»   » ಕನ್ನಡ ಚಿತ್ರಕ್ಕೆ ಶ್ರೀಮತಿ ಜಯಲಲಿತಾ ಪಾದಾರ್ಪಣೆ

ಕನ್ನಡ ಚಿತ್ರಕ್ಕೆ ಶ್ರೀಮತಿ ಜಯಲಲಿತಾ ಪಾದಾರ್ಪಣೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಶ್ರೀಮತಿ ಜಯಲಲಿತಾ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮತ್ತೆ ಬಣ್ಣ ಹಚ್ಚಿದರೇ? ಎಂಬ ಸಂದೇಹ ಬರುವುದು ಸಹಜ. ಆದರೆ ಕುಮಾರಿ ಜಯಲಲಿತಾ ಅವರಿಗೂ ಶ್ರೀಮತಿ ಜಯಲಲಿತಾ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ.

ಈ ಜಯಲಲಿತಾ ಬೇರಾರು ಅಲ್ಲ. ಹಾಗಿದ್ದರೆ ಯಾರಿರಬಹುದು? ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಗೊತ್ತಾಗಲಿಲ್ಲವೇ? ಗೊತ್ತಾಗುವುದೂ ಇಲ್ಲ ಬಿಡಿ. ಶ್ರೀಮತಿ ಜಯಲಲಿತಾರ ವಿಭಿನ್ನ ಗೆಟಪ್ ನಲ್ಲಿರುವವರು ಹಾಸ್ಯನಟ ಶರಣ್. ಈ ಚಿತ್ರದ ಪೋಸ್ಟರ್ ಈಗಾಗಲೇ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ.

Sharan in Shrimati Jayalalitha

ಮಲಯಾಳಂನ ಹಿಟ್ ಚಿತ್ರ 'ಮಾಯಾ ಮೋಹಿನಿ'ಯ ಸ್ಫೂರ್ತಿಯಿಂದ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದ ಹೀರೋ ಮಹಿಳೆಯ ಗೆಟಪ್ ನಲ್ಲಿರುವುದನ್ನು ಬಿಟ್ಟರೆ ಉಳಿದಂತೆ ಮೂಲ ಚಿತ್ರದ ಯಾವುದೇ ಸಾಮ್ಯತೆಗಳೂ ಇಲ್ಲ ಎನ್ನುತ್ತಾರೆ ಶರಣ್. ಶ್ರೀಮತಿ ಜಯಲಲಿತಾ ಚಿತ್ರ ಸಂಪೂರ್ಣ ಭಿನ್ನ ಎಂಬುದು ಅವರ ವಿವರಣೆ.

ವಿಷ್ಣುವರ್ಧನ ಹಾಗೂ ಚಾರುಲತಾ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿ ಕುಮಾರ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಇಂದಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪಿ ಇಂದಿರಾ ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ, ಕರುಣಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಶರಣ್ ಜೊತೆ ಚಿತ್ರದಲ್ಲಿ ರವಿಶಂಕರ್, ಹರೀಶ್ ರಾಜ್, ಸಾಧು ಕೋಕಿಲಾ, ತಬಲಾ ನಾಣಿ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಮೊದಲು ಜೈ ಲಲಿತಾ ಎಂದು ಹೆಸರಿಡಲು ಚಿಂತಿಸಿದ್ದರು. ಆದರೆ ಶೀರ್ಷಿಕೆ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಶ್ರೀಮತಿ ಜಯಲಲಿತಾ ಎಂದಿಡಲಾಗಿದೆ. (ಏಜೆನ್ಸೀಸ್)

English summary
Kannda films comedian turned hero Sharan’s confidence and the actor is not only flooded with offers, but is also in the mood to experiment with new kinds of roles and get-ups. Sharan will be seen dressed up as a woman in his forthcoming film titled Srimathi Jayalalitha. The film is said to have been loosely inspired from the Malayalam hit Maya Mohini.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada