For Quick Alerts
  ALLOW NOTIFICATIONS  
  For Daily Alerts

  ರಮ್ಯಾ, ಜಗ್ಗೇಶ್ 'ನೀರ್ ದೋಸೆ'ಗೆ ಶೂಟಿಂಗ್ ಫಿಕ್ಸ್

  By Rajendra
  |

  ಒಲ್ಲೆ ಒಲ್ಲೆ ಎನ್ನುತ್ತಿದ್ದ ಗೋಲ್ಡನ್ ಗರ್ಲ್ ರಮ್ಯಾ ಅವರು 'ನೀರ್ ದೋಸೆ' ಸವಿಯಲು ಕಡೆಗೂ ಮನಸ್ಸು ಮಾಡಿದ್ದಾರೆ. ಅವರ ಜೊತೆ ನವರಸ ನಾಯಕ ಜಗ್ಗೇಶ್ ಕೂಡ ಸಿದ್ಧವಾಗಿದ್ದಾರೆ. ಇದೇ ಮಾರ್ಚ್ 15ರಿಂದ 'ನೀರ್ ದೋಸೆ' ಚಿತ್ರೀಕರಣ ಶುರುವಾಗುತ್ತಿದೆ.

  ಈಗಾಗಲೆ ಮುಹೂರ್ತ ಮುಗಿಸಿಕೊಂಡಿರುವ 'ನೀರ್ ದೋಸೆ' ಚಿತ್ರಕ್ಕೆ ರಮ್ಯಾ ಮೊದಲು ನಾಯಕಿ ಎನ್ನಲಾಗಿತ್ತು. ಬಳಿಕ ಅವರು ಕಾರಣಾಂತರಗಳಿಂದ ನೀರ್ ದೋಸೆ ಬೇಡ ಎಂದಿದ್ದರು. ಸರಿ ನಿರ್ಮಾಪಕರು ವಿಧಿಯಿಲ್ಲದೆ ರಾಗಿಣಿ ದ್ವಿವೇದಿಯನ್ನು ಕರೆತರಲು ಮುಂದಾಗಿದ್ದರು.

  ನೀರ್ ದೋಸೆ ಇನ್ನೇನು ರಾಗಿಣಿ ದ್ವಿವೇದಿ ಪಾಲಾಯಿತು ಎನ್ನುವ ಹೊತ್ತಿಗೆ ರಮ್ಯಾ ನಾನೇ ಅಭಿನಯಿಸುತ್ತೇನೆ ಎಂದರು. ಅಲ್ಲಿಗೆ ನೀರ್ ದೋಸೆಗೆ ರಮ್ಯಾ ಪಕ್ಕಾ ಆದರು. ಶೂಟಿಂಗ್ ಮಾರ್ಚ್ 15ಕ್ಕೆ ಆರಂಭವಾಗುತ್ತಿದ್ದರೂ ರಮ್ಯಾ ಭಾಗದ ಚಿತ್ರೀಕರಣ ಮಾರ್ಚ್ 23ರ ಬಳಿಕ ನಡೆಯಲಿದೆ.

  ಇದಕ್ಕೂ ಮುನ್ನ ಮಾರ್ಚ್ 21ಕ್ಕೆ ಜಗ್ಗೇಶ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. 'ಸಿದ್ಲಿಂಗು' (ಚಿತ್ರ ವಿಮರ್ಶೆ ಓದಿ) ಚಿತ್ರವನ್ನು ನಿರ್ದೇಶಿಸಿದ್ದ ವಿಜಯಪ್ರಸಾದ್ ಚಿತ್ರದ ನಿರ್ದೇಶಕರು. ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದ ನಿರ್ಮಾಪಕ ಸುಧೀಂದ್ರ. ಚಿತ್ರದ ಪಾತ್ರವರ್ಗದಲ್ಲಿ ದತ್ತಣ್ಣ ಹಾಗೂ ಭಾವನಾ ಅವರು ಇದ್ದಾರೆ.

  ಚಿತ್ರದಲ್ಲಿ ರಮ್ಯಾ ಅವರು ವೇಶ್ಯೆ ಪಾತ್ರ ಪೋಷಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಪಾತ್ರ ಮಾಡಿದರೆ ಎಲ್ಲಿ ತಮ್ಮ ಗೌರವಕ್ಕೆ ಧಕ್ಕೆ ಬರುತ್ತದೋ ಎಂದು ಭಾವಿಸಿದ್ದರಂತೆ. ಈಗ ಕಥೆಯಲ್ಲೂ ಒಂಚೂರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ. ಈ ನೀರ್ ದೋಸೆ ಬಗ್ಗೆ ಒಂದು ಸಖತ್ ಮಜವಾದ ಕಥೆಯೊಂದಿಗೆ ಓದಿ. (ಒನ್ಇಂಡಿಯಾ ಕನ್ನಡ)

  English summary
  Golden Girl Ramya and Navarasa Nayaka Jaggesh lead forth coming film Neer Dose is all set to start from the 15th of March. The actress had initially denied reports of her playing the lead role, when the film was announced.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X