For Quick Alerts
  ALLOW NOTIFICATIONS  
  For Daily Alerts

  '2.0' ಚಿತ್ರದ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಾ ಕಾಲೆಳೆಯೋದು.!

  |

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಮತ್ತು ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಚಿತ್ರ ಒಂದೇ ವಾರ ಬಿಡುಗಡೆಯಾಗುತ್ತಿದೆ. ಹೀಗಾಗಿ, ರಜನಿ ಚಿತ್ರದ ನಿರ್ದೇಶಕ ಶಂಕರ್ ಮೇಲೆ ಆರ್.ಜಿ.ವಿ ಅಟ್ಯಾಕ್ ಮಾಡಿದ್ದು, 'ಅವರು ಮಕ್ಕಳಿಗಾಗಿ ಸಿನಿಮಾ ಮಾಡಿದ್ದಾರೆ' ಎಂದು ಕಿಡಿಕಾರಿದ್ದಾರೆ.

  600 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ '2.0' ಸಿನಿಮಾ ಮೂರು ವರ್ಷದ ಪ್ರಾಜೆಕ್ಟ್. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಹಾಗೂ ಆಮಿ ಜಾಕ್ಸನ್ ಅಭಿನಯದ ಬಹುದೊಡ್ಡ ಸಿನಿಮಾ. ಭಾರತದ ಮಟ್ಟಿಗೆ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಕಲೆಕ್ಷನ್ ನಲ್ಲೂ ಭಾರಿ ದಾಖಲೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

  ನಾನಾ ಪಾಟೇಕರ್ ಬಗ್ಗೆ ವರ್ಮಾ ವಿಡಿಯೋ: ಖ್ಯಾತ ನಟನ ವ್ಯಕ್ತಿತ್ವ ಬಿಚ್ಚಿಟ್ಟ ಆರ್.ಜಿ.ವಿ

  ಇಂತಹ ಚಿತ್ರವನ್ನ ರಾಮ್ ಗೋಪಾಲ್ ವರ್ಮಾ ಹೀಯಾಳಿಸಿದ್ದಾರೆ. ಶಂಕರ್ ಅವರು ''ದೊಡ್ಡ ತಂತ್ರಜ್ಞಾನ ಬಳಸಿ, ಅತಿ ಹೆಚ್ಚು ಗ್ರಾಫಿಕ್ಸ್ ಬಳಸಿ ಮಕ್ಕಳಿಗಾಗಿ ಸಿನಿಮಾ ಮಾಡಿದ್ದಾರೆ. ಆದ್ರೆ, ವಯಸ್ಕರಿಗಾಗಿ ನಿರ್ದೇಶಕ ಸಿದ್ಧಾರ್ಥ್ 'ಬೈರವಗೀತಾ' ಅಂತಹ ಚಿತ್ರ ಮಾಡಿದ್ದಾರೆ'' ಎಂದು ವರ್ಮಾ ಹೇಳಿದ್ದಾರೆ.

  ರಾಮ್ ಗೋಪಾಲ್ ವರ್ಮಾಗೆ ಡಿಸ್ಟರ್ಬ್ ಮಾಡಿದ ನಟಿ: ಈಕೆ ಯಾರು.?

  ಬೈರವಗೀತಾ ಇಲ್ಲಿನ ಸಂಸ್ಕೃತಿಗೆ ತಕ್ಕ ಕಥೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನ ಸೇಡಿನ ಸಿನಿಮಾ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ಬರ್ತಿದ್ದು, ಕನ್ನಡ ನಟ ಧನಂಜಯ್ ನಾಯಕನಾಗಿ ಅಭಿನಯಿಸಿದ್ದಾರೆ. ಐರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ರಾಮ್ ಗೋಪಾಲ್ ವರ್ಮಾ ಹೇಳಿದ ಕೆಲಸ ಮಾಡಿದ್ರೆ 10 ಲಕ್ಷ ಸಿಗುತ್ತೆ

  ಬೈರವಗೀತಾ ಸಿನಿಮಾ ನವೆಂಬರ್ 30 ರಂದು ರಿಲೀಸ್ ಆಗ್ತಿದ್ದು, ಅದಕ್ಕಿಂತ ಒಂದು ದಿನ ಮುಂಚೆ ನವೆಂಬರ್ 29 ರಜನಿಕಾಂತ್ ಅಭಿನಯದ '2.0' ಸಿನಿಮಾ ಬಿಡುಗಡೆಯಾಗುತ್ತಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ.

  English summary
  RGV said that, Sensational and Big director Shankar made 2.0 with high technical, VFX graphics for Kids purpose. But Yound Director Siddharth made Bhairava Geetha as Adult movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X