Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವೇದ' ವಿಜಯಯಾತ್ರೆ: ಇಂದು ಯಾವ ಯಾವ ಊರಿಗೆ ಶಿವಣ್ಣ ಅಂಡ್ ಟೀಂ ಭೇಟಿ?
ಎ. ಹರ್ಷ ನಿರ್ದೇಶನದಲ್ಲಿ ಡಾ. ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ವಿಜಯಯಾತ್ರೆ ಮಾಡಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತಿದೆ.
ಈಗಾಗಲೇ ಮೈಸೂರು, ಟೀ ನರಸೀಪುರ, ಮಂಡ್ಯ, ಹುಣಸೂರು ಸೇರಿದಂತೆ ಕೆಲವೆಡೆ 'ವೇದ' ಚಿತ್ರತಂಡ ಪ್ರೇಕ್ಷಕರ ನಡುವೆ ಹೋಗಿಬಂದಿದೆ. ಎಲ್ಲೆಡೆ ತಂಡಕ್ಕೆ ಭವ್ಯ ಸ್ವಾಗತ ಸಿಕ್ಕಿತ್ತು. ಅಭಿಮಾನಿಗಳು ಸೆಂಚುರಿ ಸ್ಟಾರ್‌ನ ತಮ್ಮ ಊರಿನಲ್ಲಿ ನೋಡಿ ಖುಷಿಯಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿ 'ವೇದ' ವಿಜಯಯಾತ್ರೆಗೆ ಶಕ್ತಿ ತುಂಬಿದ್ದರು. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ 'ವೇದ' ಸಿನಿಮಾ ನಿರ್ಮಾಣವಾಗಿ ರಿಲೀಸ್ ಆಗಿದೆ. ಶಿವಣ್ಣ 2 ಶೇಡ್‌ಗಳಿರೋ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ವೇದ
ವಿಜಯಯಾತ್ರೆ:
ಶಿವಣ್ಣನನ್ನು
ನೋಡಲು
ಕಿಕ್ಕಿರಿದು
ಜಮಾಯಿಸಿದ
ಜನರು
ಈ ಬಾರಿ ಪ್ಯಾಂಟಸಿ, ಮೈಥಾಲಜಿ ಬಿಟ್ಟು ಶಿವಣ್ಣ - ಹರ್ಷ ಕಾಂಬಿನೇಷನ್‌ನಲ್ಲಿ ಒಂದು ರೆಟ್ರೋ ಸ್ಟೈಲ್ ಮಾಸ್ ಎಂಟರ್‌ಟೈನರ್ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಮಿಂಚಿದ್ದಾರೆ. ಉಮಾಶ್ರೀ, ಅದಿತಿ ಅರುಣ್ ಸಾಗರ್ ಹಾಗೂ ಶ್ವೇತಾ ಚೆಂಗಪ್ಪ ಸೇರಿದಂತೆ ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಒಂದು ರಿವೇಂಜ್ ಸ್ಟೋರಿಯನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಅಭಿಮಾನಿಗಳಿಗಂತೂ ಸಿನಿಮಾ ಸಖತ್ ಕಿಕ್ ಕೊಡ್ತಿದೆ. ಎರಡನೇ ವಾರ ಥಿಯೇಟರ್‌ಗಳಲ್ಲಿ 'ವೇದ' ಆರ್ಭಟ ಮುಂದುವರೆದಿದೆ.

ಇಂದು(ಜನವರಿ 4) 'ವೇದ' ವಿಜಯಯಾತ್ರೆ ಬಳ್ಳಾರಿ ಕಡೆ ಸಾಗಿದೆ. ಬೆಳಗ್ಗೆ 11.30ಕ್ಕೆ ಚಿತ್ರತಂಡ ಚಳ್ಳಕೆರೆಯ ರಾಮ್‌ಕೃಷ್ಣ ಥಿಯೇಟರ್‌ಗೆ ಭೇಟಿ ನೀಡಲಿದೆ. ಅಲ್ಲಿಂದ 1.30ರ ಸುಮಾರಿಗೆ ಹೊಸಪೇಟೆಯ ಲಕ್ಷ್ಮಿ ಥಿಯೇಟರ್‌ಗೆ ತಂಡ ಹೋಗಲಿದೆ. 4.30ಕ್ಕೆ ಬಳ್ಳಾರಿಯ ಶಿವ, 7 ಗಂಟೆಗೆ ಚಿತ್ರದುರ್ಗದ ಪ್ರಸನ್ನ ಥಿಯೇಟರ್‌ಗೆ ಶಿವಣ್ಣ ಎಂಟ್ರಿ ಕೊಡಲಿದ್ದಾರೆ. ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲಿದ್ದಾರೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು 'ವೇದ' ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ವರ್ಷದ ಕೊನೆಗೆ ಸೆಂಚುರಿ ಸ್ಟಾರ್‌ಗೆ ಭರ್ಜರಿ ಸಕ್ಸಸ್ ಸಿಕ್ಕಿದಂತಾಗಿದೆ. ಈಗಾಗಲೇ ಅಂದಾಜು 26 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ.