For Quick Alerts
  ALLOW NOTIFICATIONS  
  For Daily Alerts

  ಧಾರಾವಾಹಿಗೆ ಎಂಟ್ರಿ ಕೊಟ್ಟ ಹರಿಪ್ರಿಯಾ: ವಿಭಿನ್ನ ಲುಕ್ ನಲ್ಲಿ ಮಿಂಚಿದ ನಟಿ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಜೊತೆಗೆ ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾ ಇತ್ತೀಚಿಗೆ ನಾನಾ ಅವತಾರಗಳ ಮೂಲಕ ದರ್ಶನ ನೀಡಿದ್ದಾರೆ.

  ವಿಭಿನ್ನ ಲುಕ್ ನಲ್ಲಿ ಹರಿಪ್ರಿಯಾ ಫುಲ್ ಮಿಂಚಿಂಗ್ | Filmibeat Kannada

  ಹೌದು, ಹರಿಪ್ರಿಯಾ ಭಿನ್ನ ವಿಭಿನ್ನ ಲುಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹರಿಪ್ರಿಯಾ ವಿವಧ ವೇಷಗಳನ್ನು ತೊಟ್ಟು ಮಿಂಚಿದ್ದಾರೆ. ಬಗೆಬಗೆಯ ಅವತಾರಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹರಿಪ್ರಿಯಾ ಲುಕ್ ಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ಸ್ ಮಾಡುತ್ತಿದ್ದಾರೆ.

  ನಟಿ ಹರಿಪ್ರಿಯಗೆ ಈಗ ಸಾಯುವುದು ಸುಲಭವಂತೆ!ನಟಿ ಹರಿಪ್ರಿಯಗೆ ಈಗ ಸಾಯುವುದು ಸುಲಭವಂತೆ!

  ಜರತಾರಿ ಸೀರೆಯಲ್ಲಿ, ಮತ್ತೊಂದು ಅಜ್ಜಿಯ ಲುಕ್ ನಲ್ಲಿ ಹಾಗೂ ಸನ್ಯಾಸಿಯಾಗಿಯುೂ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಹರಿಪ್ರಿಯಾ ನಾನಾ ಅವತಾರ ತಾಳಿರುವುದು ಧಾರಾವಾಹಿಗಾಗಿ. ಹರಿಪ್ರಿಯಾ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ರಾ ಅಂತ ಅಚ್ಚರಿ ಪಡಬೇಡಿ. ವಿಶೇಷ ಸಂಚಿಕೆಗಾಗಿ ಹರಿಪ್ರಿಯಾ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸಂಘರ್ಷ ಧಾರಾವಾಹಿಯಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಸಂಚಿಕೆಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಅದರ ಶೂಟಿಂಗ್ ನಲ್ಲಿ ಹರಿಪ್ರಿಯಾ ಭಾಗವಹಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಮಾಡಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ.

  ಹರಿಪ್ರಿಯಾ ಸದ್ಯ ಅಮೃತಮತಿ, ಕಪ್ಪಲ್ ರಿಮೇಕ್, ಲಗಮ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಹುನಿರೀಕ್ಷೆಯ ಬಿಚ್ಚುಗತ್ತಿ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ಹರಿಪ್ರಿಯಾ ಕಥಾಸಂಗಮ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Sandalwood Actress Haripriya Different look for Serial. Haripriya playing important role in Serial for Navratri special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X