twitter
    For Quick Alerts
    ALLOW NOTIFICATIONS  
    For Daily Alerts

    ನಲಪಾಡ್ ಜೊತೆ ಸೇರಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಭರ್ಜರಿ ಊಟ ಹಾಕಿಸಿದ ರಾಗಿಣಿ

    |

    ನಟಿ ರಾಗಿಣಿ ದ್ವಿವೇದಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಹಳಷ್ಟು ಆಕ್ಟಿವ್ ಆಗಿದ್ದಾರೆ. ಅವರ ಸಮಕಾಲೀನ ನಟಿಯರಿಗೆ ಹೋಲಿಸಿದರೆ ಈ ಸಂಕಷ್ಟದ ಸಮಯದಲ್ಲಿ ಅವರು ಹೆಚ್ಚಾಗಿ ಸೇವೆಯಲ್ಲಿ ತೊಡಗಿದ್ದಾರೆ.

    Recommended Video

    ಹೋಮ್ ಕ್ವಾರಂಟೇನ್ ನಲ್ಲಿರುವ ರೋಗಿಗಳಿಗೆ ನಟಿ ರಾಗಿಣಿ ಏನ್ ಕೊಡ್ತಿದ್ದಾರೆ? | Ragini | Stay Home Stay safe

    ಕೊರೊನಾ ಬೆಂಗಳೂರಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಬೀದಿಗೆ ಇಳಿದು, ಮಾಸ್ಕ್‌ ಜೊತೆಗೆ ಅತ್ಯಂತ ಅವಶ್ಯಕವಾಗಿದ್ದ ಕೈ ಗ್ಲೌಸುಗಳನ್ನು ಉಚಿತವಾಗಿ ಹಂಚಿದ್ದ ರಾಗಿಣಿ, ಆಗಿನಿಂದಲೂ ಒಂದಲ್ಲಾ ಒಂದು ರೀತಿ ತಮ್ಮನ್ನು ತಾವು ಸಮಾಜ ಸೇವೆಗೆ ತೊಡಿಸಿಕೊಂಡಿದ್ದಾರೆ.

    ಕೊರೊನಾ ರೋಗಿಗಳ ಪ್ರಮುಖ ಚಿಕಿತ್ಸಾ ಕೇಂದ್ರವಾಗಿರುವ ವಿಕ್ಟೋರಿಯಾ ಆಸ್ಪತ್ರೆಗೆ ನಟಿ ರಾಗಿಣಿ ಇಂದು ಭೇಟಿ ನೀಡಿದ್ದಲ್ಲದೆ, ಅಲ್ಲಿನ ಸಿಬ್ಬಂದಿಗೆ ಭರ್ಜರಿಯಾದ ಊಟ ಹಾಕಿಸಿದ್ದಾರೆ. ರಾಗಿಣಿ ನೀಡಿದ ಊಟವನ್ನು ತಯಾರಿಸಲು ಆರ್ಥಿಕ ಸಹಾಯ ನೀಡಿದವರು ಎಂ.ಎಚ್.ನಲಪಾಡ್.

    ಸಸ್ಯಹಾರ, ಮಾಂಸಾಹಾರ ನೀಡಿದ ರಾಗಿಣಿ

    ಸಸ್ಯಹಾರ, ಮಾಂಸಾಹಾರ ನೀಡಿದ ರಾಗಿಣಿ

    ಇಂದು ಮಧ್ಯಾಹ್ನ ರಾಗಿಣಿ ಅವರು, ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಊಟವನ್ನು ನೀಡಿದ್ದಾರೆ. ತಮ್ಮ ತಂಡದೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ, ಹೊರಗೆ ನಿಂತು ಆಹಾರವನ್ನು ಆಸ್ಪತ್ರೆ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ.

    ವೈದ್ಯ, ಡಯಟೀಶಿಯನ್ ಸಲಹೆ ಪಡೆದ ರಾಗಿಣಿ

    ವೈದ್ಯ, ಡಯಟೀಶಿಯನ್ ಸಲಹೆ ಪಡೆದ ರಾಗಿಣಿ

    ಈ ಆಹಾರವನ್ನು ರಾಗಿಣಿ ಅವರು ವೈದ್ಯ ಸತೀಶ್ ಮತ್ತು ಡೈಯಟೀಶಿಯನ್ ದೀಪ್ತಿ ಅವರ ಸಲಹೆ ಪಡೆದು ತಯಾರು ಮಾಡಿಸಿದ್ದಾರಂತೆ. ಸಿಬ್ಬಂದಿಗಳಿಗೆ ಭಿನ್ನ ರೀತಿಯ ಆಹಾರದ ಅವಶ್ಯಕತೆ ಈ ಸಮಯದಲ್ಲಿರುವ ಕಾರಣ ಡೈಟೀಶಿಯನ್ ಮತ್ತು ವೈದ್ಯರ ಸಲಹೆ ಪಡೆಯಲಾಗಿದೆ.

    ನಲಪಾಡ್ ಅನ್ನು ನಿಜವಾದ ಹೀರೋ ಅಂದ ರಾಗಿಣಿ

    ನಲಪಾಡ್ ಅನ್ನು ನಿಜವಾದ ಹೀರೋ ಅಂದ ರಾಗಿಣಿ

    ಚಿತ್ರಗಳನ್ನು, ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ರಾಗಿಣಿ, ನಲಪಾಡ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಅವರನ್ನು ನಿಜವಾದ ಹೀರೋ ಎಂದು ಹೊಗಳಿದ್ದಾರೆ. ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಮ್‌.ಎಚ್.ನಲಪಾಡ್ ಜೈಲುಪಾಲಾಗಿದ್ದರು. ಅವರೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

    ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ

    ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ

    ಕೊರೊನಾ ಸಂಕಷ್ಟದ ಸಮಯದಲ್ಲಿ ರಾಗಿಣಿ ಅವರು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದು, ಉಚಿತ ಮಾಸ್ಕ್, ಗ್ಲೌಸ್ ವಿತರಣೆ, ಉಚಿತ ಊಟ ವಿತರಣೆ, ದಿನಸಿ ವಿತರಣೆ, ನಾಯಿಗಳಿಗೆ ಆಹಾರ ಹೀಗೆ ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    English summary
    Actress Ragini Dwivedi donate packed veg and non veg food for Victoria hospital doctors, health workers and other staff.
    Friday, April 24, 2020, 21:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X