»   » 'ಬುಲ್ಲೆಟ್' ಏರಿ ಬಂದ ಬರ್ತಡೆ ಬಾಯ್ ಶರಣ್

'ಬುಲ್ಲೆಟ್' ಏರಿ ಬಂದ ಬರ್ತಡೆ ಬಾಯ್ ಶರಣ್

Posted By:
Subscribe to Filmibeat Kannada

ಅಂತೂ ಇಂತೂ, ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡುಬಿಟ್ಟಿದ್ದಾರೆ ಕನ್ನಡದ ಕಾಮಿಡಿ ಖಿಲಾಡಿ ನಟ ಶರಣ್. ನಾಯಕನ ಪಟ್ಟಕ್ಕೇರಿ ಶರಣ್ ನಾಲ್ಕು ಸಿನಿಮಾ ಮಾಡಿದ್ದಾರೆ ಅಷ್ಟೆ. ಅಷ್ಟು ಬೇಗ, ಕನ್ನಡದ ಬಹುಬೇಡಿಕೆಯ ನಾಯಕನಾಗಿದ್ದಾರೆ ನಟ ಶರಣ್.

ಶರಣ್ ಕಾಮಿಡಿಗೆ ಶರಣು ಶರಣಾರ್ಥರಾದ ಸಿನಿ ಪ್ರೇಕ್ಷಕರು, ನಾಯಕ ಶರಣ್ ರನ್ನು ಬಾಚಿ ತಬ್ಬಿಕೊಂಡಿದ್ದಾರೆ. ಇದರ ಪರಿಣಾಮ ಶರಣ್ ರ ಹೊಸ ಸಿನಿಮಾ 'ರಾಜ ರಾಜೇಂದ್ರ' ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. [ರಾಜ ರಾಜೇಂದ್ರ ಹಾಡುಗಳನ್ನ ನೋಡಿ]


Sharan starrer Bullet Basya first look poster out

ಎಲ್ಲಾ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು, ತಮ್ಮ ಹುಟ್ಟುಹಬ್ಬದಂದು ರಿಲೀಸ್ ಮಾಡುವಂತೆ, ಇಂದು ಶರಣ್ ಕೂಡ ತಮ್ಮ 39ನೇ ಹುಟ್ಟುಹಬ್ಬದ ಪ್ರಯುಕ್ತ 'ರಾಜ ರಾಜೇಂದ್ರ' ಚಿತ್ರವನ್ನ ಬಿಡುಗಡೆ ಮಾಡಿದ್ದಾರೆ.


ಇದರೊಂದಿಗೆ ಶರಣ್ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್ ಆಗಿ 'ಬುಲ್ಲೆಟ್ ಬಸ್ಯಾ' ಚಿತ್ರದ ಫಸ್ಟ್ ಲುಕ್ ಕೂಡ ಇಂದು ಬಹಿರಂಗಗೊಂಡಿದೆ.


ಬುಲ್ಲೆಟ್ ಏರಿ ಖಡಕ್ ಆಗಿ ಕಾಣಿಸಿಕೊಂಡಿರುವ ಶರಣ್, ಚಿತ್ರದಲ್ಲಿ ಆಕ್ಷನ್ ಹೀರೋ ಅಥವಾ ವಿಲನ್ ಅಂದುಕೊಳ್ಳಬೇಡಿ. ಎಂದಿನ ಶರಣ್ ಇಮೇಜ್ ಗೆ ತಕ್ಕಂತೆ ಇಲ್ಲೂ ಶರಣ್ ಕಾಮಿಡಿ ಕಿಂಗ್.


Sharan starrer Bullet Basya first look poster out

'ಬುಲ್ಲೆಟ್ ಬಸ್ಯಾ' ಅನ್ನುವ ಟೈಟಲ್ ಕೇಳ್ತಿದ್ದ ಹಾಗೆ ಎಲ್ಲರಿಗೂ ಖ್ಯಾತ ಖಳನಟ ಸುಧೀರ್ ನೆನಪಿಗೆ ಬರಬಹುದು. ಆದರೆ, ಬುಲ್ಲೆಟ್ ಏರಿ ಅಂದು ರೋಲ್ ಕಾಲ್ ಕಲೆಕ್ಟ್ ಮಾಡ್ತಿದ್ದ ಸುಧೀರ್ ಪಾತ್ರಕ್ಕೂ, ಇಂದು ಶರಣ್ ಅಭಿನಯಿಸುವ 'ಬಸ್ಯಾ' ಪಾತ್ರಕ್ಕೂ ಲಿಂಕ್ ಇಲ್ಲ. [ಸದ್ದಿಲ್ಲದೇ ಬುಲೆಟ್ ಏರಿದ ಬಸ್ಯಾ ಶರಣ್..!]


ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ 'ಬುಲ್ಲೆಟ್ ಬಸ್ಯಾ' ಚಿತ್ರಕಥೆ ನಡೆಯಲಿದ್ದು, ಶರಣ್ ಗೆ ಇಲ್ಲಿ ಜೋಡಿಯಾಗಿರುವುದು ನಟಿ ಹರಿಪ್ರಿಯಾ. 'ಟೋನಿ' ಚಿತ್ರದ ಬಳಿಕ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ಬುಲ್ಲೆಟ್ ಬಸ್ಯಾ'.


ಸದ್ಯ ಶೂಟಿಂಗ್ ನಲ್ಲಿ ಬಿಜಿಯಾಗಿರುವ 'ಬುಲ್ಲೆಟ್ ಬಸ್ಯಾ', ಬುಲ್ಲೆಟ್ ಏರಿ ನಿಮ್ಮ ಮುಂದೆ ಬರುವುದಕ್ಕೆ ಇನ್ನೂ ಟೈಮ್ ಇದೆ. (ಫಿಲ್ಮಿಬೀಟ್ ಕನ್ನಡ)

English summary
Comedian turned hero Sharan is celebrating his 39th birthday today. The First look poster of his film 'Bullet Basya' is out. Check out the posters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada