದೆ. ಸಾವಿರಾರು ಸಂಖ್ಯೆ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಇದೇ ಸಿಎಂ ಬಸವರಾಜ ಬೊಮ್ಮಾಯಿ 'ಗಂಧದಗುಡಿ' ಚಿತ್ರಕ್ಕೆ ತೆರೆಗಿ ವಿನಾಯಿತಿ ಘೋಷಿಸಿದ್ದಾರೆ.

    ಅಪ್ಪುವನ್ನು ಲೋಹಿತ್ ಎನ್ನುತ್ತಿದ್ದೆ; ಅಪ್ಪುಗಿಂತ ನಾವು ಆ ನಟನ ಭಕ್ತರು ಎಂದ ಸುಧಾ ಮೂರ್ತಿಅಪ್ಪುವನ್ನು ಲೋಹಿತ್ ಎನ್ನುತ್ತಿದ್ದೆ; ಅಪ್ಪುಗಿಂತ ನಾವು ಆ ನಟನ ಭಕ್ತರು ಎಂದ ಸುಧಾ ಮೂರ್ತಿ

    ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆಗೆ ಬರುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾತನಾಡಿದ ಸಿಎಂ "ನಿಸರ್ಗ, ಅರಣ್ಯ, ಪ್ರಾಣಿಗಳೊಂದಿಗೆ ಚಿತ್ರಿಸಿರುವ ಸಿನಿಮಾ 'ಗಂಧದಗುಡಿ'. ಇದು ಕರ್ನಾಟಕದ ಸಸ್ಯ ಸಂಪತ್ತು, ಪ್ರಾಣಿ ಸಂಕುಲವನ್ನು ತೋರಿಸಿರುವ ಚಿತ್ರ. ಹಾಗಾಗಿ ಈ ಚಿತ್ರಕ್ಕೆ ಸರ್ಕಾರ ಖಂಡಿತ ತೆರಿಗೆ ವಿನಾಯಿತಿ ಘೋಷಿಸುತ್ತದೆ ಎಂದು ತಿಳಿಸಿದ್ದಾರೆ. ಅಪ್ಪು ಅವರಿಂದ ಸ್ಪೂರ್ತಿಗೆ ಒಳಗಾದ ಯುವ ಸಮುದಾಯವನ್ನು ನೋಡಿದಾಗ ಸಂತಸವಾಗುತ್ತಿದೆ. ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅಪ್ಪು ಬಹಳಷ್ಟು ವರ್ಷ ಬದುಕಿ ಬಾಳಬೇಕಿತ್ತು ಈ ನೋವು ಈಗಲೂ ಕಾಡುತ್ತಿದೆ." ಎಂದರು.

    ಇದೀಗ 'ಪುನೀತ್ ಪರ್ವ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಂತಸ ಹಾಗೂ ಹೆಮ್ಮೆ ತಂದಿದೆ. ನವೆಂಬರ್ ಒಂದರಂದು ಅಪ್ಪುಗೆ ಕರ್ನಾಟಕ ರತ್ನ ನೀಡಲಿದ್ದೇವೆ. ಅದು ಎಲ್ಲ ಯುವಕರಿಗೆ ಪ್ರೇರಣೆ ಎಂದು ಭಾವಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಲವು ದಿನಗಳಿಂದ ಅಭಿಮಾನಿಗಳು 'ಗಂಧದಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸುವಂತೆ ಮನವಿ ಮಾಡಿದ್ದರು. ಆ ಮೂಲಕ ಸಿನಿಮಾ ಸಾಕಷ್ಟು ಜನರನ್ನು ತಲುಪಬೇಕು ಎಂದು ಕೇಳಿಕೊಂಡಿದ್ದರು.

    ಅಪ್ಪುಗೆ ದೇವರ ಆಶೀರ್ವಾದ ಇತ್ತು: ಸಿಎಂ

    ಅಪ್ಪುಗೆ ದೇವರ ಆಶೀರ್ವಾದ ಇತ್ತು: ಸಿಎಂ

    ನಂತರ 'ಪುನೀತ ಪರ್ವ' ಕಾರ್ಯಕ್ರಮದ ವೇದಿಕೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದರು. "ಮನಸುಗಳು ಭಾವನಾತ್ಮಕವಾದಾಗ ಶಬ್ಧಗಳನ್ನು ಮಾತನಾಡಿದರೆ ಅದರ ತೂಕ ಕಮ್ಮಿ ಆಗುತ್ತದೆ. ಭಾವನೆಗಳನ್ನು ಭಾವನೆಗಳ ಜೊತೆ ಜೋಡಿಸುವುದೇ ಈ ಗಳಿಗೆ ಎಂದು ನಾನು ಹೇಳಲು ಇಚ್ಛೆಪಡುತ್ತೇನೆ. ಅಪ್ಪು ಅವರು ನಮ್ಮ ಜೊತೆಗೆ ಇದ್ದಾರೆ. ಪ್ರತಿಯೊಂದು ಕ್ಷಣ ಅವರು ನಮ್ಮನ್ನು ನೋಡುತ್ತಿರುತ್ತಾರೆ. ನಿಮ್ಮ ಅಭಿಮಾನವನ್ನು ನೋಡಿ ಅತ್ಯಂತ ಸಂತೋಷವನ್ನು ಪಡುತ್ತಾರೆ. ಒಬ್ಬ ಮನುಷ್ಯ ಇದ್ದಾಗ ಹೊಗಳುವುದು ಸಹಜ. ಅದರೆ ಇಲ್ಲದೇ ಇದ್ದಾಗ ನೆನಪು ಮಾಡಿಕೊಳ್ಳುವುದು ಆ ದೈವದ ಆಶಿರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ದೇವರ ಆಶಿರ್ವಾದ ಅಪ್ಪು ಅವರಲ್ಲಿ ಇತ್ತು ಎಂದು ಹೇಳಲು ಇಚ್ಛೆ ಪಡುತ್ತೇನೆ."

    ಅಣ್ಣಾವ್ರನ್ನು ನೆನಪು ಮಾಡಿಕೊಳ್ಳಬೇಕು

    ಅಣ್ಣಾವ್ರನ್ನು ನೆನಪು ಮಾಡಿಕೊಳ್ಳಬೇಕು

    "ನಮ್ಮ ಅಣ್ಣಾವ್ರು ಆದಂತಹ ರಾಜ್‌ಕುಮಾರ್ ಅವರನ್ನು ಈ ಸಂದರ್ಭದಲ್ಲಿ ನೆನಪುಮಾಡಿಕೊಳ್ಳಲೇಬೇಕು. ರಾಜ್‌ಕುಮಾರ್ ಅವರ ಎಲ್ಲಾ ಗುಣ ಧರ್ಮಗಳನ್ನು ನೂರಕ್ಕೆ ನೂರು ಹೊಂದಿದ್ದವರು ನಮ್ಮ ಪುನೀತ್ ರಾಜ್‌ಕುಮಾರ್. ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ಆ ಒಂದು ನಯ ವಿನಯ ಒಂದು ಕ್ಷಣವೂ ಅಪ್ಪು ಮರೆತ್ತಿರಲಿಲ್ಲ. ಒಂದೇ ಒಂದು ವಿಚಾರ ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಹಳ ದೊಡ್ಡ ಹೆಸರು ಮಾಡಿದ ಬಾಲ ನಟನಾಗಿ. ಬಹಳ ಸಂತೋಷ ಆಗಿತ್ತು ನಮಗೆಲ್ಲ. ಆದರೆ ಅಷ್ಟೇ ಸಣ್ಣ ವಯಸ್ಸಿನಲ್ಲಿ ನಮ್ಮನ್ನೆಲ್ಲಾ ಬಿಟ್ಟು ಹೋಗ್ತಾನೆ ಅಂದಾಗ ದುಃಖವನ್ನು ತಡೆಯಲು ಆಗಲಿಲ್ಲ."

    ಅಣ್ಣಾವ್ರ ಕುಟುಂಬಕ್ಕೆ ನನ್ನ ಅಭಿನಂದನೆ

    ಅಣ್ಣಾವ್ರ ಕುಟುಂಬಕ್ಕೆ ನನ್ನ ಅಭಿನಂದನೆ

    "ಎಲ್ಲಾ ಶ್ರೇಷ್ಠ ವ್ಯಕ್ತಿಗಳು ಅಲ್ಪ ಆಯು. ಜಗತ್ತಿನಲ್ಲಿ ಬಹಳ ದೊಡ್ಡ ಬದಲಾವಣೆ ಮಾಡಿದವರೆಲ್ಲಾ ಸಣ್ಣ ವಯಸ್ಸಿನಲ್ಲಿ ಜಗತ್ತನ್ನು ಬಿಟ್ಟಿದ್ದಾರೆ. ಯಾಕೆಂದರೆ ಅತ್ಯಮೂಲ್ಯವಾಗಿದ್ದು ಕಡಿಮೆ ಸಮಯ ಇರುತ್ತದೆ. ಹೀಗಾಗಿ ನೆನಪಿನ ಮುಖಾಂತರ ಅದನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘಣ್ಣ ಅವರಿಗೆ ನಾನು ಹೃದಯತುಂಬಿದಂತಹ ಅಭಿನಂದನೆ ಸಲ್ಲಿಸುತ್ತೇನೆ. ಅಪ್ಪು ನೆನಪನ್ನು ಇಷ್ಟು ವಿಜೃಂಬಣೆಯಾಗಿ ಮಾಡಿರುವುದು ನೋಡಿದರೆ ರಾಜ್‌ ಕುಟುಂವಕ್ಕೆ ಎಷ್ಟು ದೊಡ್ಡ ಹೃದಯ ಶ್ರೀಮಂತಿಕೆ ಇದೆ ಎನ್ನುವುದು ಗೊತ್ತಾಗುತ್ತದೆ."

