»   » ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್', ಚಿತ್ರದಿಂದ ಒಂದು ಗುಡ್ ನ್ಯೂಸ್!

ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್', ಚಿತ್ರದಿಂದ ಒಂದು ಗುಡ್ ನ್ಯೂಸ್!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕಿಲ್ಲಿಂಗ್ ವೀರಪ್ಪನ್ ಚಿತ್ರತಂಡದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ.

ಅದೇನಪ್ಪಾ ಅಂದ್ರೆ, ಗಾಂಧಿನಗರದಲ್ಲಿ ಈ ವರ್ಷ ಬಹಳ ನಿರೀಕ್ಷೆಯನ್ನು ಹುಟ್ಟಿಸಿರುವ ರಾಮ್ ಗೋಪಾಲ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್', ಚಿತ್ರದ ಸೆಕೆಂಡ್ ಟ್ರೈಲರ್ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಮರಣ ಹೊಂದಿದ ದಿನದಂದು ಬಿಡುಗಡೆಯಾಗಲಿದೆ.[ಕುತೂಹಲ ಹುಟ್ಟಿಸಿದ 'ಕಿಲ್ಲಿಂಗ್ ವೀರಪ್ಪನ್' ಪೋಸ್ಟರ್]

shiva rajkumar

ಚಿತ್ರದ ಫಸ್ಟ್ ಟ್ರೈಲರ್ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದು, ಇದೀಗ ಸೆಕೆಂಡ್ ಟ್ರೈಲರ್ ವೀರಪ್ಪನ್ ಮರಣ ಹೊಂದಿದ ದಿನ (ಅಕ್ಟೋಬರ್ 18 ರಂದು, ರಾತ್ರಿ 10.40ಕ್ಕೆ) ದಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಆದ್ದರಿಂದ ಇದೀಗ ನವರಾತ್ರಿ ಹಬ್ಬದ ಭರ್ಜರಿ ತಯಾರಿಯ ಸಂಭ್ರಮದಲ್ಲಿರುವ ಶಿವಣ್ಣ ಅವರ ಅಭಿಮಾನಿಗಳಿಗೆ ವರ್ಮಾ ಅವರು ಸಖತ್ ಫವರ್ ಫುಲ್ ಗಿಫ್ಟ್ ನೀಡಿದ್ದಾರೆ.[ಫ್ಲ್ಯಾಶ್ ನ್ಯೂಸ್: 3000 ಥಿಯೇಟರ್ ಗಳಲ್ಲಿ ಶಿವಣ್ಣ, ಕಿಲ್ಲಿಂಗ್ ವೀರಪ್ಪನ್]

ಇನ್ನು ಟ್ರೈಲರ್ ಬಿಡುಗಡೆ ಮಾಡುವ ಸಮಯವನ್ನು ನಿರ್ದೇಶಕ ರಾಮ್ ಗೋಪಾಲ ವರ್ಮಾ ಅವರು ಸದ್ಯದಲ್ಲೇ ತಿಳಿಸಲಿದ್ದಾರೆ.

shiva rajkumar

ಜೊತೆಗೆ ಚಿತ್ರದ ಆಡಿಯೋ ರಿಲೀಸ್ ಕೂಡ ಅಕ್ಟೋಬರ್ 25ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು, ಚಿತ್ರದ ಹಾಡುಗಳಿಗೆ ಪವರ್ ಸ್ಟಾರ್ ಪುನೀತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಧ್ವನಿಯಾಗಿದ್ದಾರೆ.['ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ]

ನಾಲ್ಕು ಭಾಷೆಯಲ್ಲಿ ತೆರೆ ಕಾಣುತ್ತಿರುವ ಚಿತ್ರದಲ್ಲಿ ಪಾರುಲ್ ಯಾದವ್, ಸಂದೀಪ್ ಭಾರದ್ವಾಜ್, ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್, ಗಡ್ಡಾ ವಿಜಿ, ರಾಜೇಶ್ ಮುಂತಾದವರು ಮಿಂಚಿದ್ದಾರೆ. ನವೆಂಬರ್ ನಲ್ಲಿ ಚಿತ್ರ ಭರ್ಜರಿಯಾಗಿ ತೆರೆ ಕಾಣಲಿದೆ.

English summary
The second trailer of 'Killing Veerappan' which is being directed by Ramgopal Verma is all set to be released on the death day of Veerappan (October 18th). Killing Veerappan features Kannada Actor Shiva Rajkumar, Kannada Actress Parul Yadav, Actress Yagna Shetty in the lead role. The movie is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada