For Quick Alerts
ALLOW NOTIFICATIONS  
For Daily Alerts

  ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

  By Harshitha
  |
  ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ | Filmibeat Kannada

  ನಟಿ ಶ್ರೀದೇವಿ 'ಅತಿಲೋಕ ಸುಂದರಿ'... ಸೂಪರ್ ಸ್ಟಾರ್ ಆಗಿ ಮೆರೆದ ಶ್ರೀದೇವಿಗೆ ಏನು ತಾನೆ ಕಮ್ಮಿ.? ಆಸ್ತಿ, ಅಂತಸ್ತು, ಐಶ್ವರ್ಯ ಎಲ್ಲವೂ ಇದೆ. ಪ್ರೀತಿಸುವ ಗಂಡ, ಮುದ್ದಾದ ಮಕ್ಕಳಿದ್ದಾರೆ. ಕುಟುಂಬದ ಜೊತೆಗೆ ಶ್ರೀದೇವಿ ಸುಖೀ ಜೀವನ ನಡೆಸಿದ್ದಾರೆ ಅಂತೆಲ್ಲಾ ಜನ ಭಾವಿಸಬಹುದು. ಆದ್ರೆ, ಅದೇ ಸತ್ಯನಾ.?

  ಜನರ ಕಣ್ಣಿಗೆ ಕಾಣುತ್ತಿದ್ದ ಹಾಗೆ, ಶ್ರೀದೇವಿ ಖುಷಿ ಖುಷಿಯಾಗಿ ಇರಲಿಲ್ಲ. ನಂಬರ್ 1 ನಟಿಯಾಗಿ ಚಿತ್ರರಂಗವನ್ನ ಆಳಿದ್ದರೂ, ಶ್ರೀದೇವಿ ಬಳಿ ಒಂದು ಹೊತ್ತಲ್ಲಿ ನಯಾ ಪೈಸೆ ಇರಲಿಲ್ಲ. ಆಸ್ತಿಗಾಗಿ ಶ್ರೀದೇವಿ ವಿರುದ್ಧ ಆಕೆಯ ಸಹೋದರಿಯೇ ಕೋರ್ಟ್ ಮೆಟ್ಟಿಲೇರಿದ್ದೂ ಇದೆ.

  ಶ್ರೀದೇವಿ ಬದುಕಿನ ಇಂತಹ ಕಹಿ ಸತ್ಯವನ್ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫೇಸ್ ಬುಕ್ ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದರ ಅನುವಾದ ಇಲ್ಲಿದೆ, ಓದಿರಿ....

  ''ಶ್ರೀದೇವಿ ಅಭಿಮಾನಿಗಳಿಗೆ ನನ್ನದೊಂದು ಪ್ರೇಮ ಪತ್ರ

  ಇದನ್ನೆಲ್ಲ ಹೇಳಬೇಕೋ, ಬೇಡ್ವೋ ಅಂತ ನನ್ನ ಜೊತೆ ನಾನೇ ಚರ್ಚೆ ಮಾಡಿಕೊಂಡೆ ಯಾಕಂದ್ರೆ, ಇದರಲ್ಲಿ ಕೆಲವರ ಹೆಸರನ್ನ ಉಲ್ಲೇಖ ಮಾಡಿದ್ದೇನೆ. ಶ್ರೀದೇವಿ ಅಭಿಮಾನಿಗಳ ಆಸ್ತಿ ಎಂದು ನಾನು ಬಲವಾಗಿ ನಂಬಿದ್ದೇನೆ. ಹೀಗಾಗಿ, ಅಭಿಮಾನಿಗಳು ಸತ್ಯ ತಿಳಿದುಕೊಳ್ಳಲೇಬೇಕು'' - ರಾಮ್ ಗೋಪಾಲ್ ವರ್ಮ

  ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

  ನಾನಿನ್ನೂ ಶಾಕ್ ನಲ್ಲಿದ್ದೇನೆ

  ''ಶ್ರೀದೇವಿ ಸುರಸುಂದರಿ ಎಂದು ನಿಮ್ಮಂತೆಯೇ ನಾನು ಕೂಡ ನಂಬಿದ್ದೆ. ನಮಗೆಲ್ಲ ಗೊತ್ತಿರುವ ಹಾಗೆ ಶ್ರೀದೇವಿ ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್. ಎರಡು ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ಪ್ರಮುಖ ನಾಯಕಿ ಶ್ರೀದೇವಿ. ಅಕೆಯ ಸಾವಿನ ಬಗ್ಗೆ ನಾನು ಈಗಲೂ ಶಾಕ್ ನಲ್ಲಿದ್ದೇನೆ. ಆಕೆಯ ಬದುಕು ಹಾಗೂ ಸಾವು ಎಷ್ಟು ಕ್ರೂರ, ಅನಿರೀಕ್ಷಿತ, ನಿಗೂಢ ಎಂದು ಮತ್ತೊಮ್ಮೆ ಸಾಬೀತಾಗಿದೆ'' - ರಾಮ್ ಗೋಪಾಲ್ ವರ್ಮಾ

  ನಟಿ ಶ್ರೀದೇವಿ ಅಕಾಲ ಸಾವಿಗೆ ನಿಜವಾದ ಕಾರಣ 'ಇದೇ'ನಾ.?

  ಶ್ರೀದೇವಿ ಬದುಕನ್ನ ನಾನು ಬಲ್ಲೆ

  ''ಶ್ರೀದೇವಿ ಸಾವಿನ ಬಳಿಕ ಆಕೆ ಎಷ್ಟು ಸುಂದರವಾಗಿದ್ದಳು, ಎಷ್ಟು ಮನೋಜ್ಞವಾಗಿ ಅಭಿನಯಿಸುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದ್ರೆ, ನಾನು ಅದಕ್ಕಿಂತ ಹೆಚ್ಚು ಹೇಳುವುದಿದೆ. ಯಾಕಂದ್ರೆ, ಶ್ರೀದೇವಿ ಜೊತೆ ಎರಡು ಸಿನಿಮಾಗಳಲ್ಲಿ (ಕ್ಷಣ ಕ್ಷಣಂ ಹಾಗೂ ಗೋವಿಂದ ಗೋವಿಂದ) ನಾನು ಕೆಲಸ ಮಾಡಿದ್ದೆ. ಶ್ರೀದೇವಿ ಅವರನ್ನ ನಾನು ಹತ್ತಿರದಿಂದ ಬಲ್ಲವನಾಗಿದ್ದೆ. ಹೊರಗಿನ ಪ್ರಪಂಚ ಅಂದುಕೊಂಡಂತೆ ಸೆಲೆಬ್ರಿಟಿಗಳ ವೈಯುಕ್ತಿಕ ಜೀವನ ಇರುವುದಿಲ್ಲ. ಅದಕ್ಕೆ ಶ್ರೀದೇವಿ ವೈಯುಕ್ತಿಕ ಜೀವನವೇ ಉತ್ತಮ ಉದಾಹರಣೆ'' - ರಾಮ್ ಗೋಪಾಲ್ ವರ್ಮಾ

  ಸರ್ಪ್ರೈಸ್ ಕೊಡಲು ಹೋದ ಬೋನಿ ಕಪೂರ್ ಗೆ ಕಾದಿತ್ತು ಶಾಕ್: ಬಾತ್ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿ!

  ಶ್ರೀದೇವಿ ಖುಷಿಯಾಗಿ ಇದ್ರಾ.?

  ''ಎಲ್ಲರ ಕಣ್ಣಿಗೆ, ಶ್ರೀದೇವಿ ಜೀವನ ಅದ್ಭುತ.! ಸುಂದರ ವದನ, ಪ್ರತಿಭಾವಂತೆ, ಸುಸ್ಥಿತಿಯಲ್ಲಿರುವ ಕುಟುಂಬ, ಇಬ್ಬರು ಮುದ್ದಾದ ಪುತ್ರಿಯರು... ಹೀಗೆ ಶ್ರೀದೇವಿ ಜೀವನ ಹೊರಗಿನಿಂದ ಚೆಂದವಾಗಿ ಕಾಣುತ್ತಿತ್ತು. ಆದ್ರೆ, ಶ್ರೀದೇವಿ ನಿಜವಾಗಿಯೂ ಖುಷಿ ಜೀವನ ನಡೆಸುತ್ತಿದ್ದರೆ.?'' - ರಾಮ್ ಗೋಪಾಲ್ ವರ್ಮಾ

  ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ.! ಮತ್ತೆ.?

  ಪಂಜರದ ಪಕ್ಷಿಯಾಗಿದ್ದ ಶ್ರೀದೇವಿ

  ''ಶ್ರೀದೇವಿಯನ್ನ ಭೇಟಿ ಆದ ದಿನದಿಂದಲೇ ನಾನು ಅವರ ಜೀವನವನ್ನು ಬಲ್ಲೆ. ತಂದೆ ಸಾಯುವ ಮುನ್ನ ಆಕೆ ಸ್ವತಂತ್ರವಾಗಿ ಹಾರುತ್ತಿದ್ದ ಹಕ್ಕಿಯಂತಿದ್ದರು. ಆದ್ರೆ, ತಂದೆ ಸಾವಿನ ಬಳಿಕ ತಾಯಿಯ ಅತಿಯಾದ ಕಾಳಜಿಯಿಂದ ಆಕೆ ಪಂಜರದಲ್ಲಿ ಬಂಧಿಯಾದ ಪಕ್ಷಿಯಂತಾದರು'' - ರಾಮ್ ಗೋಪಾಲ್ ವರ್ಮಾ

  ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರ

  ಶ್ರೀದೇವಿ ಜೀವನಕ್ಕೆ ಬೋನಿ ಕಪೂರ್ ಬಂದಿದ್ದು ಯಾವಾಗ.?

  ''ಅಂದಿನ ಕಾಲದಲ್ಲಿ ನಟಿಯರಿಗೆ ಸಂಭಾವನೆ ಸಿಗುತ್ತಿದ್ದೇ ಕಪ್ಪು ಹಣದ ಮೂಲಕ. ಆದಾಯ ತೆರಿಗೆ ದಾಳಿಗೆ ಭಯಭೀತಿಗೊಂಡಿದ್ದ ಶ್ರೀದೇವಿ ತಂದೆ, ತಮ್ಮ ಸ್ನೇಹಿತರು, ಕುಟುಂಬದವರಿಗೆ ಹಣ ನೀಡಿದ್ದರು. ಆದ್ರೆ, ಶ್ರೀದೇವಿ ತಂದೆ ತೀರಿಕೊಂಡಾಗ ಆಕೆಯ ಸಹಾಯಕ್ಕೆ ಯಾರೂ ಬರಲಿಲ್ಲ. ಇದರ ಜೊತೆಗೆ ತಕರಾರು ಜಮೀನುಗಳಿಗೆ ಶ್ರೀದೇವಿ ತಾಯಿ ಹಣ ಹೂಡಿ ಕೈಸುಟ್ಟುಕೊಂಡಿದ್ದರು. ಶ್ರೀದೇವಿ ಬಳಿ ನಯಾ ಪೈಸೆಯೂ ಇಲ್ಲದ ಹೊತ್ತಿಗೆ ಆಕೆ ಜೀವನಕ್ಕೆ ಬೋನಿ ಕಪೂರ್ ಎಂಟ್ರಿಕೊಟ್ಟರು'' - ರಾಮ್ ಗೋಪಾಲ್ ವರ್ಮಾ

  ಶ್ರೀದೇವಿ ಕಣ್ಣೀರಿಗೆ ಹೆಗಲು ಕೊಟ್ಟ ಬೋನಿ ಕಪೂರ್

  ''ಅದಾಗಲೇ ಸಾಲ ಬಾಧೆಯಿಂದ ತತ್ತರಿಸಿದ್ದ ಬೋನಿ ಕಪೂರ್, ಶ್ರೀದೇವಿ ಕಣ್ಣೀರಿಗೆ ಹೆಗಲು ಕೊಟ್ಟರು'' - ರಾಮ್ ಗೋಪಾಲ್ ವರ್ಮಾ

  ಬೋನಿ ಕಪೂರ್ ಬಿಟ್ಟು ಇನ್ನೇನೂ ಉಳಿಯಲಿಲ್ಲ

  ''ಯು.ಎಸ್.ಎ ನಲ್ಲಿ ತಪ್ಪಾಗಿ ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ್ಮೇಲೆ, ಶ್ರೀದೇವಿ ತಾಯಿ ಮಾನಸಿಕವಾಗಿ ಅಸ್ವಸ್ಥಗೊಂಡರು. ಇದೇ ವೇಳೆ ತಂಗಿ ಶ್ರೀಲತಾ, ಪಕ್ಕದ ಮನೆಯವರ ಮಗನನ್ನು ವರಿಸಿದರು. ತಾಯಿ ಸಾಯುವ ಮುನ್ನ ಆಸ್ತಿಯನ್ನೆಲ್ಲ ಶ್ರೀದೇವಿ ಹೆಸರಿಗೆ ಬರೆದಿದ್ದರು. ಆದ್ರೆ, ವಿಲ್ ಮಾಡುವ ಹೊತ್ತಿಗೆ ತಾಯಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರಿಂದ, ಸಹೋದರಿ ಶ್ರೀಲತಾ ಕೋರ್ಟ್ ಮೆಟ್ಟಿಲೇರಿದರು. ಹೀಗಾಗಿ, ಶ್ರೀದೇವಿ ಬಳಿ ಬೋನಿ ಒಬ್ಬರನ್ನು ಬಿಟ್ಟು ಇನ್ನೇನು ಉಳಿಯಲಿಲ್ಲ'' - ರಾಮ್ ಗೋಪಾಲ್ ವರ್ಮಾ

  ಶ್ರೀದೇವಿ ವಿರುದ್ಧ ಬೋನಿ ಕಪೂರ್ ತಾಯಿ ಮುನಿಸು

  ''ಬೋನಿ ಕಪೂರ್ ಮೊದಲ ಪತ್ನಿ ಮೋನಾಗೆ ಮೋಸವಾಗಿದೆ ಎಂದು ಬೋನಿ ತಾಯಿ ಪಂಚತಾರಾ ಹೋಟೆಲ್ ಒಂದರಲ್ಲಿ ಶ್ರೀದೇವಿಗೆ ಛೀಮಾರಿ ಹಾಕಿ, ಹಲ್ಲೆ ನಡೆಸಿದ್ದರು. 'ಇಂಗ್ಲೀಷ್ ವಿಂಗ್ಲೀಷ್' ಸಿನಿಮಾದ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಸಮಯವನ್ನು ಹೊರತು ಪಡಿಸಿದರೆ, ಆಕೆಯ ಇಡೀ ಜೀವನ ದುಃಖದ ಸಾಗರವಾಗಿತ್ತು. ಭವಿಷ್ಯದ ಅನಿಶ್ಚಿತತೆ, ಕಹಿ ಘಟನೆಗಳು, ಅನಿರೀಕ್ಷಿತ ತಿರುವುಗಳಿಂದ ಆಕೆಯ ಖಾಸಗಿ ಜೀವನದ ಮೇಲೆ ಗಾಢ ಪರಿಣಾಮ ಬೀರಿತ್ತು'' - ರಾಮ್ ಗೋಪಾಲ್ ವರ್ಮಾ

  ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದ ಶ್ರೀದೇವಿ

  ''ಬಾಲ ಪತ್ರಿಭೆಯಾಗಿ ಅಕೆ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದರಿಂದ, ಸಾಮಾನ್ಯರಂತೆ ತನ್ನ ಬಾಲ್ಯವನ್ನ ಅನುಭವಿಸಲೇ ಇಲ್ಲ. ಎಲ್ಲರಿಗೂ ಆಕೆ ಸುರಸುಂದರಿಯಂತೆ ಕಂಗೊಳಿಸುತ್ತಿದ್ದಳು. ಆದ್ರೆ, ತಾನು ಸುಂದರಿ ಎಂಬ ಅರಿವು ಆಕೆಗಿತ್ತೇ.? ಹೌದು, ಇತ್ತು. ಪ್ರತಿಯೊಬ್ಬ ನಟಿಯಂತೆ ಆಕೆಗೂ 'ಮುಪ್ಪು' ಅನ್ನೋದೇ ಕೆಟ್ಟ ಕನಸಾಗಿತ್ತು. ಹೀಗಾಗಿ, ಚೆಂದ ಕಾಣಿಸಲು ಆಗಾಗ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಿದ್ದರು. ಕ್ಯಾಮರಾ ಹಿಂದೆಯೂ ಮನಸ್ಸಿಗೆ ಮೇಕಪ್ ಹಾಕಿಕೊಂಡು ತನ್ನತನವನ್ನ ಶ್ರೀದೇವಿ ಮುಚ್ಚಿಟ್ಟುಕೊಳ್ಳುತ್ತಿದ್ದರು'' - ರಾಮ್ ಗೋಪಾಲ್ ವರ್ಮಾ

  ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ

  ''ಶ್ರೀದೇವಿ ಸಾವಿನ ಸುತ್ತ ಏನೇ ಊಹಾಪೋಹ ಇರಬಹುದು. ಆದ್ರೆ, ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಬಯಸುತ್ತೇನೆ. ಯಾಕಂದ್ರೆ, ಸಾವಿನ ನಂತರವಾದರೂ ಆಕೆ ಶಾಂತವಾಗಿರಲಿ. ನನ್ನ ವೈಯುಕ್ತಿಕ ಅನುಭವದಲ್ಲಿ ಆಕೆ ನೆಮ್ಮದಿಯಿಂದ ಇರುತ್ತಿದ್ದದ್ದು ಕ್ಯಾಮರಾ ಮುಂದೆ ಮಾತ್ರ. ಅದು ಆಕ್ಷನ್ ಮತ್ತು ಕಟ್ ಹೇಳುವ ಮಧ್ಯೆ ಮಾತ್ರ. ಎಲ್ಲ ನೋವಿನಿಂದ ಮುಕ್ತಗೊಂಡು ಇನ್ನಾದರೂ ಶ್ರೀದೇವಿ ನೆಮ್ಮದಿ ಆಗಿರುತ್ತಾರೆ ಎಂದು ನಾನು ನಂಬಿದ್ದೇನೆ'' - ರಾಮ್ ಗೋಪಾಲ್ ವರ್ಮಾ

  ನನ್ನ ಕಣ್ಣೀರಧಾರೆ ನಿಲ್ಲಿಸಲು ಸಾಧ್ಯ ಇಲ್ಲ

  ''ಪುನರ್ಜನ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ. ಆದ್ರೆ, ಶ್ರೀದೇವಿ ವಿಷಯದಲ್ಲಿ ಅದು ನಿಜವಾಗಲಿ ಎಂದು ಭಾವಿಸುತ್ತೇನೆ. ಮತ್ತೆ ಹುಟ್ಟಿ ಬನ್ನಿ ಶ್ರೀದೇವಿ. ಇದೊಂದು ಅವಕಾಶ ನಮಗೆ ಕೊಡಿ. ಶ್ರೀದೇವಿ ಬಗ್ಗೆ ನಾನು ಎಷ್ಟೇ ಬರೆದರೂ, ನನ್ನ ಕಣ್ಣೀರಧಾರೆ ನಿಲ್ಲಿಸಲು ಸಾಧ್ಯವಿಲ್ಲ....'' - ರಾಮ್ ಗೋಪಾಲ್ ವರ್ಮಾ

  English summary
  Ram Gopal Varma recalls Bollywood Actress Sridevi's bitter past in an open letter to fans.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more