»   » 'ಗೋದ್ರಾ' ಚಿತ್ರಕ್ಕೆ ಚಾಲನೆ ಕೊಟ್ಟ ಸ್ಯಾಂಡಲ್ ವುಡ್ ಕಿಂಗ್

'ಗೋದ್ರಾ' ಚಿತ್ರಕ್ಕೆ ಚಾಲನೆ ಕೊಟ್ಟ ಸ್ಯಾಂಡಲ್ ವುಡ್ ಕಿಂಗ್

Posted By:
Subscribe to Filmibeat Kannada

ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಚಾಲನೆ ಕೊಟ್ಟಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ಶಿವಣ್ಣ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ಮೊದಲ ಬಾರಿಗೆ ಸತೀಶ್ ಹಾಗೂ ಶ್ರದ್ಧಾ ಶ್ರೀನಾಥ್ ಒಟ್ಟಿಗೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹೆಸರು 'ಗೋದ್ರಾ'. 'ಗೋದ್ರಾ' ಎಂದಾಕ್ಷಣ 2002ರಲ್ಲಿ ನಡೆದ ಗುಜರಾತ್ ನಲ್ಲಿ 'ಗೋದ್ರಾ ಹತ್ಯಾಕಾಂಡ' ಕುರಿತ ಸಿನಿಮಾನಾ ಎಂಬ ಪ್ರಶ್ನೆ ಕಾಡುವುದು ಸಹಜ. ಆದ್ರೆ, ಆ 'ಗೋದ್ರಾ ಹತ್ಯಾಕಾಂಡ'ಕ್ಕೂ ಮತ್ತು ಸತೀಶ್ ಅಭಿನಯಿಸುತ್ತಿರುವ ಈ 'ಗೋದ್ರಾ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.

Shiva rajkumar launched Kannada Movie Godhra

ಇದೊಂದು ನವಿರಾದ ಪ್ರೇಮಕಥೆಯಾಗಿದ್ದು, ಈ ಚಿತ್ರದಲ್ಲಿ ಸತೀಶ್ ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 35 ವರ್ಷದ ವಯಸ್ಕ ಮತ್ತು 20 ವರ್ಷದ ಯುವಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಇದಕ್ಕಾಗಿ ಸುಮಾರು 3 ತಿಂಗಳು ಗಡ್ಡ ಬಿಟ್ಟು ತಯಾರಿ ಆಗಿದ್ದಾರೆ ಸತೀಶ್ ನೀನಾಸಂ.

Shiva rajkumar launched Kannada Movie Godhra

ಇನ್ನು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಂದೀಶ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ, ಸರಳವಾಗಿ ಸಿನಿಮಾ ಮುಹೂರ್ತ ಮಾಡಿಕೊಂಡಿರುವ ಗೋದ್ರಾ ಚಿತ್ರತಂಡ, ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದೆ.

English summary
Sandalwood King Shiva rajkumar launched, Sathish Ninasam and Shraddha Srinath starrer 'Godhra' movie. The Movie Directed by Nandish

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada