»   » ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಮಂಡ್ಯದ ಹುಡುಗ ಸತೀಶ್ ನೀನಾಸಂ!

ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಮಂಡ್ಯದ ಹುಡುಗ ಸತೀಶ್ ನೀನಾಸಂ!

Posted By:
Subscribe to Filmibeat Kannada
Sathish Ninasam, Kannada Actor enters Bollywood

ನಟ ಸತೀಶ್ ನೀನಾಸಂ ಸದ್ಯ ಕನ್ನಡದ ಅನೇಕ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಆದರೆ ಈ ಎಲ್ಲ ಸಿನಿಮಾಗಳ ಜೊತೆಗೆ ಈಗ ಅವರ ಕಡೆಯಿಂದ ಒಂದು ದೊಡ್ಡ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಸತೀಶ್ ಈಗ ಪರಭಾಷೆಯ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದಿದ್ದಾರೆ.

ನೀನಾಸಂ ಸತೀಶ್ ನಟನೆಯ 'ಗೋದ್ರಾ' ಚಿತ್ರದ ಶೂಟಿಂಗ್ ವೇಳೆ ಅವಘಡ!

ನೀನಾಸಂ ಸತೀಶ್ ಈಗ ಬಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಷಯವನ್ನು ಸ್ವತಃ ಸತೀಶ್ ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ''ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ನೀವು ಕೊಟ್ಟ ನಿರಂತರ ಬೆಂಬಲ ಹೀಗೆ ಇರಲಿ. ಶೀಘ್ರದಲ್ಲಿ ಮೊದಲ ವಿನ್ಯಾಸ ಬಿಡುಗಡೆಯಾಗಲಿವೆ.'' ಎಂದು ನಟ ಸತೀಶ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Sathish Neenasam has taken his twitter account to spoke about his Bollywood debut

ಸದ್ಯಕ್ಕೆ ಸತೀಶ್ ತಾವು ಕಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಹೇಳಿದ್ದಾರೆ ಹೊರತು ಅದು ಯಾವ ಸಿನಿಮಾ ಎಂಬುದನ್ನು ಇನ್ನು ಬಹಿರಂಗ ಪಡಿಸಿಲ್ಲ. ಅಂದಹಾಗೆ, ಸತೀಶ್ ತಮಿಳು ಚಿತ್ರದ ಫಸ್ಟ್ ಲುಕ್ ಅಕ್ಟೋಬರ್ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದ್ದು, ನವೆಂಬರ್ ನಲ್ಲಿ ಆ ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ.

English summary
Kannada Actor Sathish Neenasam has taken his twitter account to spoke about his Bollywood and Kollywood debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada