For Quick Alerts
  ALLOW NOTIFICATIONS  
  For Daily Alerts

  '2.0' ಆರ್ಭಟಕ್ಕೆ ಹಳೆ ದಾಖಲೆಗಳು ಧೂಳಿಪಟ: ಸಂಜು, ದಂಗಲ್, ಬಾಹುಬಲಿ ಉಡೀಸ್

  |
  2.0' ಆರ್ಭಟಕ್ಕೆ ಹಳೆ ದಾಖಲೆಗಳು ಧೂಳಿಪಟ: ಸಂಜು, ದಂಗಲ್, ಬಾಹುಬಲಿ ಉಡೀಸ್ | FILMIBEAT KANNADA

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಇದ್ದರೂ, ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ. ದಿನಕ್ಕೊಂದು ದಾಖಲೆ, ದಿನಕ್ಕೊಂದು ಇತಿಹಾಸ ನಿರ್ಮಿಸುತ್ತಾ ಮುಂದೆ ಸಾಗುತ್ತಿದೆ.

  ಸದ್ಯ, 13 ದಿನದಲ್ಲಿ 600 ಕೋಟಿ ಗಳಿಸಿರುವ ರಜನಿ ಸಿನಿಮಾ ಹತ್ತು ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದೆ. ಸಾರ್ವಕಾಲಿಕ ಹಿಟ್ ಸಿನಿಮಾ ಎನಿಸಿಕೊಂಡಿರುವ ದಂಗಲ್ ಚಿತ್ರದ ದಾಖಲೆ ಹಾಗೂ ಬಾಹುಬಲಿ ಚಿತ್ರದ ದಾಖಲೆಯೊಂದನ್ನ '2.0' ಉಡೀಸ್ ಮಾಡಿದೆ.

  ರಜನಿ '2.0' ಕಲೆಕ್ಷನ್: ನಿರೀಕ್ಷೆ ಪರ್ವತದಷ್ಟು, ಗಳಿಸಿದ್ದು ಬೆಟ್ಟದಷ್ಟು.!

  ಅಷ್ಟೇ ಅಲ್ಲ, ಈ ವರ್ಷದ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿದ್ದ ಸಂಜು, ಪದ್ಮಾವತ್ ಚಿತ್ರಗಳನ್ನ ರೆಕಾರ್ಡ್ ಕೂಡ ಧೂಳಿಪಟ ಮಾಡಿದೆ. '2.0' ಹೋಗುತ್ತಿರುವ ವೇಗ ನೋಡಿದ್ರೆ, ಸದ್ಯದಲ್ಲೇ 1000 ಕೋಟಿ ಗಡಿದಾಟಲಿದೆ ಎಂಬ ಲೆಕ್ಕಾಚಾರ ಆಗ್ತಿದೆ. ಅಷ್ಟಕ್ಕೂ, ರಜನಿ ಮತ್ತು ಅಕ್ಷಯ್ ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟು? ಪದ್ಮಾವತ್, ಸಂಜು, ದಂಗಲ್, ಬಾಹುಬಲಿ ನಿರ್ಮಿಸಿದ್ದ ಯಾವ ದಾಖಲೆಗಳನ್ನ ಮುರಿದಿದೆ ಎಂದು ತಿಳಿಯಲು ಮುಂದೆ ಓದಿ......

  400 ಕೋಟಿ ದಾಖಲೆ

  400 ಕೋಟಿ ದಾಖಲೆ

  ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಭಾರತದ ಬಾಕ್ಸ್ ಆಫೀಸ್ ನ ಮೊದಲ ಹದಿಮೂರು (13) ದಿನದಲ್ಲಿ 380 ಕೋಟಿ ಗಳಿಸಿತ್ತು. ಆದ್ರೀಗ, ರಜನಿಕಾಂತ್ '2.0' ಸಿನಿಮಾ ಈ ದಾಖಲೆಯನ್ನ ಅಳಿಸಿಹಾಕಿದೆ. ರಜನಿ ಚಿತ್ರ ಮೊದಲ ಹದಿಮೂರು ದಿನದಲ್ಲಿ 400 ಕೋಟಿ ಗಳಿಸುವ ಮೂಲಕ ದಂಗಲ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ.

  ಪ್ರೇಕ್ಷಕರ ವಿಮರ್ಶೆ : '2.O' ಸಿನಿಮಾ ನೋಡಿದವರ ಪ್ರತಿಕ್ರಿಯೆ

  'ಬಾಹುಬಲಿ' ದಾಖಲೆ ಮೇಲೆ ಕಣ್ಣು

  'ಬಾಹುಬಲಿ' ದಾಖಲೆ ಮೇಲೆ ಕಣ್ಣು

  ಸದ್ಯಕ್ಕೆ ಹದಿಮೂರು ದಿನದಲ್ಲಿ ಬಾಹುಬಲಿ ಚಿತ್ರವೇ ಮೊದಲ ಸ್ಥಾನದಲ್ಲಿದೆ. ದಾಖಲೆಗಳ ಪ್ರಕಾರ, ಬಾಹುಬಲಿ-2 ಸಿನಿಮಾ ಮೊದಲ ಹದಿಮೂರು ದಿನದಲ್ಲಿ ಜಗತ್ತಿನಾದ್ಯಂತ 1200 ಕೋಟಿ ಹಾಗೂ ಭಾರತದಲ್ಲಿ 550 ಕೋಟಿಗೂ ಅಧಿಕ ಹಣ ಗಳಿಸಿತ್ತು. ಹಾಗಾಗಿ, ಈ ದಾಖಲೆಯನ್ನ 2.0 ಸಿನಿಮಾ ಮುರಿಯಲು ಸಾಧ್ಯವಾಗಿಲ್ಲ. ಒಟ್ಟು ಕಲೆಕ್ಷನ್ ಬ್ರೇಕ್ ಮಾಡಬಹುದು ಎಂಬ ನಿರೀಕ್ಷೆ ಇದೆ.

  'ಬಾಹುಬಲಿ' ಮುಂದೆ ಬಹುದೊಡ್ಡ ಸೋಲು ಕಂಡ ರಜನಿ '2.0'

  ಸಂಜು, ಪದ್ಮಾವತ್ ಉಡೀಸ್

  ಸಂಜು, ಪದ್ಮಾವತ್ ಉಡೀಸ್

  ಈ ವರ್ಷದ ಎರಡು ದೊಡ್ಡ ಸಿನಿಮಾಗಳ ಒಟ್ಟಾರೆ ಕಲೆಕ್ಷನ್ ಧೂಳಿಪಟ ಮಾಡಿದೆ ರಜನಿ ಸಿನಿಮಾ. ಸಂಜು ಮತ್ತು ಪದ್ಮಾವತ್ ಚಿತ್ರಗಳು ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಮೊದಲೆರೆಡು ಚಿತ್ರಗಳಾಗಿತ್ತು. ಆದ್ರೀಗ, ಈ ದಾಖಲೆಯನ್ನ ಈಗ 2.0 ಅಳಿಸಿಹಾಕಿ, ತನ್ನ ಹೆಸರಿಗೆ ವರ್ಗಾಯಿಸಿದೆ. 'ಸಂಜು' ಇದುವರೆಗೂ ವರ್ಲ್ಡ್ ವೈಡ್ ಗಳಿಸಿದ್ದು 586 ಕೋಟಿ, ಹಾಗೂ 'ಪದ್ಮಾವತ್' ಗಳಿಸಿದ್ದು 585 ಕೋಟಿ. ಈಗ '2.0 'ಗಳಿಸಿರುವುದು 600 ಕೋಟಿ.

  '2.0' ಚಿತ್ರದ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಾ ಕಾಲೆಳೆಯೋದು.!

  ಸುಲ್ತಾನ್ ದಾಖಲೆಯೂ ಬ್ರೇಕ್.!

  ಸುಲ್ತಾನ್ ದಾಖಲೆಯೂ ಬ್ರೇಕ್.!

  ಇನ್ನು ಸಲ್ಮಾನ್ ಅಭಿನಯಿಸಿದ್ದ 'ಸುಲ್ತಾನ್' ಸಿನಿಮಾ ಬಾಕ್ಸ್ ಆಫೀಸ್ ಒಟ್ಟು ಗಳಿಸಿರುವುದು 623 ಕೋಟಿ. ಬಹುಶಃ ಈ ದಾಖಲೆಯನ್ನ ಕೂಡ ರಜನಿ-ಅಕ್ಷಯ್ ಕುಮಾರ್ ಸಿನಿಮಾ ಬ್ರೇಕ್ ಮಾಡಿ ಮುಂದೆ ಸಾಗಿದೆ. ಈಗೇನಿದ್ರು ಬಾಹುಬಲಿ ಚಿತ್ರದ ದಾಖಲೆಯನ್ನ ಬೆನ್ನತ್ತುವುದೇ '2.0' ಚಿತ್ರದ ಬಹುದೊಡ್ಡ ಟಾರ್ಗೆಟ್.

  ವಿಶ್ವಾದ್ಯಂತ ಅಬ್ಬರಿಸುತ್ತಿರುವ '2.0' ಕರ್ನಾಟಕದಲ್ಲಿ ಗಳಿಸಿದೆಷ್ಟು.?

  ಚೆನ್ನೈನಲ್ಲಿ 'ಬಾಹುಬಲಿ' ಹಿಂದಿಕ್ಕಿದ ತಲೈವಾ

  ಚೆನ್ನೈನಲ್ಲಿ 'ಬಾಹುಬಲಿ' ಹಿಂದಿಕ್ಕಿದ ತಲೈವಾ

  ಚೆನ್ನೈ ಬಾಕ್ಸ್ ಆಫೀಸ್ ನಲ್ಲಿ ತಲೈವಾ ಸಿನಿಮಾ ನೂತನ ಇತಿಹಾಸ ನಿರ್ಮಿಸಿದೆ. ಇದುವರೆಗೂ ಚೆನ್ನೈನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿದ್ದ ಸಿನಿಮಾ ಬಾಹುಬಲಿ. 18.5 ಕೋಟಿ ಗಳಿಸಿತ್ತು. ಇದೀಗ, ರಜನಿಕಾಂತ್ ಅವರ 2.0 ಸಿನಿಮಾ 20 ಕೋಟಿ ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಮುರಿದುಹಾಕಿದೆ. ಈ ಮೂಲಕ ಚೆನ್ನೈನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾಗೆ ಅಧಿಪತಿ ತಲೈವಾ.

  ದಂಗಲ್-ಬಾಹುಬಲಿ ಕೆಲಕ್ಷನ್ ಎಷ್ಟು?

  ದಂಗಲ್-ಬಾಹುಬಲಿ ಕೆಲಕ್ಷನ್ ಎಷ್ಟು?

  ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾದ ಒಟ್ಟಾರೆ ಕಲೆಕ್ಷನ್ 2100 ಕೋಟಿ. 'ಬಾಹುಬಲಿ ದಿ ಕನ್ ಕ್ಲೂಷನ್' ಚಿತ್ರದ ಒಟ್ಟಾರೆ ಕಲೆಕ್ಷನ್ 1810 ಕೋಟಿ. ಈ ಎರಡು ಚಿತ್ರಗಳ ಒಟ್ಟು ಕಲೆಕ್ಷನ್ ಮೇಲೆ ಈಗ ಶಂಕರ್ ಸಿನಿಮಾ ಕಣ್ಣಾಕಿದೆ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೋ ಗೊತ್ತಿಲ್ಲ. ಬಟ್, ಒಂದು ಮಟ್ಟದ ಕುತೂಹಲ ಅಂತೂ ಇದ್ದೇ ಇರುತ್ತೆ.

  English summary
  Rajinikanth and Akshay Kumar starrer 2.0 has now become the highest earning Indian film of the year at the worldwide box office. By making more than Rs 600 crore, the movie has beaten Padmaavat and Sanju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X