For Quick Alerts
  ALLOW NOTIFICATIONS  
  For Daily Alerts

  ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ: ಹುಟ್ಟುಹಬ್ಬ ಬೇಡ ಎಂದ ರಾಘಣ್ಣ

  |
  ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ: ಹುಟ್ಟುಹಬ್ಬ ಬೇಡ ಎಂದ ರಾಘಣ್ಣ | FILMIBEAT KANNADA

  ಉತ್ತರ ಕರ್ನಾಟಕದಲ್ಲಿ ಆಗಿರುವ ಮಳೆ ಹಾನಿಯಿಂದ ನಟ ರಾಘವೇಂದ್ರ ರಾಜ್ ಕುಮಾರ್ ನೊಂದಿದ್ದಾರೆ. ಹೀಗಾಗಿ, ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದೆ ಇರಲು ನಿರ್ಧಾರ ಮಾಡಿದ್ದಾರೆ.

  ಆಗಸ್ಟ್ 15 ರಾಘವೇಂದ್ರ ರಾಜ್ ಕುಮಾರ್ ಹುಟ್ಟಿದ ದಿನ. ಪ್ರತಿ ವರ್ಷ ಕೂಡ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಆಚರಣೆ ಮಾಡುತ್ತಿದ್ದ ರಾಘವೇಂದ್ರ ರಾಜ್ ಕುಮಾರ್ ಈ ಬಾರಿ ಇದಕ್ಕೆ ಬ್ರೇಕ್ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇರುವ ಪರಿಸ್ಥಿತಿ ನಡುವೆ ಸಂಭ್ರಮಿಸೋದು ಸರಿಯಲ್ಲ ಎಂದಿದ್ದಾರೆ.

  ಉತ್ತರ ಕರ್ನಾಟಕದ ಜಾನುವಾರುಗಳಿಗೆ ಮೇವು ನೀಡಿದ ನಟಿ ಲೀಲಾವತಿ

  ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಅವರು ''ಆಗಸ್ಟ್ 15 ರಂದು, ಈ ವರ್ಷ ನನ್ನ ಹುಟ್ಟುಹಬ್ಬ ಮಾಡಿಕೊಳ್ಳುತ್ತಿಲ್ಲ. ನಾನು ಊರಿನಲ್ಲಿ ಇರುವುದಿಲ್ಲ. ದೇವಸ್ಥಾನಕ್ಕೆ ಹೋಗಿ ಉತ್ತರ ಕರ್ನಾಟಕದ ಜನರಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಕೇಕ್, ಪಟಾಕಿ, ಹಾರಕ್ಕೆ ದುಡ್ಡು ಖರ್ಚು ಮಾಡುವ ಬದಲು ಅದನ್ನು ಜನರಿಗೆ ನೀಡಿ'' ಎಂದು ಹೇಳಿದ್ದಾರೆ.

  ''ಅಪ್ಪಾಜಿ ಇದ್ದರು ಇದೇ ಕೆಲಸ ಮಾಡುತ್ತಿದ್ದರು. ಉತ್ತರ ಕರ್ನಾಟಕದ ಜನ ಕಷ್ಟದಲ್ಲಿ ಇರುವಾಗ ನಾನು ಖುಷಿ ಪಡುವುದು ಸರಿ ಅಲ್ಲ.'' ಎಂದು ರಾಘವೇಂದ್ರ ರಾಜ್ ಕುಮಾರ್ ತಮ್ಮ ನಿರ್ಧಾರವನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ.

  English summary
  Uttara Karnataka Flood : Kannada actor Raghavendra Rajkumar will not celebrate his birthday this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X