twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಒಗ್ಗಟ್ಟಿನ ಆಟಕ್ಕೆ ರೆಡಿ

    By Rajendra
    |

    ಕಲ್ಲೂರ್ ಎಂಟರ್ ಟೈನ್ ಮೆಂಟ್ ನಿರ್ಮಾಣದ, ಎ ಬಿ ನೆಟ್ ವರ್ಕ್ಸ್ ಸಹಯೋಗದೊಂದಿಗೆ "ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್" (ಎಸ್ ಸಿಎಲ್) ಎಂಬ ಪಂದ್ಯಾವಳಿಯು ಇದೇ 2014ನೇ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿದೆ.

    ಕನ್ನಡ ಚಿತ್ರರಂಗದ ನಟರು, ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರು, ವಿತರಕರು, ನೃತ್ಯ ನಿರ್ದೇಶಕರು ಹೀಗೆ ಸ್ಯಾಂಡಲ್ ವುಡ್ ನಲ್ಲಿ ತೆರೆ ಹಿಂದೆ ಮತ್ತು ಮುಂದಿರುವವರು ಈ ಪಂದ್ಯಾವಳಿಯಲ್ಲಿ ಆಟವಾಡಲಿದ್ದಾರೆ. [ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಸದ್ಯದಲ್ಲೇ ಶುರು]

    ಈ ಮೂಲಕ ಸ್ಯಾಂಡಲ್ ವುಡ್ ನ ಒಗ್ಗಟ್ಟನ್ನು ಪ್ರದರ್ಶಿಸುವುದರ ಜೊತೆಯಲ್ಲಿ ಸಿನಿ ಅಭಿಮಾನಿಗಳಿಗೆ ತಮ್ಮ ಕ್ರಿಕೆಟ್ ಆಟದ ಮೂಲಕ ಮತ್ತಷ್ಟು ಮನರಂಜನೆ ನೀಡಲಿದ್ದಾರೆ. ಸುಮಾರು 120ಕ್ಕೂ ಹೆಚ್ಚು ಚಿತ್ರರಂಗದ ತಾರೆಯರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ.

    ಹಾಸನದಲ್ಲಿ ಎರಡು ಸೆಮಿ ಫೈನಲ್ಸ್

    ಹಾಸನದಲ್ಲಿ ಎರಡು ಸೆಮಿ ಫೈನಲ್ಸ್

    ಹುಬ್ಬಳ್ಳಿ- ಧಾರವಾಡ, ಬಾಗಲಕೋಟೆ, ಗುಲ್ಬರ್ಗಾ, ಬಿಜಾಪುರದಲ್ಲಿ ಲೀಗ್ ಹಂತದ 8 ಪಂದ್ಯಗಳು ನಡೆಯಲಿದ್ದು, ಎರಡು ಸೆಮಿ ಫೈನಲ್ಸ್ ಹಾಸನದಲ್ಲಿ ಮತ್ತು ಅಂತಿಮ ಪಂದ್ಯಾವಳಿಯನ್ನು ಮಂಡ್ಯದಲ್ಲಿ ನಡೆಸಲು ನಿರ್ಧರಿಸಲಾಗಿದೆ.

    ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ - ಏಕತೆಗಾಗಿ ಆಟ

    ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ - ಏಕತೆಗಾಗಿ ಆಟ

    ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ - ಏಕತೆಗಾಗಿ ಆಟ, ಪಂದ್ಯಾವಳಿಗಳಿಗೆ ಚಿತ್ರರಂಗದ ಹಲವು ಒಕ್ಕೂಟಗಳು ಸಹಕರಿಸಲು ಒಪ್ಪಿರುತ್ತವೆ. ಈ ಪಂದ್ಯಾವಳಿಯಲ್ಲಿ ಆರು ತಂಡಗಳು ಸೆಣಸಲಿದ್ದು ಆರೂ ತಂಡದ ಮಾಲಿಕತ್ವವನ್ನು ವಹಿಸಿಕೊಳ್ಳಲಿಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಆದತ್ - 9731917863 ಕರೆ ಮಾಡತಕ್ಕದ್ದು.

    ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು

    ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು

    ಈ ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಕಲ್ಲೂರ್, ಕಲ್ಲೂರ್ ಎಂಟರ್ ಟೈನ್ ಮೆಂಟ್ , ಆದತ್ ಎಬಿ ನೆಟ್ ವರ್ಕ್ಸ್ ಹಾಗೂ ಮಿಸ್ಬಾ ಆನ್ ಸಿನಿಮಾಸ್ ಉಪಸ್ಥಿತರಿದ್ದರು.

    ಶಿವರಾಜ್ ಕುಮಾರ್ ಸೈ ಅಂದಿದ್ದಾರೆ

    ಶಿವರಾಜ್ ಕುಮಾರ್ ಸೈ ಅಂದಿದ್ದಾರೆ

    ಪ್ಲೇಯಿಂಗ್ ಫಾರ್ ಯುನಿಟಿ ಅನ್ನೋ ಉದ್ದೇಶದಡಿ ಆಡ್ತಿರೋ ಈ ಪಂದ್ಯಾಟವನ್ನ ಆಡೋಕೆ ಈಗಾಗ್ಲೇ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಸೈ ಅಂದಿದ್ದು ಸದ್ಯದಲ್ಲೇ ಕರ್ಟನ್ ರೈಸರ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ.

    ತಾರೆಗಳು ಫೀಲ್ಡಿಗಿಳಿಯೋ ಸಮಯ ಬಂದಿದೆ

    ತಾರೆಗಳು ಫೀಲ್ಡಿಗಿಳಿಯೋ ಸಮಯ ಬಂದಿದೆ

    ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಗಳಿಗೇನೂ ಕಡಿಮೆಯಿಲ್ಲ. ಆಕ್ಟಿಂಗ್ ನಲ್ಲಿ ಇಷ್ಟವಾಗೋ ತಾರೆಯರು ಫೀಲ್ಡಿಗಿಳಿದ್ರೆ ಅಲ್ಲಿ ಮತ್ತೂ ಇಷ್ಟವಾಗ್ತಾರೆ. ಆದರೆ 2012ರಲ್ಲಿ ರಾಜ್ ಕಪ್ ನಡೆದಿದ್ದು ಬಿಟ್ರೆ ತಾರೆಯರು ಈ ಎರಡು ವರ್ಷದಲ್ಲಿ ಯಾವ ಪಂದ್ಯಾಟದಲ್ಲೂ ಗ್ರೌಂಡಿಗಿಳಿದಿರಲಿಲ್ಲ. ಈಗ ತಾರೆಯರು ಗ್ರೌಂಡಿಗಿಳಿದ್ರೆ ಅದನ್ನ ನೋಡೋಕೆ ಪ್ರೇಕ್ಷಕರಂತೂ ಕಾದು ಕುಳಿತಿದ್ದಾರೆ.

    ಸ್ಯಾಂಡಲ್ ವುಡ್ ನ ಯಂಗ್ ಸ್ಟಾರ್ ಗಳು ಇಳಿಯಲಿದ್ದಾರೆ

    ಸ್ಯಾಂಡಲ್ ವುಡ್ ನ ಯಂಗ್ ಸ್ಟಾರ್ ಗಳು ಇಳಿಯಲಿದ್ದಾರೆ

    ಸ್ಯಾಂಡಲ್ ವುಡ್ ನ ಯಂಗ್ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಸಿಎಲ್ ಕರ್ನಾಟಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್ ಗ್ರೌಂಡಿಗಿಳಿದ್ರೆ ಹಬ್ಬ ಕನ್ಫರ್ಮ್.

    ಲೀಗ್ ನ ಪ್ರಮುಖ ಆಕರ್ಷಣೆಯಾಗಲಿರುವವರು

    ಲೀಗ್ ನ ಪ್ರಮುಖ ಆಕರ್ಷಣೆಯಾಗಲಿರುವವರು

    ಎರಡು ವರ್ಷಗಳಿಂದ ಸಿಸಿಎಲ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸ್ತಾ ಇರೋ ಸ್ಯಾಂಡಲ್ ವುಡ್ ನ ಸ್ಟಾರ್ ಪ್ಲೇಯರ್ ಗಳಾದ ಪ್ರದೀಪ್, ರಾಜೀವ್, ದೃವ, ಜೆ ಕೆ ಸ್ಯಾಂಡಲ್ ವುಡ್ ಕ್ರಿಕೇಟ್ ಲೀಗ್ ನಲ್ಲೂ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

    ಒಟ್ಟು ಆರು ಜಿಲ್ಲೆಗಳಲ್ಲಿ ಪಂದ್ಯಾಟಗಳು

    ಒಟ್ಟು ಆರು ಜಿಲ್ಲೆಗಳಲ್ಲಿ ಪಂದ್ಯಾಟಗಳು

    ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಕ್ರಿಕೆಟ್ ಕದನ ಬೆಂಗಳೂರಲ್ಲಿ ನಡೆಯೋದಿಲ್ಲ. ಒಟ್ಟು ಆರು ಜಿಲ್ಲೆಗಳಲ್ಲಿ ಪಂದ್ಯಾಟಗಳು ನಡೆಯಲಿದ್ದು ಸೆಮಿಫೈನಲ್ ಪಂದ್ಯವನ್ನ ಶ್ರೀಸಾಮಾನ್ಯರ ಊಟಿ ಅಂತಾನೇ ಕರೆಸಿಕೊಳ್ಳೋ ಹಾಸನದಲ್ಲಿ ನಡೆಸಲಿದ್ದಾರೆ.

    ಸಕ್ಕರೆ ನಾಡಿನಲ್ಲಿ ಫೈನಲ್ ಕದನ

    ಸಕ್ಕರೆ ನಾಡಿನಲ್ಲಿ ಫೈನಲ್ ಕದನ

    ಆರು ತಂಡಗಳ ಫೈನಲ್ ಕಾದಾಟ ನಡೆಯೋದು ಸಕ್ಕರೆ ನಾಡು ಮಂಡ್ಯದಲ್ಲಿ. ಚಿತ್ರರಂಗದ ಬಡಾ ಬಡಾ ಸ್ಟಾರ್ ಗಳನ್ನ ಸಕ್ಕರೆ ನಾಡಿಗೆ ಕರೆಸೋ ಯೋಚನೆ ಮಾಡಿದ್ದಾರೆ ಆಯೋಜಕರು.

    English summary
    Sandalwood Cricket League 2014 is a officially announced cricket tournament by Kannada Film Industry. Director Aadatt is managing a whole event in karnataka and Bharatraj managing all Hubli matches. More then 120 Kannada celebrities participating in this tournament. The tournament starts in November and December months.
    Saturday, September 6, 2014, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X