»   » ರಿಯಲ್ ಸ್ಟಾರ್ ಉಪೇಂದ್ರ 'ಬ್ರಹ್ಮ' ಚಿತ್ರದ ಹೈಲೈಟ್ಸ್

ರಿಯಲ್ ಸ್ಟಾರ್ ಉಪೇಂದ್ರ 'ಬ್ರಹ್ಮ' ಚಿತ್ರದ ಹೈಲೈಟ್ಸ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಬ್ರಹ್ಮ ಚಿತ್ರದ ರಿಲೀಸ್ ಗೆ ಇನ್ನು ಕೆಲವೇ ಕೆಲವು ಗಂಟೆಗಳಷ್ಟೇ ಬಾಕಿ ಇದೆ. ಫೆಬ್ರವರಿ 7ಕ್ಕೆ ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬ್ರಹ್ಮ ತೆರೆಕಾಣುತ್ತಿದೆ. ಈ ಚಿತ್ರದ ವಿಶೇಷಗಳು ಒಂದೆರಡಲ್ಲ.

ಆರ್ ಚಂದ್ರು ಅವರು ಈಗಾಗಲೆ ಸಕ್ಸಸ್ ಫುಲ್ ನಿರ್ದೇಶಕ ಎನ್ನಿಸಿಕೊಂಡವರು. ಇನ್ನು ಉಪ್ಪಿ ಏನು ಎಂಬುದು ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ಈ ಇಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ. [ಆರ್ ಚಂದ್ರು ಸಂದರ್ಶನ]

ಆರಂಭದಿಂದಲೂ ನಿರ್ದೇಶಕ ಆರ್ ಚಂದ್ರು ಅವರು ತಮ್ಮ ಚಿತ್ರದ ಬಗ್ಗೆ ಎಳ್ಳಷ್ಟೂ ಸುಳಿವು ಬಿಟ್ಟುಕೊಟ್ಟಿಲ್ಲ. ಇನ್ನು ಉಪೇಂದ್ರ ಅವರು ಅಷ್ಟೇ ತಮ್ಮ ಪಾತ್ರದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಹಾಗಾಗಿ ಚಿತ್ರರಸಿಕರಲ್ಲಿ ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇದೆ. ಬನ್ನಿ ನೋಡೋಣ ಬ್ರಹ್ಮ ಚಿತ್ರದ ಹೈಲೈಟ್ಸ್.

'ಬ್ರಹ್ಮ' ಬರೆಯಲಿದೆಯ ಬಾಕ್ಸ್ ಆಫೀಸ್ ಹಣೆಬರಹ

ಮೊದಲೇ ಭಾರಿ ಬಜೆಟ್ ಚಿತ್ರ. ಇನ್ನು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಮೊದಲ ಸಲ ಉಪ್ಪಿಗೆ ಮಿಲ್ಕಿ ಬ್ಯುಟಿ ಪ್ರಣೀತಾ ಜೋಡಿ. ಚಿತ್ರದಲ್ಲಿ ಉಪೇಂದ್ರ ಅವರದು ದ್ವಿಪಾತ್ರಾಭಿನಯ.

ಈ ಚಿತ್ರಕ್ಕೂ ತೆಲುಗಿನ 'ಮಗಧೀರ'ನಿಗೂ ಸಂಬಂಧವಿಲ್ಲ

ಬ್ರಹ್ಮ ಚಿತ್ರದ ಸ್ಟಿಲ್ಸ್ ನೋಡಿದ ಕೆಲವರು ಇದು ತೆಲುಗಿನ 'ಮಗಧೀರ' ಚಿತ್ರದಂತೆಯೇ ಇದೆಯಲ್ಲಾ ಎಂದು ಅನುಮಾನಪಟ್ಟಿದ್ದರು. ಆದರೆ ಅದಕ್ಕೂ ಇದಕ್ಕೂ ಯಾವುದೇ ತರದಲ್ಲೂ ಸಂಬಂಧವಿಲ್ಲ ಎಂದಿದ್ದಾರೆ ಚಿತ್ರದ ನಿರ್ದೇಶಕ ಆರ್ ಚಂದ್ರು. ಇದೊಂದು ಕಂಪ್ಲೀಟ್ ಡಿಫರೆಂಟ್ ಚಿತ್ರ ಎನ್ನುತ್ತಾರೆ.

ನಾಲ್ಕು ತಲೆಮಾರುಗಳ ಸುತ್ತ ಸುತ್ತವ ಕಥೆ

ಇದೊಂದು ನಾಲ್ಕು ತರೆಮಾರುಗಳ ಸುತ್ತ ಸುತ್ತವ ಕಥೆ. ಚಿತ್ರದಲ್ಲಿನ ಉಪೇಂದ್ರ ಅವರ ನಾಲ್ಕು ಗೆಟಪ್ ಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಲವರ್ ಬಾಯ್, ವಾರಿಯರ್, ಡಾನ್, ಪ್ಲೇಯರ್ ಹೀಗೆ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಹದಿನಾರರಿಂದ ಇಪ್ಪತ್ತೊಂದನೇ ಶತಮಾನ

ನಾಲ್ಕು ತಲೆಮಾರುಗಳ ಕಥೆ ಎಂದರೆ ಹದಿನಾರದಿಂದ ಇಪ್ಪತ್ತೊಂದನೇ ಶತಮಾನದ ನಡುವಿನ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಚಿತ್ರ ಬಿಡುಗಡೆಯಾದ ಮೇಲಷ್ಟೇ ಇದು ಗೊತ್ತಾಗಲಿದೆ. ಚಿತ್ರದ ವಿತರಣೆ ಹಕ್ಕುಗಳು ಈಗಾಗಲೆ ರು.15 ಕೋಟಿಗೆ ಮಾರಾಟವಾಗಿವೆ.

ಮೈಸೂರು ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಶೂಟಿಂಗ್

ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಎಂಟು ದಿನಗಳ ಕಾಲ ಚಿತ್ರೀಕರಸಲಾಗಿದೆ. ಬೆಂಗಳೂರು ಅರಮನೆಯಲ್ಲೂ ಚಿತ್ರೀಕರಣ ನಡೆದಿರುವುದು ವಿಶೇಷ. ಬ್ಯಾಂಕಾಕ್ ನಲ್ಲೂ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.

ಗುರುಕಿರಣ್ ಸಂಗೀತ ಸಂಯೋಜನೆ

ಗುರುಕಿರಣ್ ಸಂಗೀತ ಇರುವ ಚಿತ್ರದ ಹಾಡುಗಳು ಈಗಾಗಲೆ ಅಭಿಮಾನಿಗಳನ್ನು ರಂಜಿಸುತ್ತಿವೆ. ಸುಮಾರು 70 ರಿಂದ 75 ಸಾವಿರ ಸಿಡಿಗಳು ಮಾರಾಟವಾಗಿದ್ದು ಪ್ಲಾಟಿನಂ ಡಿಸ್ಕ್ ಸಹ ಬಿಡುಗಡೆ ಮಾಡಲಾಗಿದೆ.

ಚಿತ್ರದ ಪಾತ್ರವರ್ಗದಲ್ಲಿ ಯಾರಿದ್ದಾರೆ?

ನಾಸಿರ್, ಸೋನು ಸೂದ್, ರಾಹುಲ್ ದೇವ್ ಹಾಗೂ ಶಯ್ಯಾಜಿ ಶಿಂಧೆ ಮುಖ್ಯ ಪಾತ್ರಗಳಲ್ಲಿದ್ದರೆ ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಸುಮಿತ್ರಾ, ಪದ್ಮಜಾ ರಾವ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬ್ರಹ್ಮ ಚಿತ್ರದಲ್ಲಿ ಏನೇನು ಇದೆ?

ಚಿತ್ರದ ನಿರ್ದೇಶಕರ ಪ್ರಕಾರ ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ಅದ್ದೂರಿ ಫೈಟ್ ಗಳಿವೆ, ರೋಮಾಂಚನಗೊಳಿಸುವ ಚೇಸಿಂಗ್ ದೃಶ್ಯಗಳಿವೆ, ಕಣ್ಣಿಗೆ ತಂಪೆರೆಯುವ ಹಾಡುಗಳಿವೆ, ಇವೆಲ್ಲಕ್ಕಿಂತ ಮುಖ್ಯವಾಗಿ ಕಥೆ ಇದೆ.

'ಬ್ರಹ್ಮ'ನ ರಾಣಿ ಪ್ರಣೀತಾ ಪಾತ್ರ ಬಗ್ಗೆ

ಚಿತ್ರದಲ್ಲಿ ಪ್ರಣೀತಾ ಅವರದು ಹೆಚ್ಚಾಗಿ ಗ್ಲಾಮರ್ ಗೆ ಒತ್ತು ನೀಡಲಾಗಿರುವ ಪಾತ್ರ. ಹಾಗಂತ ಅಭಿನಯ ಇಲ್ಲವೇ ಇಲ್ಲ ಎಂದಲ್ಲ. ಉಪ್ಪೇಂದ್ರ ಜೊತೆ ಅಭಿನಯಿಸಬೇಕು ಎಂಬುದು ಪ್ರಣೀತಾರ ಬಹುದಿನಗಳ ಕನಸಂತೆ. ಅದು ಬ್ರಹ್ಮನ ರೂಪದಲ್ಲಿ ನೆರವೇರುತ್ತಿರುವ ಬಗ್ಗೆ ಅವರು ಸಹವಾಗಿಯೇ ಖುಷಿಯಾಗಿದ್ದಾರೆ.

ಸದ್ಯಕ್ಕೆ ತೆಲುಗು, ತಮಿಳು ಬ್ರಹ್ಮನಿಗೆ ಮೋಕ್ಷವಿಲ್ಲ

ಇದು ತ್ರಿಭಾಷಾ ಚಿತ್ರವಾಗಿದ್ದರೂ ಸದ್ಯಕ್ಕೆ ತಮಿಳು ಹಾಗೂ ತೆಲುಗು ಚಿತ್ರಗಳಿಗೆ ಮೋಕ್ಷವಿಲ್ಲ. ಏಕೆಂದರೆ ಪೈರಸಿ ಆಗುತ್ತದೆ ಎಂಬ ಕಾರಣಕ್ಕೆ ತೆಲುಗು, ತಮಿಳು ಆವೃತ್ತಿಗಳನ್ನು ನಿಧಾನಕ್ಕೆ ಬಿಡುಗಡೆ ಮಾಡುವುದಾಗಿ ಚಂದ್ರು ಹೇಳಿದ್ದಾರೆ.

English summary
Real Star Upendra Brahma highlights.It is a historical drama romance film directed by R. Chandru and produced by Manjunath Babu. The film spanning four generations, from the 16th to the 21st century, features an original soundtrack by Gurukiran It's Distribution rights has sold out for 15 crores.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada