»   » ಮಳೆ ಲೇಟು ಜುಲೈಗೂ ಡೌಟು ಅಂತಾರೆ ಆರ್ ಚಂದ್ರು

ಮಳೆ ಲೇಟು ಜುಲೈಗೂ ಡೌಟು ಅಂತಾರೆ ಆರ್ ಚಂದ್ರು

Posted By: ಜೀವನರಸಿಕ
Subscribe to Filmibeat Kannada

ಲವ್ಲೀ ಸ್ಟಾರ್ ಪ್ರೇಮ್, ಬಬ್ಲೀ ಬ್ಯೂಟಿ ಅಮೂಲ್ಯ ಅಭಿನಯದ 'ಮಳೆ' ಚಿತ್ರ ಮೇ ತಿಂಗಳಿಂದಲೂ ಡೇಟ್ಗಳನ್ನ ಮುಂದೂಡ್ತಾನೇ ಇದೆ. ಆದ್ರೆ ಮಳೆಗಾಲ ಶುರುವಾದಮೇಲಾದ್ರೂ ಥಿಯೇಟರ್ನಲ್ಲಿ ಮಳೆ ಸುರಿಯುತ್ತಾ ಅಂದ್ರೆ ಅದೂ ಡೌಟು ಅಂತಿದ್ದಾರೆ ಚಂದ್ರು!

ಸದ್ಯ ಮಳೆ ನಿರ್ಮಾಪಕ ಆರ್ ಚಂದ್ರು ತೆಲುಗಿನಲ್ಲಿ ಚಾರ್ಮಿನಾರ್ ಗೆದ್ದಿರೋ ಖುಷಿಯಲ್ಲಿದ್ದಾರೆ. ಸೂಪರ್ಸ್ಟಾರ್ ಮಹೇಶ್ ಬಾಬು ಅವ್ರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಥಿಯೇಟರ್ನಲ್ಲಿ ಮಳೆ ಸುರಿಯುತ್ತಾ ಅಂದ್ರೆ ನೋ ಅಂದಿದ್ದಾರೆ. [ಆರ್.ಚಂದ್ರು ಪ್ರೇಮಕಾವ್ಯಕ್ಕೆ 'ಪ್ರಿನ್ಸ್' ಮಹೇಶ್ ಫಿದಾ]

R Chandru delays release of Kannada movie Male

ಈಗಿರೋ ರನ್ನ, ವಜ್ರಕಾಯ ಇನ್ನೊಂದೆರೆಡು ವಾರ ಥಿಯೇಟರ್ ಬಿಡಲ್ಲ. ಇದಾದ ನಂತ್ರ ಬಾಹುಬಲಿ ಬಂದ್ರೆ ಸುನಾಮಿ ಬಂದ ಹಾಗಿರುತ್ತೆ. ಥಿಯೇಟರ್ಗಳನ್ನ ನುಂಗಿ ನೀರು ಕುಡಿಯುತ್ತೆ. ಒಳ್ಳೆ ಸಿನಿಮಾನ ಯಾಕೆ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಸೋದು? ಸ್ವಲ್ಪ ಟೈಂ ತೊಗೊಂಡು ನಿಧಾನಕ್ಕೇ ತೆರೆಗೆ ತರ್ತೀನಿ ಅಂತ ಜಾಣ ನಿರ್ಧಾರ ಮಾಡಿದ್ದಾರೆ ಚಂದ್ರು.

ಚಂದ್ರು ಅವರ ಲೆಕ್ಕಾಚಾರದ ಪ್ರಕಾರ ಮಳೆ ಬರೋದು ಆಗಸ್ಟ್ ವೇಳೆಗೆ, ಬಹುಶಃ ಆಷಾಢ ಮಾಸ ಮುಗಿದ ಮೇಲೆಯೆ. ಇನ್ನೊಂದು ಮಾಹಿತಿ ಅಂದ್ರೆ ಮಳೆ ಇನ್ನೂ ಸೆನ್ಸಾರೇ ಆಗಿಲ್ಲ. ಸೆನ್ಸಾರ್ಗೆ ರಿಸ್ಕ್ ತೆಗೆದುಕೊಂಡಿಲ್ಲ ಅಂದ್ರೆ ರಿಲೀಸ್ ಲೇಟಾಗೋದು ಪಕ್ಕಾ. [ಕಣ್ಣರಳಿಸುವ 'ಬಾಹುಬಲಿ' ಮೊದಲ ಟೀಸರ್]

English summary
Director R Chandru has intensionally delayed release of his ambitious movie Male, starring Lovely star Prem Kumar and bubbly actress Amoolya. He says it will be released in August. He thinks why should he take risk when Ranna and Vajrakaya are running successfully and Baahubali yet to be released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada