»   » ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ

ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ

Posted By:
Subscribe to Filmibeat Kannada

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ... ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಬಂದಿದ್ದರು. ಅಂಬೇಡ್ಕರ್ ಭವನದಲ್ಲಿ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಡಾ.ರಾಜ್ ಕುಮಾರ್ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು.

ಅಣ್ಣಾವ್ರ ಮಕ್ಕಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್... ರಾಹುಲ್ ಗಾಂಧಿ ರವರನ್ನು ಸ್ವಾಗತಿಸಿದರು.

'ಅಮ್ಮ'ನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಹುಲ್ ಗಾಂಧಿ

ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ, ಪಾರ್ವತಮ್ಮ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ರಾಹುಲ್ ಗಾಂಧಿ ಪುಷ್ಪನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

ರಾಹುಲ್ ಗಾಂಧಿಗೆ ಸಾಥ್ ಕೊಟ್ಟ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಸಿ.ಎಂ ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ, ಕೆಜೆ ಜಾರ್ಜ್, ಎಸ್.ಆರ್.ಪಾಟೀಲ್ ಕೂಡ ಹಾಜರ್ ಇದ್ದರು.

ಭೇಟಿ ಬಳಿಕ ರಾಘಣ್ಣ ಹೇಳಿದಿಷ್ಟು...

''ನನಗೆ ಸ್ಟ್ರೋಕ್ ಆಗಿದ್ದರ ಬಗ್ಗೆ ಅವರಿಗೆ ಮಾಹಿತಿ ಇತ್ತು. ಚಿಕಿತ್ಸೆ ಮುಂದುವರೆಸುವಂತೆ ಸಲಹೆ ನೀಡಿದರು. 'ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪಾರ್ಥಿಸುವೆ' ಎಂದರು. ನಮ್ಮ ಮೂವರು ಸಹೋದರರ ಜೊತೆ ಫೋಟೋ ತೆಗೆಸಿಕೊಂಡರು. ಅವರು ಇಲ್ಲಿಗೆ ಬಂದಿದ್ದು ತುಂಬಾ ಖುಷಿ ಆಯ್ತು'' ಎಂದು ರಾಹುಲ್ ಗಾಂಧಿ ಭೇಟಿ ಬಳಿಕ ರಾಘವೇಂದ್ರ ರಾಜ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ರಾಜಕೀಯ ಉದ್ದೇಶ ಇಲ್ಲ

ರಾಹುಲ್ ಗಾಂಧಿ ತಮ್ಮ ಮನೆಗೆ ಭೇಟಿ ನೀಡುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಇದೇ ವೇಳೆ ರಾಘವೇಂದ್ರ ರಾಜ್ ಕುಮಾರ್ ಸ್ಪಷ್ಟ ಪಡಿಸಿದರು.

English summary
Congress Party Vice President Rahul Gandhi visited Dr Rajkumar's house in Bengaluru today (June 12th)
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada