For Quick Alerts
  ALLOW NOTIFICATIONS  
  For Daily Alerts

  "ನಮ್ಮತ್ರ ಎರಡ್ಮೂರು ರೀಮೆಕ್ ರೈಟ್ಸ್ ಇದೆ, ಆದ್ರೆ ಈಗ..": ದರ್ಶನ್

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್‌ವುಡ್‌ನಲ್ಲಿ 'ಕ್ರಾಂತಿ' ಫೀವರ್ ಜೋರಾಗಿದೆ. ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 2 ದಿನಕ್ಕೆ ಲಕ್ಕಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಇನ್ನು 2 ದಿನ ಇರುವಾಗಲೇ ಸಿನಿಮಾ ಒಂದೂವರೆ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈಗಾಗಲೇ ಮೊದಲ ದಿನದ ಕೆಲ ಶೋಗಳು ಸೋಲ್ಡೌಟ್ ಆಗಿದೆ.

  'ಕ್ರಾಂತಿ' ಚಿತ್ರದಲ್ಲಿ ಒಂದು ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ನಡೀತಿದೆ. ಇದು ಯಾವುದೇ ಸಿನಿಮಾ ರೀಮೆಕ್ ಅಲ್ಲ. ಸ್ವಂತ ಕಥೆ ಎಂದು ಸ್ವತಃ ದರ್ಶನ್ ಹೇಳುತ್ತಾ ಬರುತ್ತಿದ್ದಾರೆ. ನಟ ವಿನಾಯ್ ಜೋಶಿ ಯೂಟ್ಯೂಬ್‌ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಶಿರಬಾಗಿದ್ದಾರೆ. ಅಭಿಮಾನಿಗಳೇ ಅನ್ನದಾತರು ಎಂದಿದ್ದಾರೆ. 'ಕ್ರಾಂತಿ' ಚಿತ್ರದಲ್ಲಿ ಒಂದು ಸಂದೇಶ ಇದೆ. ಜೊತೆಗೆ ಅಭಿಮಾನಿಗಳು ಬಯಸುವ ಮನರಂಜನೆ ಕೂಡ ಇದೆ ಎಂದಿದ್ದಾರೆ.

  'ಕ್ರಾಂತಿ' ಸಿನಿಮಾ ಬೆಂಬಲಿಸಿದ ಅಪ್ಪು ಅಭಿಮಾನಿಗಳು! ಭೇಷ್ ಎಂದ ನೆಟ್ಟಿಗರು'ಕ್ರಾಂತಿ' ಸಿನಿಮಾ ಬೆಂಬಲಿಸಿದ ಅಪ್ಪು ಅಭಿಮಾನಿಗಳು! ಭೇಷ್ ಎಂದ ನೆಟ್ಟಿಗರು

  ತಮ್ಮ ಬಾಲ್ಯ, ಶಾಲಾ ದಿನಗಳು, ಪ್ರಾಣಿಗಳ ಮೇಲಿನ ಮಮಕಾರ ಎಲ್ಲವನ್ನು ವಿವರಿಸಿದ್ದಾರೆ. ಇನ್ನು 'ಕ್ರಾಂತಿ' ಚಿತ್ರದಲ್ಲಿ ಯಾವುದೇ ಕೌಂಟರ್ ಡೈಲಾಗ್ ಇಲ್ಲ. ಆದರೆ ಡೈಲಾಗ್‌ಗಳನ್ನು ಯಾರಿಗಾದರೂ ಹೋಲಿಸಿಕೊಂಡರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  'ಕ್ರಾಂತಿ' ರೀಮೆಕ್ ಸಿನಿಮಾನಾ?

  'ಕ್ರಾಂತಿ' ರೀಮೆಕ್ ಸಿನಿಮಾನಾ?

  'ಕ್ರಾಂತಿ' ರೀಮೆಕಾ ಎನ್ನುವ ಪ್ರಶ್ನೆಗೆ ದರ್ಶನ್, "101% ಇದು ರೀಮೆಕ್ ಸಿನಿಮಾ ಅಲ್ಲ, ರೀಮೆಕ್ ಮಾಡೋದು ಬಿಟ್ಟು ಸುಮಾರು ವರ್ಷಗಳಾಯಿತು. ಈಗಲೂ ನಮ್ಮತ್ರ ಎರಡ್ಮೂರು ರೀಮೆಕ್ ರೈಟ್ಸ್ ಇದೆ. ಮಾಡೋಣ ಸರ್ ಅಂತಾರೆ. ನಾನು ಹೇಳ್ದೆ ಇಷ್ಟೊಂದು ಚಾನಲ್ ಇದೆ. ಎಲ್ಲದರಲ್ಲೂ ಡಬ್ ಮಾಡಿ ಬಿಟ್ಟಿರುತ್ತಾರೆ. ರೀಮೆಕ್ ಮಾಡುವುದು ವೇಸ್ಟ್ ಈಗ. 'ಕ್ರಾಂತಿ' ಹಚ್ಚ ಕನ್ನಡದ ಸಿನಿಮಾ. ನಮ್ಮ ಸ್ವಂತಿಕೆ ಇರುವಂತಹ ಸಿನಿಮಾ" ಎಂದಿದ್ದಾರೆ.

  ಕನ್ನಡ ಚಲನಚಿತ್ರ ಕಪ್‌ಗೆ ಯಶ್, ದರ್ಶನ್‌ರನ್ನು ಕರೆದಿಲ್ವಾ? ಸುದೀಪ್ ಕೊಟ್ಟ ಉತ್ತರವಿದು!ಕನ್ನಡ ಚಲನಚಿತ್ರ ಕಪ್‌ಗೆ ಯಶ್, ದರ್ಶನ್‌ರನ್ನು ಕರೆದಿಲ್ವಾ? ಸುದೀಪ್ ಕೊಟ್ಟ ಉತ್ತರವಿದು!

  'ವೇದಾಳಂ' ರೀಮೆಕ್ ರೈಟ್ಸ್?

  'ವೇದಾಳಂ' ರೀಮೆಕ್ ರೈಟ್ಸ್?

  4 ವರ್ಷಗಳ ಹಿಂದೆ ದರ್ಶನ್ ತಮಿಳಿನ 'ವೇದಾಳಂ' ಸಿನಿಮಾ ರೀಮೆಕ್‌ನಲ್ಲಿ ನಟಿಸ್ತಾರೆ ಎನ್ನಲಾಗಿತ್ತು. ಚಿತ್ರದಲ್ಲಿ ಅಮೂಲ್ಯ ದರ್ಶನ್ ಸಹೋದರಿಯ ಪಾತ್ರ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಂತರ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಇನ್ನೆರಡು ರೀಮೆಕ್ ರೈಟ್ಸ್ ಯಾವುದು ಎನ್ನುವ ಚರ್ಚೆ ನಡೀತಿದೆ. ಒಟ್ನಲ್ಲಿ ಚಿತ್ರರಂಗದಲ್ಲೀಗ ರೀಮೆಕ್ ಟ್ರೆಂಡ್ ನಿಂತು ಹೋಗಿದೆ. ಕಂಟೆಂಟ್ ಬೇಸ್ಡ್ ಸ್ವಮೇಕ್ ಸಿನಿಮಾಗಳನ್ನು ಮಾಡಬೇಕಿದೆ. ಒಂದ್ಕಾಲದಲ್ಲಿ ಸಾಕಷ್ಟು ರೀಮೆಕ್ ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಿದ್ದರು. ಈಗ ರೀಮೆಕ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತು ಅಭಿಮಾನಿಗಳಿಗೂ ಖುಷಿ ತಂದಿದೆ.

  ರೀಮೆಕ್ ಮಾಡಿ ಗೆದ್ದಿರುವ ದರ್ಶನ್

  ರೀಮೆಕ್ ಮಾಡಿ ಗೆದ್ದಿರುವ ದರ್ಶನ್

  ದಶಕದ ಹಿಂದೆ ಒಂದಷ್ಟು ರೀಮೆಕ್ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದರು. ಸೋತಾಗಲೆಲ್ಲಾ ರೀಮೆಕ್ ಸಿನಿಮಾ ಮಾಡಿ ಕಂಬ್ಯಾಕ್ ಮಾಡಿದ್ದು ಇದೆ. ತೆಲುಗಿನ 'ಡಾರ್ಲಿಂಗ್' ಚಿತ್ರವನ್ನು 'ಬುಲ್ ಬುಲ್' ಹೆಸರಿನಲ್ಲಿ ಕನ್ನಡಕ್ಕೆ ತಂದು ತಂಡ ಗೆದ್ದಿತ್ತು. ಅದಕ್ಕು ಮುನ್ನ ತೆಲುಗಿನ 'ಭದ್ರ' ಚಿತ್ರವನ್ನು 'ಗಜ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಇದೇ ಸಿನಿಮಾ ಬಾಕ್ಸಾಫೀಸ್ ಸುಲ್ತಾನ್ ಎನ್ನುವ ಬಿರುದು ತಂದುಕೊಟ್ಟಿತ್ತು. ಆದರೆ ನಂತರ ಒಂದಷ್ಟು ಸಿನಿಮಾಗಳು ಕೈ ಹಿಡಿಯಲಿಲ್ಲ.

  'ಕ್ರಾಂತಿ' ಚಿತ್ರದ ಕಥೆಯೇನು?

  'ಕ್ರಾಂತಿ' ಚಿತ್ರದ ಕಥೆಯೇನು?

  ನಿರೂಪಕ ವಿನಾಯಕ್ ಜೋಶಿ, ನಮಗೆ ಗೊತ್ತಿರುವಂತೆ ಸಿನಿಮಾ ಕಥೆ ಏನು ಅಂದ್ರೆ, "ಒಬ್ಬ ಸ್ಮಾರ್ಟ್ ಆಗಿರುವ ಎನ್‌ಆರ್‌ಐ ಅವರ ಊರಿಗೆ ವಾಪಸ್ ಬರ್ತಾರೆ. ಒಂದು ಉದ್ದೇಶಕ್ಕೋಸ್ಕರ. ಆ ಉದ್ದೇಶ ಏನು? ಅದಕ್ಕಾಗಿ ಎಷ್ಟು ಹೋರಾಡುತ್ತಾರೆ, 'ಕ್ರಾಂತಿ' ಮಾಡ್ತಾನೆ ಎನ್ನುವುದೇ ಸಿನಿಮಾ ಕಥೆ ಎಂದಾಗ, 101% ಪರ್ಸೆಂಟ್ ನಿಜ ಎಂದು ದರ್ಶನ್ ಹೇಳಿದ್ದಾರೆ. ಮಾತು ಮುಂದುವರೆಸುವ ದರ್ಶನ್, ಯಾವುದೇ ಉದ್ದೇಶಕ್ಕಾಗಿ ಅವನು ಬರುವುದಿಲ್ಲ. ಅವನು ಓದಿದ ಸರ್ಕಾರಿ ಶಾಲೆ 100 ವರ್ಷ ಪೂರೈಸಿದ ಹಬ್ಬ ಇರುತ್ತದೆ. ಆ ಕಾರ್ಯಕ್ರಮಕ್ಕೆ ಬಂದಾಗ ಮುಂದೆ ಏನೆಲ್ಲಾ ನಡೆಯುತ್ತೆ? ಎನ್ನುವುದೇ ಸಿನಿಮಾ ಕಥೆ ಎಂದು ಹೇಳಿದ್ದಾರೆ.

  English summary
  Reason Behind why kranti actor Darshan Won't Accepte Remake movies These days. Kranti to release in theatres on January 26, 2023. Know more.
  Tuesday, January 24, 2023, 8:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X