»   » ರಾಗಿಣಿ ಚಿತ್ರದಲ್ಲಿ ಹಾಸ್ಯನಟ ರಾಜ್ ಪಾಲ್ ಯಾದವ್

ರಾಗಿಣಿ ಚಿತ್ರದಲ್ಲಿ ಹಾಸ್ಯನಟ ರಾಜ್ ಪಾಲ್ ಯಾದವ್

Posted By:
Subscribe to Filmibeat Kannada

ಬಾಲಿವುಡ್ ಚಿತ್ರಗಳ ಹಾಸ್ಯನಟ ಆರ್ ರಾಜ್ ಪಾಲ್ ಯಾದವ್ ಅವರು ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಕನ್ನಡದಲ್ಲಿ ಅವರು ಅಭಿನಯಿಸುತ್ತಿರುವುದು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೊತೆ.

ರಾಗಿಣಿ ದ್ವಿವೇದಿ ಅವರ ಮಹತ್ವಾಕಾಂಕ್ಷಿ ಚಿತ್ರ 'ಅಮ್ಮ' ಚಿತ್ರದಲ್ಲಿ ರಾಜ್ ಪಾಲ್ ಯಾದವ್ ಅವರು ರಾಧೇಕೃಷ್ಣ ಯಾದವ್ ಎಂಬ ಪಾತ್ರ ಪೋಷಿಸುತ್ತಿದ್ದಾರೆ. ಚಿತ್ರದಲ್ಲಿ ಅವರದು ಖಳನಟನ ಪಾತ್ರ. ಅಂದಹಾಗೆ 'ಅಮ್ಮ' ಚಿತ್ರ ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿದೆ. ['ಅಮ್ಮ' ಆಗಲಿರುವ ಘಮಘಮ ತುಪ್ಪದ ಬೆಡಗಿ ರಾಗಿಣಿ]

Actor R Rajpal Yadav

ಫೈಸಲ್ ಸೈಫ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು ನಾಯಕಿ ಕೇಂದ್ರಿತ ಕಥಾಹಂದರವಿದೆ. ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜೆ ಜಯಲಲಿತಾ ಅವರ ಪಾತ್ರವನ್ನು ಪೋಷಿಸಲಿದ್ದಾರೆ ರಾಗಿಣಿ ದ್ವಿವೇದಿ ಎನ್ನುತ್ತವೆ ಮೂಲಗಳು.

ರಂಗಭೂಮಿ ಹಿನ್ನೆಲೆಯಿಂದ ಬಂದ ರಾಜ್ ಪಾಲ್ ಯಾದವ್ ಅವರು ಇದುವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಜಂಗ್ಲಿ, ಶೂಲ್ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ಪೋಷಿಸಿ ಎಲ್ಲರ ಗಮನಸೆಳೆದರು.

ಪ್ಯಾರ್ ತುನೆ ಕ್ಯಾ ಕಿಯಾ, ಹಂಗಾಮ, ವಕ್ತ್, ಚುಪ್ ಚುಪ್ ಕೆ, ಗರಂ ಮಸಾಲ, ಫಿರ್ ಹೇರಾ ಪೇರಿ ಮುಂತಾದ ಚಿತ್ರಗಳು ರಾಜ್ ಪಾಲ್ ಯಾದವ್ ಅಭಿನಯದ ಪ್ರಮುಖ ಚಿತ್ರಗಳು. ಒಟ್ಟಾರೆಯಾಗಿ ಕನ್ನಡಕ್ಕೆ ಮತ್ತೊಬ್ಬ ಕುಳ್ಳನ ಎಂಟ್ರಿಯಾಗುತ್ತಿದೆ. (ಏಜೆನ್ಸೀಸ್)

English summary
Bollywood comedy star R Rajpal Yadav is all set to enter Sandalwood with the film Amma. The comedy actor has been signed up to play the main villain in Ragini Dwivedi's upcoming multi-language film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada