»   » ದರ್ಶನ್ ದಾಖಲೆ ಮುರಿದು ಶಿವಣ್ಣ ಅಮೋಘ ದ್ವಿಶತಕ

ದರ್ಶನ್ ದಾಖಲೆ ಮುರಿದು ಶಿವಣ್ಣ ಅಮೋಘ ದ್ವಿಶತಕ

Posted By:
Subscribe to Filmibeat Kannada

ಈಗ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಶಿವ ಚಿತ್ರದ್ದೇ ಮಾತು. ಚಿತ್ರದ ಬಗ್ಗೆ ಬೆಟ್ಟಿಂಗ್ ಕೂಡಾ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಕನ್ನಡ ಚಿತ್ರವೊಂದು ದಾಖಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Shiva movie releasing in 200+ theaters

ಶಿವ ಚಿತ್ರ ಸದ್ಯಕ್ಕೆ ಸಿಕ್ಕಿರುವ ವರ್ತಮಾನಗಳ ಪ್ರಕಾರ 225 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಶಿವರಾಜ್ ಕುಮಾರ್ ತನ್ನ 101ನೇ ಚಿತ್ರದಲ್ಲಿ ದ್ವಿಶತಕ ಬಾರಿಸಿದ್ದಾರೆ.

ಇದುವರೆಗಿನ ದಾಖಲೆ ದರ್ಶನ್ ಅಭಿನಯದ ಚಿಂಗಾರಿ ಚಿತ್ರದ ಹೆಸರಿನಲ್ಲಿತ್ತು. ಈ ಚಿತ್ರ ಸುಮಾರು 190 ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿತ್ತು. ಶಿವಣ್ಣ ಅಭಿನಯದ ಶಿವ ಚಿತ್ರ ಈ ದಾಖಲೆಯನ್ನು ಮುರಿಯಲಿದೆ.

ಸಂತೋಷ್ ಚಿತ್ರಮಂದಿರದಲ್ಲಿ ಶಿವಣ್ಣ ಅಭಿಮಾನಿಗಳಿಗೆ ಹಬ್ಬ ಭಾನುವಾರದಿಂದಲೇ (ಆ 19) ಆರಂಭಗೊಂಡಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬಳಸಿಕೊಂಡಿದ್ದ ಬೃಹತ್ ಶಿವನ ಮೂರ್ತಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮತ್ತು ಶಿವಣ್ಣನ ಕಟೌಟ್ ಗೆ ಕೂಡಾ ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಚಿತ್ರದ ಬಿಡುಗಡೆಯ ದಿನವಾದ ಶುಕ್ರವಾರ ಆಗಸ್ಟ್ 24 ರಿಂದ ಮೂರು ದಿನಗಳ ಕಾಲ ಶಿವರಾಜ್ ಅಭಿಮಾನಿಗಳ ಸಂಘ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಆರಂಭದಲ್ಲಿ ಕುಂಟುತ್ತಾ ಸಾಗಿದ್ದ ಚಿತ್ರದ ಆಡಿಯೋ ಮಾರಾಟ ಇತ್ತೀಚಿನ ದಿನಗಳಲ್ಲಿ ಸಕತ್ ಬಿಕರಿಯಾಗುತ್ತಿದೆ.

ಚಿತ್ರದ ಊಸರವಳ್ಳಿ..ಊಸರವಳ್ಳಿ ಹಾಡು ಮತ್ತು ಹಾಡಿಗೆ ಶಿವಣ್ಣ, ರಾಗಿಣಿ ನೃತ್ಯ ಈಗಾಗಲೇ ಭಾರೀ ಸುದ್ದಿಯಾಗಿದೆ. ಬಿ ಮತ್ತು ಸಿ ಸೆಂಟರ್ ಗಳಲ್ಲಿ ಅಲ್ಲದೆ ಗಡಿಭಾಗದಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ರಾಜ್ಯದ ಕೆಲ ಭಾಗಗಳಿಗೆ ಚಿತ್ರದ ಡಿಸ್ತ್ರಿಬ್ಯೂಷನ್ ಹಕ್ಕು ಈಗಾಗಲೇ ಮಾರಾಟವಾಗಿದ್ದು, ಚಿತ್ರ ಬಿಡುಗಡೆಗೆ ಮುನ್ನವೇ ಹತ್ತು ಕೋಟಿ ವ್ಯಾಪಾರ ಮಾಡಿದೆ ಎನ್ನಲಾಗಿದೆ.

ಬಿಡುಗಡೆಗೆ ಮುನ್ನ ಭಾರೀ ಸದ್ದು ಮಾಡಿದ್ದ ಜೋಗಯ್ಯ ಚಿತ್ರ ಫ್ಲಾಪ್ ಪಟ್ಟಿಗೆ ಸೇರಿದ ನಂತರ 'ಶಿವ' ಚಿತ್ರದ ಬಗ್ಗೆ ಶಿವಣ್ಣರ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಭಾರಿ ಭರವಸೆ ಮೂಡಿದೆ.

ಇತ್ತ ಓಂ ಪ್ರಕಾಶ್ ರಾವ್ ಅವರ ಭೀಮಾ ತೀರದಲ್ಲಿ ಚಿತ್ರ ಸೂಪರ್ ಹಿಟ್ ಪಟ್ಟಿಗೆ ಸೇರಿದ ನಂತರ ಅವರ ನಿರ್ದೇಶನದ ಶಿವ ಚಿತ್ರದ ಮೇಲಿನ ಭಾರೀ ನಿರೀಕ್ಷೆಗಳಿವೆ.

ಅಲ್ಲದೆ ಓಂ ಚಿತ್ರ ಹೆಚ್ಚಾಗಿ ಮಾಸ್ ಪ್ರೇಕ್ಷಕರನ್ನು ಸೆಳೆಯುವ ಚಿತ್ರಗಳಾದರೂ ಅವರ ಚಿತ್ರಗಳು ಬೋರ್ ಹೊಡೆಸಿದ ಉದಾಹರಣೆಗಳು ಕಮ್ಮಿ.

English summary
Sandalwood much awaited Shivaraj Kumar starer Shiva movie releasing in nearly 225 theaters. Shivarj Kumar, Ragini Dwivedi in main cast role and Om Prakash Rao is directing the movie.
Please Wait while comments are loading...