For Quick Alerts
  ALLOW NOTIFICATIONS  
  For Daily Alerts

  ಮಾತು ತಪ್ಪಿದ ರಾಘಣ್ಣ, ಶಿವಣ್ಣ: ಅದು ಅಪ್ಪು ಮೇಲಿನ ಪ್ರೀತಿಯಿಂದ!

  |

  'ಜೇಮ್ಸ್' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಆದ ಕಾರಣ ಚಿತ್ರರಂಗದ ಬಹುತೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 'ಜೇಮ್ಸ್' ಚಿತ್ರದ ಈ ಕಾರ್ಯಕ್ರಮವನ್ನು ಎಷ್ಟೇ ಅದ್ದೂರಿಯಾಗಿ ಮಾಡಿದರು, ಅಪ್ಪು ಇಲ್ಲದ ಅಂಧಕಾರ ಮಾತ್ರ ಎಲ್ಲರನ್ನೂ ಕಾಡುತ್ತಿತ್ತು.

  Recommended Video

  ಪುನೀತ್ ರಾಜ್‌ಕುಮಾರ್ ಇನ್ಮುಂದೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್!

  'ಜೇಮ್ಸ್' ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ. 'ಜೇಮ್ಸ್' ರಿಲೀಸ್ ಹತ್ತಿರ ಆಗುತ್ತಿದೆ. ಹಾಗಾಗಿ ಚಿತ್ರದ ಬಗ್ಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಚಿತ್ರತಂಡವನ್ನು ಹೊರತು ಪಡಿಸಿ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇದ್ದಾರೆ.

  ದಾಖಲೆ ಬರೀತಿದೆ 'ಜೇಮ್ಸ್': ಬೆಳಗ್ಗಿನ 6ಗಂಟೆ ಶೋ ಟಿಕೆಟ್ ಸೋಲ್ಡ್ ಔಟ್ದಾಖಲೆ ಬರೀತಿದೆ 'ಜೇಮ್ಸ್': ಬೆಳಗ್ಗಿನ 6ಗಂಟೆ ಶೋ ಟಿಕೆಟ್ ಸೋಲ್ಡ್ ಔಟ್

  ಸದ್ಯ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದ್ದು, ಸಾಕಷ್ಟು ವಿಚಾರಗಳನ್ನು ಚಿತ್ರತಂಡ ಮತ್ತು ರಾಜ್‌ ಕುಟುಂಬ ಹಂಚಿಕೊಂಡಿದೆ. ಆದರೆ ವೇದಿಕೆ ಮೇಲೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಮಾತನಾಡುವುದನ್ನು ಕಂಡು ಎಲ್ಲರ ಕಣ್ಣು ಒದ್ದೆ ಆದವು. ಆದರೆ ಅವರು ಕೊಟ್ಟ ಮಾತು ತಪ್ಪುವಂತೆ ಮಾಡಿತು ಪುನೀತ್ ರಾಜ್‌ಕುಮಾರ್ ಮೇಲಿನ ಪ್ರೀತಿ.

  'ಜೇಮ್ಸ್' ಪ್ರಿ ರಿಲೀಸ್ ಕಾರ್ಯಕ್ರಮ: ವೇದಿಕೆ ಮೇಲೆ ಶಿವಣ್ಣ ಭಾವುಕ 'ಜೇಮ್ಸ್' ಪ್ರಿ ರಿಲೀಸ್ ಕಾರ್ಯಕ್ರಮ: ವೇದಿಕೆ ಮೇಲೆ ಶಿವಣ್ಣ ಭಾವುಕ

  ನಾನು ಅಪ್ಪು ಹುಡುಕಿಕೊಂಡು ಹೋಗ್ತಿನಿ ಎಂದ ರಾಘವೇಂದ್ರ ರಾಜ್‌ಕುಮಾರ್!

