»   » 2014ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಗಳು

2014ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಗಳು

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  2014 ಮುಗೀತಾ ಬಂತು. ಸ್ಯಾಂಡಲ್ ವುಡ್ 'ಗ್ರಹಚಾರ'ಗಳ ಲೆಕ್ಕಾಚಾರವೂ ಶುರುವಾಗಿದ್ದಾಯ್ತು. ಸಿನಿಮಾಗಳ ಸೋಲು, ಗೆಲುವು. ನಟ-ನಟಿಯರ ಅದೃಷ್ಟ-ದುರಾದೃಷ್ಟದ ಬಗ್ಗೆ ವಾರ್ಷಿಕ ಲೆಕ್ಕ ಕೊಡುವುದರ ಜೊತೆಗೆ ಅದೇ ನಟ-ನಟಿಯರ ಜೀವನದ ಸಂಭ್ರಮದ ಕ್ಷಣಗಳನ್ನ ನಿಮ್ಮ ಮುಂದೆ ತರ್ಲಿಲ್ಲ ಅಂದ್ರೆ ಹೇಗೆ...

  ನಮ್ಮ ಗಾಂಧಿನಗರ ಈ ವರ್ಷ ಬರೀ ಸಿನಿಮಾಗಳಿಂದ ಮಾತ್ರ ಸದ್ದು ಮಾಡ್ಲಿಲ್ಲ. ಸೆಲೆಬ್ರಿಟಿಗಳ 'ಗಟ್ಟಿಮೇಳ'ದ ನಿನಾದ ಈ ವರ್ಷ ತುಸು ಹೆಚ್ಚಾಗಿ, ಜೋರಾಗಿ ಕೇಳಿ ಬಂತು. ಸಪ್ತಪದಿ ತುಳಿದು ನವಜೀವನಕ್ಕೆ 2014ರಲ್ಲಿ ಕಾಲಿಟ್ಟ ತಾರೆಗಳ ಪಟ್ಟಿ ಇಲ್ಲಿದೆ, ಮುಂದೆ ಓದಿ ಸಪ್ತಪದಿ ಇದು ಸಪ್ತಪದಿ ಏಳು ಹೆಜ್ಜೆಗಳ ಸಂಬಂಧ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಸಪ್ತಪದಿ ತುಳಿದ 'ಸ್ಯಾಂಡಲ್ ವುಡ್ ಕೃಷ್ಣ'

  'ಸ್ಯಾಂಡಲ್ ವುಡ್ ಕೃಷ್ಣ' ಅಜೇಯ್ ರಾವ್ ಮೊನ್ನೆಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಕೊಪ್ಪಳದಲ್ಲಿನ ದೇವಸ್ಥಾನವೊಂದರಲ್ಲಿ ಸರಳವಾಗಿ ತಮ್ಮ ಪ್ರೇಯಸಿ ಸ್ವಪ್ನ ಕೈಹಿಡಿದರು ಅಜೇಯ್ ರಾವ್.

  'ರೂಪಾ' ಕಲ್ಯಾಣ

  ನಟಿ, ನಿರ್ದೇಶಕಿ ರೂಪಾ ಅಯ್ಯರ್ ಮತ್ತು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರ ವಿವಾಹ ಮಹೋತ್ಸವ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನೆರವೇರಿದ್ದು ಇದೇ ವರ್ಷ.

  ಸ್ಫೂರ್ತಿ ವಿಶ್ವಾಸ್ ವಿವಾಹ

  'ಜಾಲಿಡೇಸ್' ಚಿತ್ರದ ಯಶಸ್ವಿ ಜೋಡಿ ಸ್ಫೂರ್ತಿ ಹಾಗೂ ವಿಶ್ವಾಸ್ ಇದೇ ವರ್ಷ ಹಸೆಮಣೆ ಏರಿದರು. ಸುಮಾರು ಏಳು ವರ್ಷಗಳ ತಮ್ಮ ಪ್ರೇಮ ಸಂಬಂಧಕ್ಕೆ ಈ ವರ್ಷ ಅಧಿಕೃತ ಮುದ್ರೆ ಬಿದ್ದ ಖುಷಿಯಲ್ಲಿದ್ದಾರೆ ಈ ನವ ದಂಪತಿಗಳು.

  ಹರೀಶ್ ರಾಜ್ ಕಲ್ಯಾಣ

  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ಹರೀಶ್ ರಾಜ್ ಅವರು ಆಗಸ್ಟ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಎಂ.ಎಸ್ಸಿ ಪದವೀಧರೆ ಶ್ರುತಿ ಲೋಕೇಶ್ ಅವರ ಕೈಹಿಡಿದರು ಹರೀಶ್ ರಾಜ್.

  ನವರಸ ನಾಯಕನಿಗೆ ಫಾರಿನ್ ಸೊಸೆ

  ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಏಪ್ರಿಲ್ ತಿಂಗಳಲ್ಲಿ ಹಾಲೆಂಡ್ ನಲ್ಲಿ ಹಾರ ಬದಲಾಯಿಸಿಕೊಂಡರು. ಪ್ರೇಯಸಿ ಕ್ಯಾಪಿಪೈಲಿ ಜೊತೆ ಫಾರಿನ್ ನಲ್ಲಿ ಸಪ್ತಪದಿ ತುಳಿದರೂ, ಭಾರತಕ್ಕೆ ವಾಪಸ್ಸಾದ ನಂತ್ರ ಮಂತ್ರಾಲಯದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ನವ ಜೀವನಕ್ಕೆ ಕಾಲಿರಿಸಿದರು.

  ಕವಿರಾಜ್ 'ಕಾವ್ಯ ವಿವಾಹ'

  ಕನ್ನಡ ಚಿತ್ರರಂಗದ ಜನಪ್ರಿಯ ಗೀತಸಾಹಿತಿ ಕವಿರಾಜ್ ಅವರ ಮದುವೆ ಮೇ ತಿಂಗಳಲ್ಲಿ ಕುಪ್ಪಳ್ಳಿಯಲ್ಲಿ ನೆರವೇರಿತು. ಕನ್ನಡ ಚಿತ್ರರಂಗದ ಹಲವು ತಾರೆಯರು ಮದುವೆ ಸಮಾರಂಭಕ್ಕೆ ಆಗಮಿಸಿ ನೂತನ ದಂಪತಿಗಳನ್ನು ಹರಸಿದರು. ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿರುವ ರಾಜೇಶ್ವರಿ ಅವರನ್ನು ಕವಿರಾಜ್ ಮದುವೆಯಾದರು. ರಾಷ್ಟ್ರಕವಿ ಕುವೆಂಪು ಅವರ ಆಶಯದ 'ಮಂತ್ರ ಮಾಂಗಲ್ಯ' ವಿಧಾನದಲ್ಲಿ ಕವಿರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷ.

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಶಿನಾಥ್ ಪುತ್ರ

  ಜನಪ್ರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕಾಶಿನಾಥ್ ಅವರ ಪುತ್ರ ಅಲೋಕ್ ಯಾನೆ ಅಭಿಮನ್ಯು ಅವರ ವಿವಾಹ ಕೊಪ್ಪ ತಾಲೂಕಿನಲ್ಲಿ ನೆರವೇರಿತು. ಕುಟುಂಬಿಕರು ಹಾಗೂ ಬಂಧುಬಳಗದ ಸಮ್ಮುಖದಲ್ಲಿ ಚೇತನಾ ಅವರನ್ನು ಅಭಿಮನ್ಯು ವರಿಸಿದರು.

  'ಶ್ರೀಕಿ' ಮದುವೆ

  'ಒಲವೇ ಮಂದಾರ' ಖ್ಯಾತಿಯ ನಟ ಶ್ರೀಕಿ ಅವರಿಗೂ ಇದೇ ವರ್ಷ ಕಂಕಣ ಬಲ ಕೂಡಿ ಬಂತು. ಗುರುಹಿರಿಯರು ನಿಶ್ಚಯಿಸಿದಂತೆ ಎಂ.ಬಿ.ಎ ಓದಿರುವ ವೀಣಾ ಅವರನ್ನ ಬಾಳಸಂಗಾತಿಯನ್ನಾಗಿ ಶ್ರೀಕಿ ಸ್ವೀಕರಿಸಿದರು.

  ಗರ್ಲ್ ಫ್ರೆಂಡ್ ವರ್ಷಾ ಕೈ ಹಿಡಿದ ರಿಕಿ ಕೇಜ್

  ಅಂತಾರಾಷ್ಟ್ರೀಯ ಖ್ಯಾತಿಯ ಯುವ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ತಮ್ಮ ಬಹುಕಾಲದ ಗೆಳತಿ ವರ್ಷಾ ಗೌಡ ಅವರನ್ನ ವರಿಸಿದರು.

  ಶಿವಣ್ಣ ಪುತ್ರಿ ನಿರುಪಮಾ ನಿಶ್ವಿತಾರ್ಥ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಅವರ ಹಿರಿಯ ಪುತ್ರಿ ಡಾ.ನಿರುಪಮಾ ಅವರ ನಿಶ್ಚಿತಾರ್ಥ ಆಗಸ್ಟ್ ತಿಂಗಳಲ್ಲಿ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಇದೊಂದು ರೀತಿಯ ಲವ್ ಕಮ್ ಅರೇಂಜ್ಡ್ ಎಂಗೇಜ್ ಮೆಂಟ್. ಡಾ.ನಿರುಪಮಾ ಹಾಗೂ ಡಾ.ದಿಲೀಪ್ ಕುಮಾರ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

  ಎಸ್.ನಾರಾಯಣ್ ಪುತ್ರಿ ನಿಶ್ಚಿತಾರ್ಥ

  ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ಪುತ್ರಿ ವಿದ್ಯಾ ನಿಶ್ಚಿತಾರ್ಥ ಅಕ್ಟೋಬರ್ ತಿಂಗಳಲ್ಲಿ ನೆರವೇರಿತು. ವಿದ್ಯಾ ಅವರ ಕೈಹಿಡಿಯುತ್ತಿರುವ ವರನ ಹೆಸರು ಶ್ರೀನಿವಾಸ್.

  English summary
  2014 not only saw a hits and flops of Kannada Movies. Sandalwood also witnessed marriages of few actors. Here is the detailed report of Sandalwood Marriages - 2014.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more