twitter
    For Quick Alerts
    ALLOW NOTIFICATIONS  
    For Daily Alerts

    ಬೊಂಡಾ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದಿನಗಳ ನೆನೆಸಿದ ಸಂಚಾರಿ ವಿಜಯ್

    |

    ಮಂಸೋರೆ ನಿರ್ದೇಶನದ 'ಆಕ್ಟ್-1978' ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರೆಲ್ಲರೂ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.

    ಆಕ್ಟ್-1978 ಸಿನಿಮಾ ಗೆದ್ದಿದೆ. ಮಂಸೋರೆ ಹಾಗೂ ಚಿತ್ರತಂಡದ ಶ್ರಮ ಸಾರ್ಥಕವಾಗಿದೆ. ಯಶಸ್ಸಿನ ಸಿಹಿ ಸವಿಯುತ್ತಿರುವ ಈ ಹೊತ್ತಿನಲ್ಲಿ ಸವೆಸಿದ ಹಾದಿಯನ್ನು ಹಿಂತಿರುಗಿ ನೋಡಿದ್ದಾರೆ ಆಕ್ಟ್-1978 ನಟ ಹಾಗೂ ಮಂಸೋರೆಯ ಗೆಳೆಯರಾಗಿರುವ ನಟ ಸಂಚಾರಿ ವಿಜಯ್.

    ಹರಿವು ಸಿನಿಮಾದಿಂದ ಆಕ್ಟ್-1978 ಸಿನಿಮಾದ ವರೆಗೆ ಹೇಗೆ ತಮ್ಮ ಹಾಗೂ ಮಂಸೋರೆಯ ಪಯಣ ಸಾಗಿ ಬಂದಿದೆ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ನಟ ಸಂಚಾರಿ ವಿಜಯ್. ಹರಿವು ಸಿನಿಮಾ ನಿರ್ಮಾಣದ ಸಮಯದಲ್ಲಿ ಅನುಭವಿಸಿದ ಸಂಕಷ್ಟಗಳು, ಪಟ್ಟ ಶ್ರಮ, ಎದುರಿಸಿದ ಸಮಸ್ಯೆಗಳ ಬಗ್ಗೆ ಸಂಚಾರಿ ವಿಜಯ್ ಹೇಳಿಕೊಂಡಿದ್ದಾರೆ.

    ಕಲಾವಿದರು-ತಂತ್ರಜ್ಞರಿಗೆ ಕೊಡಲು ಹಣವಿರಲಿಲ್ಲ

    ಕಲಾವಿದರು-ತಂತ್ರಜ್ಞರಿಗೆ ಕೊಡಲು ಹಣವಿರಲಿಲ್ಲ

    ಹರಿವು ಸಿನಿಮಾ ತೆಗೆಯಬೇಕಾದರೆ, ದಿನದ ಶೂಟಿಂಗ್ ಮುಗಿದರೆ ಭಯವಾಗುತ್ತಿತ್ತಂತೆ, ಕಾರಣ ಎಲ್ಲರಿಗೂ ಪೇಮೆಂಟ್ ಮಾಡಬೇಕಲ್ಲ. ಮಂಸೋರೆ, ಸಂಚಾರಿ ವಿಜಯ್ ಹಾಗೂ ಗೆಳೆಯರ ಬಳಿ ಹಣವೇ ಇರುತ್ತಿರಲಿಲ್ಲವಂತೆ. ಹೇಗಾದರೂ ಮಾಡಿ ದಿನ ನೂಕಿ, ನಾಳೆ ಎಲ್ಲಿಂದಾದರೂ ಹಣ ಹುಟ್ಟಬಹುದೇನೋ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದರಂತೆ.

    ಎಗ್‌ಬೋಂಡಾ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದರು

    ಎಗ್‌ಬೋಂಡಾ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದರು

    ಹಣವಿಲ್ಲದೆ ಸಿನಿಮಾ ನಿಂತುಹೋದಾಗ, ರಾಮಸ್ವಾಮಿ ಮತ್ತು ನವೀನ್ ಪಾಟೀಲ ಹಾಗೂ ಗೆಳೆಯರ ಒತ್ತಾಸೆಯಿಂದ ಸಿನಿಮಾ ಮತ್ತೆ ಶುರುವಾಗಿ ಹಾಗೋ-ಹೀಗೋ ಹಣ ಹೊಂದಿಸಿ ಚಿತ್ರೀಕರಣ ಮುಗಿಸಿದ್ದರು ಮಂಸೋರೆ, ಸಂಚಾರಿ ವಿಜಯ್ ಹಾಗೂ ತಂಡ. ಪ್ಯಾಕ್‌ಅಪ್ ಆದ ನಂತರ ಎರಡೆರಡು ಎಗ್‌ಬೋಂಡಾ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದರಂತೆ ವಿಜಯ್, ಮಂಸೋರೆ.

    ಯೂಟ್ಯೂಬ್‌ನಲ್ಲಿ ಸಾಕಷ್ಟು ಜನ ನೋಡಿದ್ದಾರೆ

    ಯೂಟ್ಯೂಬ್‌ನಲ್ಲಿ ಸಾಕಷ್ಟು ಜನ ನೋಡಿದ್ದಾರೆ

    ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ವಿತರಕರು ಒಪ್ಪದೇ ಇದ್ದಾಗ ಫಿಲ್ಮ್‌ಫೆಸ್ಟ್‌ಗಳಲ್ಲಿ ಬಿಡುಗಡೆ ಮಾಡಿ ಖುಷಿ ಪಟ್ಟ ತಂಡ ನಂತರ ಅದನ್ನು ಯೂಟ್ಯೂಬ್‌ಗೆ ಹಾಕಿ ಸುಮ್ಮನಾಗಿದೆ. ಯೂಟ್ಯೂಬ್‌ನಲ್ಲಿ ಇಷ್ಟು ವರ್ಷವಾದರೂ ಸಿನಿಮಾವನ್ನು ಜನ ನೋಡುತ್ತಲೇ ಇದ್ದಾರೆ. 'ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದರೆ ಒಂದು ವರ್ಷ ಓಡಿರುತ್ತಿತ್ತು' ಎಂದು ಮಾತನಾಡಿಕೊಳ್ಳುತ್ತಾರಂತೆ ವಿಜಯ್ ಹಾಗೂ ಗೆಳೆಯರು.

    Recommended Video

    6 ತಿಂಗಳು ಲಾಕ್ ಡೌನ್ ನಲ್ಲಿ ಶಿವಣ್ಣ ಏನ್ ಮಾಡಿದ್ರು ಗೊತ್ತಾ? | Shivanna | Filmibeat Kannada
    ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ

    ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ

    ಹರವು ಸಿನಿಮಾ ಬಿಡುಗಡೆ ಮಾಡಲು ಒಂದೂ ಚಿತ್ರಮಂದಿರ ಸಿಕ್ಕಿರಲಿಲ್ಲ, ಆದರೆ ಈಗ ಅದೇ ಮಂಸೋರೆಯ ಆಕ್ಟ್-1978 ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ. ಹರಿವು ಸಿನಿಮಾದಿಂದಲೂ ಅದೇ ಶ್ರಮ, ಕಮಿಟ್‌ಮೆಂಟ್‌ ಅನ್ನು ಮುಂದುವರೆಸಿಕೊಂಡು ಬರುತ್ತಿರುವ ಮಂಸೋರೆಗೆ ಶಹಭಾಸ್ ಅಂದಿದ್ದಾರೆ ಸಂಚಾರಿ ವಿಜಯ್.

    English summary
    Sanchari Vijay remembers difficult situations faced him, Mansore and team while shooting for Harivu movie.
    Saturday, November 21, 2020, 11:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X