ವಿಡಿಯೋ : 'ರಾಜರಥ' ಚಿತ್ರದ ಟ್ರೇಲರ್ ನಲ್ಲಿ ಕಂಡ ರಾಜರತ್ನ ಪುನೀತ್
'ರಂಗಿತರಂಗ' ಸಹೋದರರ 'ರಾಜರಥ' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಪುನೀತ್ ರಾಜ್ ಕುಮಾರ್ ಈ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
'ರಾಜರಥ' ಸಿನಿಮಾದ ಟ್ರೇಲರ್ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಸೂಪರ್ ಆಗಿದೆ. ಟ್ರೇಲರ್ ಪುನೀತ್ ನಿರೂಪಣೆ ಮೂಲಕ ಶುರುವಾಗಿ ಅಂತ್ಯವಾಗುತ್ತದೆ. ಟ್ರೇಲರ್ ನೋಡುಗರಿಗೆ ಮಜಾ ಕೊಡುತ್ತದೆ. ಸಿನಿಮಾ ಒಂದು ಕಾಲೇಜ್ ಹುಡುಗ ಹುಡುಗಿಯ ನಡುವೆ ನಡೆಯುತ್ತದೆ ಎಂಬ ಸಣ್ಣ ಸುಳಿವು ಟ್ರೇಲರ್ ನಲ್ಲಿ ಸಿಕ್ಕಿದೆ.

ಉಳಿದಂತೆ ಟ್ರೇಲರ್ ನಲ್ಲಿ ಪುನೀತ್ ರಾಜ್ ಕುಮಾರ್ ಧ್ವನಿ ಮತ್ತು ಕಾಲಿವುಡ್ ನಟ ಆರ್ಯ ಅವರ ಲುಕ್ ಖಡಕ್ ಆಗಿದೆ. ರವಿಶಂಕರ್ ಗಮನ ಸೆಳೆಯುತ್ತಾರೆ. ಚಿತ್ರದ ನಾಯಕ ನಿರೂಪ್ ಭಂಡಾರಿ ಮತ್ತು ನಟಿ ಅವಂತಿಕಾ ಶೆಟ್ಟಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ.
ಕನ್ನಡ ಮತ್ತು ತೆಲುಗು ಎರಡು ಭಾಷೆಯ ಟ್ರೇಲರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಪುನೀತ್ ಮತ್ತು ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಜನವರಿ 25ಕ್ಕೆ ರಿಲೀಸ್ ಆಗಲಿದೆ.
More from Filmibeat
English summary
watch video : Kannada actor Nirup Bhandari's Rajaratha' kannada movie trailer released by Puneeth Rajkumar.
puneeth rajkumar arya nirup bhandari anup bhandari ravishankar sandalwood ಪುನೀತ್ ರಾಜ್ ಕುಮಾರ್ ಆರ್ಯ ರವಿಶಂಕರ್ ಸ್ಯಾಂಡಲ್ ವುಡ್


Click it and Unblock the Notifications











