»   » ಗುರುಪ್ರಸಾದ್, ಯೋಗರಾಜ್ ಭಟ್ ಬಗ್ಗೆ ರಾಘಣ್ಣ ಹೇಳಿದ್ದೇನು?

ಗುರುಪ್ರಸಾದ್, ಯೋಗರಾಜ್ ಭಟ್ ಬಗ್ಗೆ ರಾಘಣ್ಣ ಹೇಳಿದ್ದೇನು?

Posted By:
Subscribe to Filmibeat Kannada
Producer Raghavendra Rajkumar talking high about Yogaraj Bhat and Guruprasad
ಬಿಡುಗಡೆಗೆ ಸಿದ್ದವಾಗಿರುವ ಪುನೀತ್ ರಾಜಕುಮಾರ್, ಯೋಗಿ, ಭಾವನಾ ಮುಖ್ಯಭೂಮಿಕೆಯಲ್ಲಿರುವ ಯಾರೇ ಕೂಗಾಡಲಿ ಚಿತ್ರದ ಬಗ್ಗೆ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ.

ಅಪ್ಪಾಜಿಯವರ ಚಿತ್ರದ ಹಾಡಿನ ಜನಪ್ರಿಯ ಗೀತೆಯ ಸಾಲೆಂದು ನಾವು ಚಿತ್ರಕ್ಕೆ ಯಾರೇ ಕೂಗಾಡಲಿ ಎಂದು ಹೆಸರಿಟ್ಟಿಲ್ಲ. ಚಿತ್ರಕ್ಕೆ ಹೆಸರು ಇಟ್ಟವರು ನಮ್ಮ ಚಿತ್ರಕ್ಕೆ ಸಂಭಾಷಣೆ ಬರೆದ ಗುರುಪ್ರಸಾದ್ ಅವರು.

ಗುರುಪ್ರಸಾದ್ ಅವರಿಗೆ ಕಥೆ ಮತ್ತು ಚಿತ್ರಕಥೆ ಹೇಳಿದರಷ್ಟೇ ಸಾಕು. ನಮ್ಮ ನಾಡಿನ ಸೊಗಡಿಗೆ ತಕ್ಕಂತೆ ಸಂಭಾಷಣೆ ಬರೆಯುತ್ತಾರೆ. ಹುಡುಗರು ಚಿತ್ರದ ಹಾಗೆ ಈ ಚಿತ್ರಕ್ಕೂ ಅತ್ಯುತ್ತಮ ಸಂಭಾಷಣೆ ಗುರುಪ್ರಸಾದ್ ನೀಡಿದ್ದಾರೆ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.

ಇನ್ನು ಯೋಗರಾಜ್ ಭಟ್ ಅವರ ಬಗ್ಗೆ ಹೇಳುವುದಾದರೆ ಅವರಿಗೆ ಸರಸ್ವತಿ ಒಲಿದಿದ್ದಾರೆ. ಮಾಸ್ ಅಥವಾ ಕ್ಲಾಸ್ ಸನ್ನಿವೇಶಕ್ಕೆ ಅನುಗುಣವಾಗಿ ಅವರು ಬರೆಯುವ ಸಾಹಿತ್ಯ ಎಲ್ಲಾ ಜನರೇಷನಿನವರು ತಲೆಬಾಗಲೇ ಬೇಕು.

ಮುಂಗಾರು ಮಳೆಯಿಂದ ಹಿಡಿದು ಯಾರೇ ಕೂಗಾಡಲಿ ಚಿತ್ರದವರೆಗೆ ಅವರ ಬರೆದ ಸಾಹಿತ್ಯ ಎಲ್ಲಾ ವರ್ಗದ ಜನರನ್ನು ಆಕರ್ಷಿಸುವಂತದ್ದು. ಯಾರೇ ಕೂಗಾಡಲಿ ಚಿತ್ರದ ಒಂದು ಹಾಡಿಗೆ ಭಟ್ರದ್ದೇ ಸಾಹಿತ್ಯ, ಈ ಹಾಡು ಈಗಾಗಲೇ ಹಿಟ್ ಆಗಿದೆ ಎಂದು ರಾಘಣ್ಣ, ಯೋಗರಾಜ್ ಭಟ್ ಅವರನ್ನು ಮನಸಾರೆ ಹೊಗಳಿದ್ದಾರೆ.

ಮೂಲ ಚಿತ್ರದ ನಿರ್ದೇಶಕರಾದ ಸಮುದ್ರಖನಿಯವರೇ ಯಾರೇ ಕೂಗಾಡಲಿ ಚಿತ್ರಕ್ಕೂ ನಿರ್ದೇಶಕರು. ಮೂಲ ಚಿತ್ರದಲ್ಲಿದ್ದ ಫೋಟೊಗ್ರಾಫರ್ ಸುಕುಮಾರ್ ಅವರನ್ನು ಬಿಟ್ಟರೆ ಎಲ್ಲಾ ಕನ್ನಡದ ಕಲಾವಿದರು, ತಂತ್ರಜ್ಞರು ಯಾರೇ ಕೂಗಾಡಲಿ ಚಿತ್ರದಲ್ಲಿದ್ದಾರೆ ಎಂದು ರಾಘಣ್ಣ ಹೇಳಿದ್ದಾರೆ.

ಯಾರೇ ಕೂಗಾಡಲಿ ಚಿತ್ರ ಗುರುವಾರದಂದು (ಡಿ 20) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಯಾರೇ ಕೂಗಾಡಲಿ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

English summary
Producer Raghavendra Rajkumar said, Yogaraj Bhat and Guruprasad is a great asset to industry. Puneeth Rajkumar, Yogish and Bhavana starrer 'Yare Kugadali' movie releasing on December 20th. 
Please Wait while comments are loading...