    'ಗಂಧದಗುಡಿ' ಸಿನಿಮಾ ಇವತ್ತಿಗೆ ಪ್ರಸ್ತುತ

    'ಗಂಧದಗುಡಿ' ಸಿನಿಮಾ ಇವತ್ತಿಗೆ ಪ್ರಸ್ತುತ

    "ಗಂಧದಗುಡಿ ನಾವು ಎಂದು ಮರೆಯಲು ಸಾಧ್ಯವಿಲ್ಲ. ಕನ್ನಡ ನಾಡು ಹಾಗೂ ಗಂಧದಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ಗಂಧದಗುಡಿ ವಿಚಾರ ಇಟ್ಟುಕೊಂಡು ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿರುವ ಈ ಸಿನಿಮಾ ಇವತ್ತಿಗೆ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಉಳಿಸಿವುದು ಬಹಳ ಅವಶ್ಯಕತೆ ಇದೆ. ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ಹಿರಿಯರು ಬಿಟ್ಟು ಹೋದಂತೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ನಾವು ಕಳ್ಳತನ ಮಾಡಿದಂತಾಗುತ್ತದೆ. ಈ ಸಿನಿಮಾ ದಂತಕಥೆ ಆಗುತ್ತದೆ. ಅಪ್ಪು ಕೂಡ ದಂತಕಥೆ, ಈ ಸಿನಿಮಾ ಕೂಡ ದಂತಕಥೆ ಆಗುತ್ತದೆ ಎನ್ನುವ ಮಾತನ್ನು ಹೇಳುತ್ತೇನೆ" ಎಂದರು.

    ನವೆಂಬರ್ 1ರಂದು 'ಕರ್ನಾಟಕ ರತ್ನ' ಪ್ರದಾನ

    ನವೆಂಬರ್ 1ರಂದು 'ಕರ್ನಾಟಕ ರತ್ನ' ಪ್ರದಾನ

    ಎಲ್ಲಾ ಅಭಿಮಾನಿ ಬಂಧುಗಳಿಗೆ ನವೆಂಬರ್ 1, ರಾಜ್ಯೋತ್ಸವ ದಿನದಂದು ಕರ್ನಾಟಕದ ಅತ್ಯಂತ ಶ್ರೇಷ್ಟವಾಗಿರುವಂತಹ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನಮ್ಮ ಸರ್ಕಾರ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡುತ್ತಿದೆ. ವಿಧಾನಸೌಧದ ಮುಂಭಾಗದ ಮಹಾದ್ವಾರದ ಮೆಟ್ಟಿಲುಗಳ ಮೇಲೆ ಅತ್ಯಂತ ಗೌರವಪೂರ್ವಕವಾಗಿ ಕೊಡುತ್ತಿದ್ದೇವೆ. ನಾನು ನಿಮ್ಮೆಲ್ಲರಿಗೂ ಆಹ್ವಾನ ಕೊಡುತ್ತಿದ್ದೇನೆ. ಈ ಮೂಲಕ ಸಮಸ್ತ ನಾಡಿನ ಕನ್ನಡ ಜನತೆಗೆ ಆಹ್ವಾನ ಕೊಡುತ್ತಿದ್ದೇನೆ ತಾವೆಲ್ಲಾ ಬರಬೇಕು, ಕರ್ನಾಟಕ ರತ್ನವನ್ನು ನೋಡಬೇಕು. ಅಂದು ಕರ್ನಾಟಕ ರತ್ನಕ್ಕೆ ಪ್ರಶಸ್ತಿ ಕೊಡುತ್ತಿದ್ದೇವೆ ಎಂದು ಮನವಿ ಮಾಡಿಕೊಳ್ಳುತ್ತೇವೆ" ಎಂದು ಮನವಿ ಮಾಡಿಕೊಂಡರು.

    English summary
    Puneeth Rajkumar starrer Gandhada gudi declared tax-free in Karnataka, announces CM Basavaraj Bommai. Gandhada Gudi was a dream project, which was envisioned by Puneeth Rajkumar with wildlife photographer and filmmaker, Amoghavarsha. Know More.
    Friday, October 21, 2022, 21:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X