For Quick Alerts
  ALLOW NOTIFICATIONS  
  For Daily Alerts

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್!

  |

  ಖ್ಯಾತ ನಿರ್ದೇಶಕ ಎಸ್‌.ನಾರಾಯಣ್‌ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಮದುವೆ ನೆರವೇರಿದೆ. ಇವರ ಮದುವೆ ಸಂಭ್ರಮಕ್ಕೆ ಚಿತ್ರರಂಗಕ್ಕೆ ಗಣ್ಯರು ಮತ್ತು ರಾಜಕಾರಣಿಗಳು ಕೂಡ ಭಾಗವಹಿಸಿ ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ.

  ಮದುವೆ ಸರಳವಾಗಿ ನೆರವೇರಿದೆ. ಮೈಸೂರಿನಲ್ಲಿ ಮದುವೆ ನಡೆದಿದ್ದು, ಕೆಲವರಿಗೆ ಮಾತ್ರ ಆಹ್ವಾನ ಇತ್ತು. ಕೊರೊನಾ ಕಾರಣಕ್ಕೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನು ಮಾತ್ರ ಆಹ್ವಾನಸಲಾಗಿತ್ತು. ಹಾಗಾಗಿ ಮದುವೆ ಸಂಭ್ರಮದಲ್ಲಿ ಕೆಲವೇ ಕೆಲವು ಸಿನಿಗಣ್ಯರು ಕಾಣಿಸಿಕೊಂಡಿದ್ದಾರೆ.

  ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ಪಂಕಜ್ ಅವರ ಮದುವೆ ನಡೆದಿದೆ. ಈ ಹೊಸ ಜೋಡಿಯ ಮದುವೆ ತಯಾರಿ ಸಾಕಷ್ಟು ದಿನಗಳಿಂದ ನಡೆದಿತ್ತು. ಕೋವಿಡ್ ಇದ್ದ ಕಾರಣ ಮದುವೆಯನ್ನು ಮುಂದಕ್ಕೆ ಹಾಕಲಾಗಿತ್ತು. ಕೋವಿಡ್ ನಿಯಮಗಳೊಂದಿಗೆ ಮದುವೆ ನಡೆದಿದೆ.

  ರಕ್ಷಿತಾ ಜೊತೆಗೆ ಸಪ್ತಪತಿ ತುಳಿದ ಪಂಕಜ್!

  ರಕ್ಷಿತಾ ಜೊತೆಗೆ ಸಪ್ತಪತಿ ತುಳಿದ ಪಂಕಜ್!

  ನಾರಾಯಣ್ ಅವರ ಮಗ ಪಂಕಜ್ 2022 ನವೆಂಬರ್ 22 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಕ್ಷಿತಾ ಎನ್ನುವ ವಧು ಜೊತೆಯಲ್ಲಿ ಪಂಕಜ್ ಸಪ್ತಪದಿ ತುಳಿದಿದ್ದಾರೆ. ವಧು ರಕ್ಷಿತ್ ಬಿಳಿ ಮತ್ತು ಕೆಂಪು ಬಣ್ಣದ ರೇಷ್ಮೆಯಲ್ಲಿ ಕಂಗೊಳಿಸಿದರೆ, ಪಂಕಜ್ ಪಂಚೆ ಶಲ್ಯ ತೊಟ್ಟು ಮದುಮಗನಾಗಿ ಮಿಂಚಿದ್ದಾರೆ.

  ಎಸ್.ನಾರಾಯಣ್ ಅವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಬಹಳ ಆಪ್ತರಾಗಿದ್ದರು. ಹಾಗಾಗಿ ಭಾರತಿ ವಿಷ್ಣುವರ್ಧನ್ ಅವರು ಕುಟುಂಬದ ಜೊತೆ ಬಂದು ಎಸ್.ನಾರಾಯಣ್ ಅವರ ಮಗನ ಮದುವೆಗೆ ಬಂದು ಶುಭ ಕೋರಿದ್ದಾರೆ. ಜೊತೆಗೆ ಶ್ವೇತಾ ಚೆಂಗಪ್ಪ ಸೇರಿದಂತೆ ಇನ್ನು ಅನೇಕ ಗಣ್ಯರು ಪಂಕಜ್ ಮತ್ತು ರಕ್ಷಿತಾ ಅವರ ಮದುವೆಗೆ ಬಂದು ನವ ದಂಪತಿಗಳನ್ನು ಹರಸಿದ್ದಾರೆ.

  ನವ ಜೋಡಿಗೆ ಹರಸಿದ ನಟ ದರ್ಶನ್!

  ನವ ಜೋಡಿಗೆ ಹರಸಿದ ನಟ ದರ್ಶನ್!

  ಇನ್ನು ಎಸ್‌.ನಾರಾಯಣ್ ಅವರ ಪುತ್ರ ಪಂಕಜ್ ಮದುವೆಗೆ ನಟ ದರ್ಶನ್ ಕೂಡ ಸಾಕ್ಷಿಯಾದರು. ಪಂಕಜ್ ಹಾಗು ರಕ್ಷಿತಾ ಅವರ ಮದುವೆಗೆ ಬಂದ ನಟ ದರ್ಶನ್ ಹೊಸ ಜೋಡಿಗೆ ಶುಭಕೋರಿದ್ದಾರೆ. ದರ್ಶನ್ ಜೊತೆಗೆ ವಿನೋದ್ ಪ್ರಭಾಕರ್, ಚಿಕ್ಕಣ್ಣ ಅವರು ಕೂಡ ನವ ದಂಪತಿಗೆ ಹಾರೈಸಿದ್ದಾರೆ. ಇತ್ತೀಚೆಗೆ ದರ್ಶನ್ ಅವರ ಒಡೆಯ ಸಿನಿಮಾದಲ್ಲಿ ಕೂಡ ಪಂಕಜ್ ಒಂದು ಮುಖ್ಯ ಪಾತ್ರ ಮಾಡಿದ್ದರು.

  ಕೋವಿಡ್‌ ನಿಮಿತ್ತ ಕೆಲವರಿಗೆ ಮಾತ್ರ ಆಹ್ವಾನ!

  ಕೋವಿಡ್‌ ನಿಮಿತ್ತ ಕೆಲವರಿಗೆ ಮಾತ್ರ ಆಹ್ವಾನ!

  ಇನ್ನೂ ನಿರ್ದೇಶಕ ಎಸ್ ನಾರಾಯಣ್ ಅವರು ತಮ್ಮ ಪುತ್ರ ಪಂಕಜ್ ಅವರ ಮದುವೆಯನ್ನು ಸರಳವಾಗಿ ಮಾಡಿದ್ದಾರೆ. ಕೇವಲ ಕುಟುಂಬಸ್ಥರು ಹಾಗು ಕನ್ನಡ ಚಿತ್ರ ರಂಗದ ಕೆಲವು ಗಣ್ಯರಿಗೆ ಮಾತ್ರ ಆಹ್ವಾನ ಇತ್ತು. ಪಂಕಜ್ ಅವರ ಮದುವೆಗೆ ನಟಿ ಸುಧಾರಾಣಿ, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ಯೋಗರಾಜ್ ಭಟ್, ದರ್ಶನ್, ವಿನೋದ್ ಪ್ರಭಾಕರ್,ಚಿಕ್ಕಣ್ಣ, ವಿಷ್ಣುವರ್ಧನ್ ಕುಟುಂಬ ಸೇರಿದಂತೆ ಕೆಲವೇ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

  ಮದುವೆ ಬಳಿಕ ಮತ್ತೆ ಸಿನಿ ಜರ್ನಿ ಮುಂದುವರಿಸಲಿರುವ ಪಂಕಜ್!

  ಮದುವೆ ಬಳಿಕ ಮತ್ತೆ ಸಿನಿ ಜರ್ನಿ ಮುಂದುವರಿಸಲಿರುವ ಪಂಕಜ್!

  ಪಂಕಜ್ ಅವರು 16 ವರ್ಷ ಇದ್ದಾಗಲೇ 'ಚೈತ್ರದ ಚಂದ್ರಮ' ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟರು. ಆ ಬಳಿಕ 'ಚೆಲುವಿನ ಚಿಲಿಪಿಲಿ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ನಂತರ 'ದುಷ್ಟ' ಮತ್ತು 'ದಾಂಡಿಗ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಅಭಿನಯಿಸುವುರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ ಪಂಕಜ್. ದಕ್ಷ, ಒಡೆಯ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಅಭಿನಯದ ಜೊತೆಗೆ ಅಪ್ಪನೊಂದಿಗೆ ನಿರ್ದೇಶನಕ್ಕೂ ಪಂಕಜ್ ಮುಂದಾಗಿದ್ದಾರೆ.


  ಪಂಕಜ್ ನಾರಾಯಣ್ ಅವರು ಇಲ್ಲಿಯ ತನಕ ಸುಮಾರು 5 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಪಂಚಜ್ ನಾಯಕನ ಪಾತ್ರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಪಂಕಜ್ ರಕ್ಷಿತಾ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅದರೆ ಅವರು ಮುಂದೆ ಯಾವ ಸಿನಿಮಾದ ಮೂಲಕ ನಾಯಕನಾಗಿ ಅಥವಾ ನಿರ್ದೇಶಕನಾಗಿ ಬರುತ್ತಾರೆ ಎಂಬುದನ್ನು ಕೆಲವು ದಿನಗಳ ಬಳಿಕ ಗೊತ್ತಾಗಲಿದೆ.

  English summary
  S.Narayan Son Pankaj Narayan Weds Rakshitha, Wedding Held In Mysore,
  Thursday, November 25, 2021, 13:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X