  ನಾನು ಅಪ್ಪು ಹುಡುಕಿಕೊಂಡು ಹೋಗ್ತಿನಿ ಎಂದ ರಾಘವೇಂದ್ರ ರಾಜ್‌ಕುಮಾರ್!

  'ಜೇಮ್ಸ್' ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ರಾಘವೆಂದ್ರ ರಾಜ್‌ಕುಮಾರ್ ನಾನು ಭಾವುಕ ಆಗಬಾರದು ಎಂದು ಕೊಂಡಿದ್ದೇನೆ ಎಂದು ಹೇಳುತ್ತಲೆ ಮಾತು ಶುರು ಮಾಡಿದರು. "ನನಗೆ ಈಗ ಅನಿಸಿದ್ದು, ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನು ನಿಲ್ಲಿಸಿಬಿಟ್ಟ, ನಾನ್ ನೋಡಿ ಕುಂಟುತ್ತಾ ಓಡಾಡುತ್ತಿದ್ದೇನೆ. ನಾನು ಇನ್ನೂ ಇದೀನಿ ಅಂದರೆ ಎಷ್ಟು ಬೇಜಾರ್ ಆಗುತ್ತದೆ. ನನಗೆ ಸ್ಟ್ರೋಕ್ ಆಗಿ, ಹಾರ್ಟ್ ಪ್ರಾಬ್ಲಮ್ ಆದರೂ ಇದೀನಿ. ಇದನೆಲ್ಲಾ ನೋಡಿದಾಗ ಯಾಕೆ ಇರಬೇಕು ಅನಿಸಿತು. ನಾನು ಅವನನ್ನು ಹುಡುಕಿಕೊಂಡು ಹೋಗ್ತೀನಿ, ನಾನು ಅವನು ಇರುವ ಕಡೆಗೆ ಹೋಗ್ತೀನಿ. ನಾನು ಹೊರಡೋಕೆ ರೆಡಿ." ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಅವರಿಗೆ ದುಖಃ ತಡೆಯಲು ಆಗಲೇ ಇಲ್ಲ. ಕೈ ನಡುಕ ಬಂದಿಂತ್ತು. ಹಾಗಾಗಿ ಮಾತು ಅರ್ಧಕ್ಕೆ ಬಿಟ್ಟು ವೇದಿಕೆ ಮೇಲಿಂದ ಕೆಳಗೆ ಇಳಿದರು.

  ಇನ್ನು ಮುಂದೆ ಅಳುವುದಿಲ್ಲ ಎಂದಿದ್ದ ರಾಘವೇಂದ್ರ ರಾಜ್‌ಕುಮಾರ್!

  ಇನ್ನು ಮುಂದೆ ಅಳುವುದಿಲ್ಲ ಎಂದಿದ್ದ ರಾಘವೇಂದ್ರ ರಾಜ್‌ಕುಮಾರ್!

  ಅಪ್ಪು ಅಗಲಿಕೆಯ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಇಬ್ಬರು, ಅಪ್ಪು ಅವರ ಬಗ್ಗೆ ಎಲ್ಲೇ ಮಾತನಾಡಿದರು ಭಾವುಕರಾಗಿ ಬಿಡುತ್ತಿದ್ದರು. ಸಾಮಾನ್ಯ ಜನರು ಮತ್ತು ಅಭಿಮಾನಿಗಳಿಗೆ ಅಪ್ಪು ಇಲ್ಲದ ನೋವು ಕಾಡುತ್ತಿದೆ. ಇನ್ನು ಸಹೋದರರಿಗೆ ಆ ನೋವು ಗಾಢವಾಗಿ ಕಾಡುತ್ತದೆ. ಆದರೆ ಈ ಹಿಂದೆ ವೇದಿಕೆ ಮೇಲೆ ಮಾತನಾಡಿದ ರಾಘಣ್ಣ ಇನ್ನು ಮುಂದೆ ಅಳುವುದಿಲ್ಲ, ಅಪ್ಪು ನಮ್ಮೊಂದಿಗೆ ಇದ್ದಾನೆ ಎಂದಿದ್ದರು. ಆದರೆ 'ಜೇಮ್ಸ್' ಕಾರ್ಯಕ್ರಮದಲ್ಲಿ ದುಖಃ ತಡೆಯಲಾಗದೇ ಭಾವುಕರಾದರು.

  ಶಿವಣ್ಣನನ್ನು ತಬ್ಬಿ ಕಣ್ಣೀರು ಹಾಕಿದ ರಾಘಣ್ಣ!

  ಶಿವಣ್ಣನನ್ನು ತಬ್ಬಿ ಕಣ್ಣೀರು ಹಾಕಿದ ರಾಘಣ್ಣ!

  ರಾಘಣ್ಣ ವೇದಿಕೆ ಮೇಲೆ ನಿಂತು, ನಾನು ಅಪ್ಪು ಬಳಿಗೆ ಹೋಗೋಕೆ ತಯಾರಿದ್ದೇನೆ ಎಂದು ಅಳುತ್ತಿದ್ದರೆ, ವೇದಿಕೆ ಮುಂಭಾಗದಲ್ಲಿ ಕುಳಿತುಕೊಂಡಿದ್ದ, ಶಿವರಾಜ್ ಕುಮಾರ್ ಅವರು ಅಳು ತಡೆಯಲಾರದೆ, ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ನಂತರ ಶಿವರಾಜ್ ಕುಮಾರ್ ಅವರು ವೇದಿಗೆ ಮೇಲೆ ಬಂದಾಗಲೂ ಕಣ್ಣೀರು ನಿಲ್ಲಲೇ ಇಲ್ಲ. ಅಳುತ್ತಲೆ ಮಾತು ಆರಂಭಿಸಿದರು. ಈ ವೇಳೆ ರಾಘಣ್ಣ, ಶಿವಣ್ಣನನ್ನು ತಬ್ಬಿಕೊಂಡು ಅಸಮಾಧಾನ ಮಾಡಿ ವೇದಿಕೆ ಇಂದ ಕೆಳಗಿಳಿದರು.

  ಜೇಮ್ಸ್ ಜಾತ್ರೆಗೆ ದಿನಗಣನೆ!

  ಜೇಮ್ಸ್ ಜಾತ್ರೆಗೆ ದಿನಗಣನೆ!

  ಪುನೀತ್ ಅಗಲಿಕೆ ಹಿನ್ನೆಲೆ ಕಾರ್ಯಕ್ರಮದಲ್ಲಿ ನೋವಿನ ಕ್ಷಣಗಳೇ ಹೆಚ್ಚಿದ್ದವು. ಇದು ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ, ಹಾಗಾಗಿ ಸಂಭ್ರಮದಿಂದ ಕಾರ್ಯಕ್ರಮ ಮಾಡಿದರು, ಎಲ್ಲರಲ್ಲೂ ದುಖಃ ಮಡುಗಟ್ಟಿತ್ತು. ಸಿನಿಮಾ ತಂಡ, ಕಲಾವಿರದು, ರಾಜ್‌ ಕುಟುಂಬ, ಅಭಿಮಾನಿಗಳು, ಅತಿಥಿಗಳು ಎಲ್ಲರಲ್ಲೂ ದುಖಃ ಉಮ್ಮಳಿತ್ತು. ಆದರೆ ಇದೆಲ್ಲದರ ನಡುವೆ ಜೇಮ್ಸ ಮೂಲಕ ಅಪ್ಪು ಅವರನ್ನು ಬರಮಾಡಿಕೊಳ್ಳು ಎಲ್ಲರೂ ಸಜ್ಜಾಗಿದ್ದಾರೆ.

  English summary
  Raghavendra Rajkumar, Shiva Rajkumar Break The Promise And Become Emotional For Puneeth Rajkumar
  Monday, March 14, 2022, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X