For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ಗೆ ದಿಢೀರ್ ಅಂತಹ ಇಂತಹ ಆಸೆ ಯಾಕೆ.?

  By Naveen
  |

  ರಾಜಮೌಳಿ ಜೊತೆ ಸಿನಿಮಾ ಮಾಡ್ಬೇಕು ಎಂಬ ಆಸೆ ಅನೇಕರಿಗೆ ಇರುತ್ತೆ. ಬಾಹುಬಲಿ ಸಿನಿಮಾ ಆದ್ಮೆಲಂತೂ ಬಾಲಿವುಡ್ ಸ್ಟಾರ್ ಗಳು ರಾಜಮೌಳಿಗಾಗಿ ಕಾಯ್ತಿದ್ದಾರೆ. ಹೀಗಿರುವಾಗ, ರಾಜಮೌಳಿ ಜೊತೆ ಕೆಲಸ ಮಾಡಿದ ನಟ ಈಗ ಬಾಲಿವುಡ್ ಡೈರೆಕ್ಟರ್ ಗಾಗಿ ಕಾಯ್ತಿದ್ದಾರಂತೆ.

  ಹೌದು, ತೆಲುಗು ಸೂಪರ್ ಹಿಟ್ ಸಿನಿಮಾ 'ರಂಗಸ್ಥಲಂ' ಚಿತ್ರದ ಯಶಸ್ಸಿನಲ್ಲಿರುವ ನಟ ರಾಮ್ ಚರಣ್ ಬಾಲಿವುಡ್ ನಿರ್ದೇಶಕ ರಾಜ ಕುಮಾರ್ ಹಿರಾನಿ ಜೊತೆ ಸಿನಿಮಾ ಮಾಡ್ಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

  ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ಚರಣ್ ''ನಾನು ಸಹ 2013 ರಲ್ಲಿ "ಝಂಜೀರ್" ಸಿನಿಮಾದ ಮೂಲಕ ಬಾಲಿವುಡ್ ತೆರೆಯಲ್ಲಿ ಕಾಣಿಸಿಕೊಂಡಿದ್ದೇನೆ. ಹಾಗೂ ನಾನು ಬಾಲಿವುಡ್ ಚಿತ್ರರಂಗದಲ್ಲಿ ನನ್ನ ಸ್ಥಾನ ಭದ್ರ ಪಡಿಸಿಕೊಳ್ಳುವುದರ ಮೂಲಕ ರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಬೇಕೆನ್ನುವುದು ನನ್ನ ಆಸೆ'' ಎಂದು ಬಯಕೆ ಹಂಚಿಕೊಂಡಿದ್ದಾರೆ.

  ''ಈ ನಿಟ್ಟಿನಲ್ಲಿ ನೆಚ್ಚಿನ ನಿರ್ದೇಶಕರಾಗಿರುವ ರಾಜ್ ಕುಮಾರ್ ಹಿರಾನಿ ಸರ್ ಮತ್ತು ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ'' ಎಂದು ಸಂತಸ ಹೊರಹಾಕಿದ್ದಾರೆ.

  "ಬಾಹುಬಲಿ" ಖ್ಯಾತಿಯ ನಟ ಪ್ರಭಾಸ್ "ಸಾಹೋ ಮತ್ತು ಮಲಯಾಳಂ ನಟ ದುಲ್ಕರ್ ಸಲ್ಮಾನ್ "ಕರ್ವಾನ್" ಸಿನಿಮಾಗಳ ಮೂಲಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

  English summary
  Ram Charan, who is currently basking in the success of his rural entertainer Rangasthalam, is keen on doing a Bollywood film now. he would like to work with Bollywood director Rajkumar Hirani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X