For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಅಚ್ಚರಿ: 'ನಾಗರಹಾವಿನ' ಹೆಡೆ ಮುಂದೆ ನಟಿ ರಮ್ಯಾ.!

  By Harshitha
  |

  ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ನಟಿ ರಮ್ಯಾ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. 'ನೀರ್ ದೋಸೆ' ಹಾಗೂ 'ದಿಲ್ ಕಾ ರಾಜಾ' ಚಿತ್ರಗಳಿಂದ ಹೊರಬಂದ ಮೇಲೆ ''ಇನ್ಮೇಲೆ ಆಕ್ಟಿಂಗ್ ಮಾಡಲ್ಲ. ಜನ ಸೇವೆ ಮಾತ್ರ'' ಅಂತ ಬಹಿರಂಗವಾಗಿ ರಮ್ಯಾ ಹೇಳಿಕೊಂಡಿದ್ದರು.

  ಬಣ್ಣದ ಪ್ರಪಂಚಕ್ಕೆ ರಮ್ಯಾ ಗುಡ್ ಬೈ ಹೇಳುವ ಮನಸ್ಸು ಮಾಡಿರೋದು ದಿಟ. ಅದಕ್ಕೂ ಮುನ್ನ ಅಭಿಮಾನಿಗಳ ಮನಸ್ಸಿಗೆ ನಿರಾಸೆ ಮಾಡ್ಬಾರದು ಎಂಬ ಕಾರಣಕ್ಕೆ 'ನಾಗರಹಾವು' ಚಿತ್ರವನ್ನ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ.

  'ನಾಗರಹಾವು' ಎಂದ ತಕ್ಷಣ ನಿಮಗೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಥಟ್ ಅಂತ ನೆನಪಿಗೆ ಬರಬಹುದು. ಡಾ.ವಿಷ್ಣು ರವರ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸ್ಯಾಂಡಲ್ ವುಡ್ ಸ್ಟಾರ್ಸ್ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದನ್ನು ನೀವೇ ನೋಡಿದ್ದೀರಾ. ['ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!]

  ಆದ್ರೆ, ಅದೇ 'ನಾಗರಹಾವು' ಚಿತ್ರದಲ್ಲಿ ನಟಿ ರಮ್ಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಹಾಗ್ನೋಡಿದ್ರೆ, 'ನಾಗರಹಾವು' ಚಿತ್ರಕ್ಕೆ ನಾಯಕ ದಿಗಂತ್ ಹಾಗೂ ನಾಯಕಿ ರಮ್ಯಾ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಾತ್ರ ಹೆಡ್ ರೀಪ್ಲೇಸ್ಮೆಂಟ್ ಟೆಕ್ನಾಲಜಿ ಮೂಲಕ ಡಾ.ವಿಷ್ಣುವರ್ಧನ್ ರವರನ್ನ ತೆರೆ ಮೇಲೆ ತರಲಾಗುತ್ತಿದೆ ಅಷ್ಟೆ. [ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ]

  'ನಾಗರಹಾವು' ಚಿತ್ರದಲ್ಲಿ ರಮ್ಯಾ 'ನಾಗಿಣಿ' ಆಗಿ ಕಾಣಿಸಿಕೊಳ್ಳಲಿದ್ದಾರೆ ಅಂತ ಮೊನ್ನೆಯಷ್ಟೇ ನಾವೇ ವರದಿ ಮಾಡಿದ್ವಿ. ಹಾಗೆ, 'ನಾಗಿಣಿ' ರೂಪದಲ್ಲಿ ರಮ್ಯಾ ಹೇಗೆ ಮಿಂಚಬಹುದು ಎಂಬ ಕುತೂಹಲ ಇದ್ರೆ, ಈ ಪೋಸ್ಟರ್ ನೋಡಿ....

  'ನಾಗರಹಾವು' ಚಿತ್ರದ ಬಹುದೊಡ್ಡ ಸರ್ ಪ್ರೈಸ್ ಅಂದ್ರೆ ಇದೇ. ಇದುವರೆಗೂ ಅಭಿನಯಿಸದ ಪಾತ್ರದಲ್ಲಿ, ಕಾಣಿಸಿಕೊಳ್ಳದ ಗೆಟಪ್ ನಲ್ಲಿ ನಟಿ ರಮ್ಯಾ 'ನಾಗರಹಾವು' ಚಿತ್ರದ ಮೂಲಕ ಮಿಂಚಲಿದ್ದಾರೆ. ಅಂದ್ಹಾಗೆ, 'ನಾಗರಹಾವು' ಚಿತ್ರದಲ್ಲಿ ನಟಿ ರಮ್ಯಾ ಸ್ಟಿಕ್ ಫೈಟಿಂಗ್ ಕೂಡ ಮಾಡಲಿದ್ದಾರೆ.

  'ಅರುಂಧತಿ', 'ಅಂಜಿ', 'ದೇವಿ', 'ಅಮ್ಮೋರು' ಚಿತ್ರಗಳಿಗೆ ಹೆಸರುವಾಸಿ ಆಗಿರುವ ಕೋಡಿ ರಾಮಕೃಷ್ಣ 'ನಾಗರಹಾವು' ಚಿತ್ರದ ಸೂತ್ರಧಾರ. ಹೀಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿದೆ.

  ಸದ್ಯಕ್ಕೆ 'ನಾಗರಹಾವು' ಅಡ್ಡದಿಂದ ಬಂದಿರುವ ಸುದ್ದಿ ಇಷ್ಟೆ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

  English summary
  Kannada Actress, EX MP, Congress Politician Ramya dones a different avatar for Kannada Movie 'Naagarahaavu'. Check out the first look poster here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X