»   » ಅಮೂಲ್ಯ ಮದುವೆಗೆ ಮುಂಚೆ ಶಿಲ್ಪಾ ಗಣೇಶ್ ಕೊಡ್ತಿರುವ ಗಿಫ್ಟ್!

ಅಮೂಲ್ಯ ಮದುವೆಗೆ ಮುಂಚೆ ಶಿಲ್ಪಾ ಗಣೇಶ್ ಕೊಡ್ತಿರುವ ಗಿಫ್ಟ್!

Posted By:
Subscribe to Filmibeat Kannada

ಗೋಲ್ಡನ್ ಕ್ವೀನ್ ಅಮೂಲ್ಯ ಹಾಗೂ ಜಗದೀಶ್ ಅವರ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಇಬ್ಬರ ಮನೆಯಲ್ಲೂ ಶಾಸ್ತ್ರ-ಸಂಪ್ರದಾಯಗಳು ಈಗಾಗಲೇ ಶುರುವಾಗಿದೆ.

ಎಲ್ಲರಿಗೂ ಗೊತ್ತಿರುವಾಗೆ ಅಮೂಲ್ಯ ಅವರ ಮದುವೆಯಲ್ಲಿ ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರ ಪಾತ್ರ ಮುಖ್ಯವಾದದು. ಹೀಗಾಗಿ, ಶಿಲ್ಪಾ ಗಣೇಶ್ ಅವರು, ಅಮೂಲ್ಯ ಮದುವೆಗೂ ಮುಂಚೆ ವಿಶೇಷವಾದ ಉಡುಗೊರೆ ನೀಡುತ್ತಿದ್ದಾರೆ.[ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ]

ಹೌದು, ಅಮೂಲ್ಯ ಮದುವೆಯ ವಿಶೇಷವಾಗಿ ನಡೆಯುವ ಮೆಹೆಂದಿ ಕಾರ್ಯಕ್ರಮಕ್ಕೆ ಶಿಲ್ಪಾ ಗಣೇಶ್ ನೇತೃತ್ವ ವಹಿಸಿದ್ದು, ಇದಕ್ಕಾಗಿ ತಮ್ಮ ಮನೆಯನ್ನ ಶೃಂಗಾರಗೊಳಿಸುತ್ತಿದ್ದಾರಂತೆ. ಮುಂದೆ ಓದಿ......

ಅಮೂಲ್ಯ ಮದುವೆಗೆ ಮಹೆಂದಿ ಶಾಸ್ತ್ರ

'ಚೆಲುವಿನ ಚಿತ್ತಾರದ' ಬೆಡಗಿ ಅಮೂಲ್ಯ ಅವರ ಮದುವೆಗೆ ಮೆಹೆಂದಿ ಕಾರ್ಯಕ್ರಮ ನಡೆಯಲಿದ್ದು, ಈ ಕಲರ್ ಪುಲ್ ಕಾರ್ಯಕ್ರಮವನ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ವಹಿಸಿಕೊಂಡಿದ್ದಾರೆ. ಮೇ 10 ರಂದು ಅಮೂಲ್ಯ ಮದುವೆಗೆ ಮೆಹೆಂದಿ ಕಾರ್ಯಕ್ರಮ ನಡೆಯಲಿದೆ.[ಅಮೂಲ್ಯ-ಜಗದೀಶ್ ಮದುವೆ ದಿನಾಂಕ ಫಿಕ್ಸ್, ಮದುವೆ ಎಲ್ಲಿ?]

ಮೆಹೆಂದಿ ಕಾರ್ಯಕ್ರಮಕ್ಕೆ ಗಣೇಶ್ ಮನೆ ಸಜ್ಜು!

ಅಮೂಲ್ಯ ಮದುವೆಯ ಮೆಹೆಂದಿ ಕಾರ್ಯಕ್ರಮಕ್ಕೆ ನಟ ಗಣೇಶ್ ಅವರ ಮನೆ ಫಿಕ್ಸ್ ಆಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ಗಣೇಶ್ ಅವರ ಮನೆಯಲ್ಲಿ ಮೆಹೆಂದಿ ಶಾಸ್ತ್ರ ನೆರವೇರಲಿದ್ದು, ಉತ್ತರ ಭಾರದ ಶೈಲಿಯಲ್ಲಿ ಮೆಹೆಂದಿ ಶಾಸ್ತ್ರ ನಡೆಯಲಿದೆ.[ಚಿತ್ರಗಳು: 'ಅಮೂಲ್ಯ-ಜಗದೀಶ್' ನಿಶ್ಚಿತಾರ್ಥದಲ್ಲಿ ತಾರೆಯರ ಸೆಲ್ಫಿ ಸಂಭ್ರಮ]

ಸಂಗೀತ ಕಾರ್ಯಕ್ರಮ!

ಮೆಹೆಂದಿ ಶಾಸ್ತ್ರದ ಜೊತೆಗೆ ಸಂಗೀತ ಕಾರ್ಯಕ್ರಮವೂ ಗಣೇಶ್ ಅವರ ಮನೆಯಲ್ಲೇ ನೆರವೇರಲಿದೆ. ಪಂಜಾಬಿ ಡ್ಯಾನ್ಸರ್ಸ್ ಮತ್ತು ಡೋಲು ತಂಡದವರು ಆಗಮಿಸಲಿದ್ದಾರೆ. ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಕೂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ.[ನಟಿ ಅಮೂಲ್ಯ-ಜಗದೀಶ್ ಜೋಡಿಯ ನಿಶ್ಚಿತಾರ್ಥ ಸಂಭ್ರಮ]

ಮೇ 12 ರಂದು ಮದುವೆ

ಮೇ 12 ರಂದು ಆದಿಚುಂಚನಗಿರಿಯಲ್ಲಿ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ಮಹೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಮೇ 11ರಂದೇ ಎರಡು ಕುಟುಂಬದವರು ಬೆಂಗಳೂರಿನಿಂದ ಹೊರಡಲಿದ್ದಾರೆ. ಮದುವೆಗೆ ಕೇವಲ ಕಟುಂಬಸ್ಥರು ಮತ್ರು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ.[ಮದುವೆಗೂ ಮುನ್ನ 'ಕೊನೆ' ಪಾರ್ಟಿ ಮಾಡಿ ಖುಷಿ ಪಟ್ಟ ಅಮೂಲ್ಯ.!]

ಮೇ 16ಕ್ಕೆ ಆರತಕ್ಷತೆ

ಇನ್ನು ಸರಳವಾಗಿ ಮದುವೆಯಾಗುತ್ತಿರುವ ಅಮೂಲ್ಯ ಮೇ 14 ರಂದು ಸಂತೋಷ ಕೂಟವನ್ನ ಹಮ್ಮಿಕೊಂಡಿದ್ದಾರೆ. ಇದರ ಹಿಂದೆಯೇ ಮೇ 16 ರಂದು ಮದುವೆಯ ಆರತಕ್ಷತೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ.[ಅಜಯ್ ರಾವ್ ಗೆ 'ಅಮೂಲ್ಯ-ಜಗದೀಶ್' ಮದುವೆ ಕರೆಯೋಲೆ]

English summary
It is a known fact Shilpa was the one who helped Amulya find her husband-to-be — Jagadish. It is no surprise, then, that Shilpa is hosting Amulya's mehendi bash at her place

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada