For Quick Alerts
  ALLOW NOTIFICATIONS  
  For Daily Alerts

  ಇದಪ್ಪಾ 'ಕಾಂತಾರ' ಕ್ರೇಜ್: ಮತ್ತೊಂದು ಭಾಷೆಗೆ ಡಬ್ ಆಗಿ ಡಿಸೆಂಬರ್‌ ಮೊದಲ ವಾರ ರಿಲೀಸ್

  |

  50 ದಿನದ ಹೊಸ್ತಿಲಲ್ಲಿ ಇದ್ದರೂ 'ಕಾಂತಾರ' ಹವಾ ಕಿಂಚಿತ್ತೂ ಕಮ್ಮಿ ಆಗಿಲ್ಲ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರೋ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಾನೇ ಇದೆ. ಹೊರರಾಜ್ಯಗಳಲ್ಲಿ ಹೊರದೇಶಗಳಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಇದೀಗ ಮತ್ತೊಂದು ಭಾಷೆಯಲ್ಲಿ 'ಕಾಂತಾರ' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.

  ಇಂಗ್ಲೀಷ್‌ ಸಬ್‌ ಟೈಟಲ್ ಜೊತೆಗೆ ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ಮಾತ್ರ 'ಕಾಂತಾರ' ಸಿನಿಮಾ ಬಿಡುಗಡೆ ಮಾಡಿತ್ತು. ನಮ್ಮ ಮಣ್ಣಿನ ಕಥೆಯನ್ನು ನಮ್ಮದೇ ಭಾಷೆಯಲ್ಲಿ ಹೇಳಬೇಕು ಎನ್ನುವುದು ರಿಷಬ್ ಶೆಟ್ಟಿ ಆಸೆ ಆಗಿತ್ತು. ಹಾಗಾಗಿ ಅವರು ಮೊದಲಿಗೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ಮಾಡಿರಲಿಲ್ಲ. ಆದರೆ ಸಿನಿಮಾ ರಿಲೀಸ್ ಆಗಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಪರಭಾಷಾ ಪ್ರೇಕ್ಷಕರು ಸಿನಿಮಾ ವಿತರಕರು ಚಿತ್ರವನ್ನು ತಮ್ಮ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಚಿತ್ರ ಡಬ್ ಆಗಿ ಬಿಡುಗಡೆ ಆಗಿತ್ತು.

  50ನೇ ದಿನದತ್ತ ಕಾಂತಾರ; 46 ದಿನಗಳ ಕಲೆಕ್ಷನ್ ಎಷ್ಟು, 400 ಕೋಟಿಗೆ ಇನ್ನೆಷ್ಟು ಗಳಿಸಬೇಕು?50ನೇ ದಿನದತ್ತ ಕಾಂತಾರ; 46 ದಿನಗಳ ಕಲೆಕ್ಷನ್ ಎಷ್ಟು, 400 ಕೋಟಿಗೆ ಇನ್ನೆಷ್ಟು ಗಳಿಸಬೇಕು?

  ಸದ್ಯ 'ಕಾಂತಾರ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಕರ್ನಾಟಕದ 300 ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಈ ವಾರ ಸಿನಿಮಾ 50 ದಿನ ಪೂರೈಸುತ್ತಿದೆ. ಆ ಮೂಲಕ ಹೊಸ ದಾಖಲೆಗೆ ರಿಷಬ್ ಶೆಟ್ಟಿ ಸಿನಿಮಾ ಸಜ್ಜಾಗ್ತಿದೆ.

  ತುಳು ಭಾಷೆಗೆ ಡಬ್ ಆಗಿ ರಿಲೀಸ್

  ತುಳು ಭಾಷೆಗೆ ಡಬ್ ಆಗಿ ರಿಲೀಸ್

  ಹೌದು 'ಕಾಂತಾರ' ಚಿತ್ರವನ್ನು ತುಳು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವ ಕೆಲಸ ಕೆಲ ದಿನಗಳಿಂದ ನಡೀತಿದೆ. ಡಿಸೆಂಬರ್ ಮೊದಲ ವಾರದಲ್ಲಿ ತುಳು ವರ್ಷನ್ ಪ್ರೇಕ್ಷಕರ ಮುಂದೆ ಬರಲಿದೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್‌ ಸಿಗ್ನಲ್ ಸಿಕ್ಕಿದ ಕೂಡಲೇ ಕರಾವಳಿ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  ಸೋಶಿಯಲ್ ಮೀಡಿಯಾದಲ್ಲಿ ರಿಷಬ್- ಸಪ್ತಮಿ ಮೋಡಿ: ವೈರಲ್ ಫೋಟೊಗಳ ಸೀಕ್ರೆಟ್ ಏನು?ಸೋಶಿಯಲ್ ಮೀಡಿಯಾದಲ್ಲಿ ರಿಷಬ್- ಸಪ್ತಮಿ ಮೋಡಿ: ವೈರಲ್ ಫೋಟೊಗಳ ಸೀಕ್ರೆಟ್ ಏನು?

  ತುಳುನಾಡಿದ ಆರಾಧ್ಯ ದೈವದ ಸಿನಿಮಾ

  ತುಳುನಾಡಿದ ಆರಾಧ್ಯ ದೈವದ ಸಿನಿಮಾ

  'ಕಾಂತಾರ' ಕನ್ನಡ ವರ್ಷನ್ ಕರಾವಳಿ ಭಾಗದಲ್ಲಿ ಇವತ್ತಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತುಳುನಾಡಿದ ಆರಾಧ್ಯ ದೈವದ ಸಿನಿಮಾ ಇದು. ಇಷ್ಟು ದೊಡ್ಡ ಸಕ್ಸಸ್ ಸಿಕ್ಕಿದ್ದು ಆ ದೈವದ ಕಾರಣದಿಂದಲೇ. ಹಾಗಾಗಿ ಚಿತ್ರವನ್ನು ತುಳು ಭಾಷೆಗೆ ಡಬ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಇದು ನಿರ್ಮಾಪಕರಾದ ವಿಜಯ್ ಕಿರಗಂದೂರ್ ಆಸೆ ಕೂಡ ಆಗಿದೆ ಎಂದು ರಿಷಬ್ ಶೆಟ್ಟಿ ಇತ್ತೀಚೆಗೆ ಹೇಳಿದ್ದರು.

  ₹350 ಕೋಟಿಗೂ ಅಧಿಕ ಕಲೆಕ್ಷನ್

  ₹350 ಕೋಟಿಗೂ ಅಧಿಕ ಕಲೆಕ್ಷನ್

  46 ದಿನಗಳಲ್ಲಿ 'ಕಾಂತಾರ' ಸಿನಿಮಾ ಅಂದಾಜು 371 ಕೋಟಿ ರೂ. ಗಳಿಕೆ ಮಾಡಿದೆ. 400 ಕೋಟಿ ಕ್ಲಬ್ ಸೇರಲು ಚಿತ್ರಕ್ಕೆ ಬೇಕಿರುವುದು ಕೇವಲ 29 ಕೋಟಿ ಮಾತ್ರ. ಸಿನಿಮಾ ಇವತ್ತಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ನೋಡಿದರೆ ಅನಾಯಾಸವಾಗಿ 400 ಕೋಟಿ ಗಡೆ ದಾಟಲಿದೆ ಎಂದು ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ.

  'ಕಾಂತಾರ' ಹಾಗೂ ದೈವದ ವಿರುದ್ಧ ಹೇಳಿಕೆ: ಸಾಹಿತಿ ಬಿಟಿ ಲಲಿತಾ ನಾಯಕ್ ವಿರುದ್ಧ ದೂರು'ಕಾಂತಾರ' ಹಾಗೂ ದೈವದ ವಿರುದ್ಧ ಹೇಳಿಕೆ: ಸಾಹಿತಿ ಬಿಟಿ ಲಲಿತಾ ನಾಯಕ್ ವಿರುದ್ಧ ದೂರು

  ಹಿಂದಿ ಬೆಲ್ಟ್‌ನಲ್ಲಿ ₹75 ಕೋಟಿ

  ಹಿಂದಿ ಬೆಲ್ಟ್‌ನಲ್ಲಿ ₹75 ಕೋಟಿ

  'ಕಾಂತಾರ' ಹಿಂದಿ ವರ್ಷನ್‌ಗೆ ಆರಂಭದಲ್ಲಿ ಸಾಧಾರಣ ಓಪನಿಂಗ್ ಸಿಕ್ಕಿತ್ತು. ಆದರೆ ನೋಡ ನೋಡುತ್ತಲ್ಲೇ ಸಿನಿಮಾ 75 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಇವತ್ತಿಗೂ ದೇಶಾದ್ಯಂತ ನೂರಾರು ಸ್ಕ್ರೀನ್‌ಗಳಲ್ಲಿ 'ಕಾಂತಾರ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಸದ್ಯ ಕರಾವಳಿ ಭಾಗದ ಜನ ಕನ್ನಡದಲ್ಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತುಳು ಭಾಷೆಗೆ ಡಬ್ ಆಗಿ ತೆರೆಗೆ ಬಂದರೆ ಮತ್ತೊಮ್ಮೆ ಮುಗಿಬಿದ್ದು ನೋಡುವುದರಲ್ಲಿ ಸಂದೇಹವಿಲ್ಲ.

  English summary
  Rishab shetty Starrer Kantara to release in Tulu on December first Week. Kannada period action thriller Kantara was released on September 30. Kantara Already Enters 300 Crore Club Worldwide. Know more.
  Wednesday, November 16, 2022, 12:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X