»   » ಭೂಕಂಪ ಸಂತ್ರಸ್ತರಿಗೆ ಶಿವಣ್ಣ, ವಿನಯ್ ನೆರವಿನ ಹಸ್ತ

ಭೂಕಂಪ ಸಂತ್ರಸ್ತರಿಗೆ ಶಿವಣ್ಣ, ವಿನಯ್ ನೆರವಿನ ಹಸ್ತ

Posted By:
Subscribe to Filmibeat Kannada

ನೇಪಾಳ ಭೂಕಂಪ ಸಂತ್ರಸ್ತರ ಬದುಕು ಅಕ್ಷರಶಃ ಅತಂತ್ರವಾಗಿದೆ. ಜಗತ್ತಿನ ನಾನಾ ಮೂಲೆಗಳಿಂದ ಪರಿಹಾರ ನಿಧಿ, ಸಾಮಗ್ರಿ ಹರಿದುಬರುತ್ತಿದೆ. ಅಲ್ಲಿನ ಅತಂತ್ರ ಬದುಕನ್ನು ಮತ್ತೆ ಕಟ್ಟುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸಿನಿಮಾ ತಾರೆಗಳು ಮುಂದಾಗಿರುವುದು ಗೊತ್ತೇ ಇದೆ.

ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಗಳು ಸಾಗುತ್ತಿವೆ. ಸಿನಿಮಾ ತಾರೆಗಳು ತಮ್ಮ ಕೈಲಾದ ಸಹಾಯ ಮಾಡುತ್ತ ತಮ್ಮ ಅಭಿಮಾನಿಗಳ ನೆರವಿನೊಂದಿಗೆ ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇಂದು ಅಣ್ಣಾವ್ರ ಕುಟುಂಬ ನೇಪಾಳ ಭೂಕಂಪ ಸಂತ್ರಸ್ತರ ನೆರವಿಗೆ ಧಾವಿಸಿ ದೇಣಿಗೆ ನೀಡಿತು. [ಭೂಕಂಪ ಸಂತ್ರಸ್ತರ ನೆರವಿಗೆ ಧಾವಿಸಿ ಬಂದ 'ವಿಭಾ' ಟ್ರಸ್ಟ್]

rajkumar-family-donates-5-lakhs-for-nepal-relief-fund

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪುತ್ರ ವಿನಯ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ (ಮೇ.7) ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಪರಿಹಾರ ನಿಧಿ ಹೆಸರಿಗೆ ಬರೆದ ರು.10 ಲಕ್ಷದ ಚೆಕ್ (ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ಅವರು ತಲಾ ರು.5 ಲಕ್ಷ) ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. ಅಂದಹಾಗೆ ಇಂದು (ಮೇ.7) ವಿನಯ್ ರಾಜ್ ಕುಮಾರ್ ಅವರ 25ನೇ ಹುಟ್ಟುಹಬ್ಬ. [ನೇಪಾಳದ ಸಂತ್ರಸ್ತರಿಗೆ ಮಾಗಡಿ ರೈತ ತೋರಿದ ಮಾನವೀಯತೆ]

ಭೂಕಂಪ, ನೆರೆ ಹಾವಳಿಯಂತಹ ವಿಕೋಪ ಪರಿಸ್ಥಿತಿಗಳಲ್ಲಿ ಸಹಾಯ ಹಸ್ತ ಚಾಚಲು ಅಣ್ಣಾವ್ರ ಕುಟುಂಬ ಸದಾ ಮುಂದಿದೆ. ಈ ಹಿಂದೆ ಉತ್ತರಾಖಂಡ ನೆರೆ ಹಾವಳಿಗೆ ತುತ್ತಾದಾಗಲೂ ಶಿವಣ್ಣ ಪರಿಹಾರ ನೀಡಿದ್ದರು. ಆಗಲೂ ಅಭಿಮಾನಿಗಳಿಗೂ ಶಿವಣ್ಣನ ಬೆನ್ನಿಗಿದ್ದರು. ಈಗಲೂ ಅಷ್ಟೇ. (ಫಿಲ್ಮಿಬೀಟ್ ಕನ್ನಡ)

English summary
Noted Film Actors Mr Shivarajkumar, Mr Raghavendra Rajkumar and Mr Siddarth called on the Chief Minister Mr Siddaramaiah on May 7 at his Official Residence Cauvery in Bengaluru and handed over a Cheque for Rs 10 Lakh to the Prime Minister’s Relief Fund to be used for the Earth Quake Victims of Nepal.They requested the Chief Minister to take necessary action to send the amount to the Prime Minister’s Office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada