»   » 'ರಾಜ್ ಲೀಲಾ ವಿನೋದ' ಬಗ್ಗೆ ಶಿವಣ್ಣ ಹೇಳಿದ್ದೇನು?

'ರಾಜ್ ಲೀಲಾ ವಿನೋದ' ಬಗ್ಗೆ ಶಿವಣ್ಣ ಹೇಳಿದ್ದೇನು?

By: B.K
Subscribe to Filmibeat Kannada

ಪತ್ರಕರ್ತ ರವಿಬೆಳಗೆರೆ ಬರೆದಿರುವ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯಾಕಂದ್ರೆ, ಈ ಪುಸ್ತಕದಲ್ಲಿ ಡಾ.ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ನಡುವಿನ ಸಂಬಂಧಗಳ ಸುತ್ತ ಬರೆಯಲಾಗಿದೆ. ಹೀಗಾಗಿ, ಪುಸ್ತಕವನ್ನ ಓದಿದ ಜನಸಾಮಾನ್ಯರಿಗೆ ಹಾಗೂ ಅಭಿಮಾನಿಗಳಿಗೆ ಹಲವಾರು ಪ್ರಶ್ನೆಗಳು ಉದ್ಭವ ಆಗಿದೆ.

'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ಡಾ.ರಾಜ್ ಕುಮಾರ್ ಮಕ್ಕಳಾದ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅಥವಾ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಯಾರಾದರೂ ಮಾತನಾಡುತ್ತಾರಾ? ಅದರಲ್ಲಿರುವ ಸಂಗತಿಗಳ ಸತ್ಯಾಸತ್ಯತೆಯ ಬಗ್ಗೆ ಪ್ರತಿಕ್ರಿಯೆ ನೀಡ್ತಾರಾ ಎಂಬ ಕುತೂಹಲ ಕೂಡ ಎಲ್ಲರಲ್ಲಿ ಕಾಡುತ್ತಿತ್ತು.['ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಸ್ಫೋಟಕ ಮಾಹಿತಿ ಇದು.!]

ಹೀಗಿರುವಾಗಲೇ,'ಶ್ರೀಕಂಠ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಖಾಸಗಿ ವೆಬ್ ಸೈಟ್ (CiniAdda.com) ವರದಿಗಾರ್ತಿಯೊಬ್ಬರು ಶಿವಣ್ಣನಿಗೆ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ಪ್ರಶ್ನೆಯನ್ನ ಕೇಳಿಯೇ ಬಿಟ್ಟರು. ಇದಕ್ಕೆ ಶಿವಣ್ಣ ಕೊಟ್ಟ ಉತ್ತರ ಇಲ್ಲಿದೆ....

ಶಿವಣ್ಣನಿಗೆ ಎದುರಾಯ್ತು 'ರಾಜ್ ಲೀಲಾ ವಿನೋದ' ಬಗ್ಗೆ ಪ್ರಶ್ನೆ!

ಇತ್ತೀಚೆಗೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ 'ಶ್ರೀಕಂಠ' ಚಿತ್ರದ ಬಿಡುಗಡೆಯ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ CiniAdda.com ವೆಬ್ ಸೈಟ್ ನ ವರದಿಗಾರ್ತಿಯೊಬ್ಬರು ಶಿವರಾಜ್ ಕುಮಾರ್ ಅವರಿಗೆ 'ರಾಜ್ ಲೀಲಾ ವಿನೋದ' ಬಗ್ಗೆ ಪ್ರಶ್ನೆ ಕೇಳಿದರು.[ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?]

ವರದಿಗಾರ್ತಿ ಕೇಳಿದ ಪ್ರಶ್ನೆ!

'ರಾಜ್ ಲೀಲಾ ವಿನೋದ' ಪುಸ್ತಕ ಬಂತು. ಅದರಲ್ಲಿರುವ ಅಂಶಗಳ ಬಗ್ಗೆ, ಅಲ್ಲಿ ಬಂದಿರುವ ವಿಷಯಗಳ ಬಗ್ಗೆ ನಿಮಗೆ ಏನ್ ಅನ್ಸುತ್ತೆ?

ಶಿವರಾಜ್ ಕುಮಾರ್ ಕೊಟ್ಟ ಉತ್ತರ!

ಐ ಡೋಂಟ್ ನೋ....ಗೊತ್ತಿದ್ರೆ ಮಾತಾಡಬಹುದು. ಗೊತ್ತಿಲ್ಲದೇ ಇದ್ದರೇ ಹೇಗೆ ಮಾತಾಡೋದು.

ಈ ಪ್ರಶ್ನೆ ಬೇಡವೆಂದ ಆಪ್ತರು!

ವರದಿಗಾರ್ತಿ ಈ ಪ್ರಶ್ನೆ ಕೇಳುತ್ತಿದ್ದಂತೆ ಅಲ್ಲೇ ಪಕ್ಕದಲ್ಲೇ ಇದ್ದ ಶಿವಣ್ಣ ಅವರ ಆಪ್ತರೊಬ್ಬರು ''ಮೇಡಂ ಇಲ್ಲಿ ಇದು ಬೇಡ ಬಿಡಿ'' ಎಂದು ವಿರೋಧಿಸಿದರು.

''ನೋ ಪ್ರಾಬ್ಲಂ'' ಎಂದ ಶಿವಣ್ಣ

ವರದಿಗಾರ್ತಿ ಕೇಳಿದ ಪ್ರಶ್ನೆಗೆ ಆಪ್ತರೊಬ್ಬರು ವಿರೋಧ ವ್ಯಕ್ತಪಡಿಸಿದಾಗ ನಟ ಶಿವರಾಜ್ ಕುಮಾರ್, ''ನೋ ಪ್ರಾಬ್ಲಂ, ಐ ಆಮ್ ನಥ್ಥಿಂಗ್ ಟು ಬಾದರ್ ಅಬೌಟ್'' ಎಂದು ಮುಂದುವರೆಸಿದರು.[ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?]

ಐ ಡೋಂಟ್ ನೋ ಎನಿಥಿಂಗ್!

''ನನಗೆ ಏನೂ ಗೊತ್ತಿಲ್ಲ. ನನಗೆ ಏನಾದರೂ ಗೊತ್ತಿದ್ರೆ ಹೇಳಬಹುದು... ಲೀಲಾವತಿ ಅವರು ಬಂದಾಗ ನಾವು ಅವರ ಕಾಲು ಮುಗಿತೀವಿ. ನಾವು ಆ ಗೌರವ ಕೊಡ್ತೀವಿ. ಯಾವಾಗಲೂ ಅಷ್ಟೇನೇ. ಅದನ್ನ ಬಿಟ್ಟರೇ ನನಗೆ ಏನೂ ಗೊತ್ತಿಲ್ಲ. ಗೊತ್ತಿದ್ರೆ ಮಾತಾಡಬಹುದು. ಗೊತ್ತಿಲ್ಲದಿದ್ದರೇ ಮಾತಾಡೋಕೆ ಆಗಲ್ಲ''.

ಎರಡನೇ ಪ್ರಶ್ನೆ ಕೇಳಿದ ವರದಿಗಾರ್ತಿ

ಅಮ್ಮ ಆಗಲಿ, ಅಣ್ಣಾವ್ರ ಆಗಲಿ ಯಾವತ್ತು ಆ ವಿಷ್ಯ ಮಾತಾಡಿಲ್ವಾ?

ಶಿವಣ್ಣನ ನೇರ ಉತ್ತರ!

''ನೋ ಯಾವತ್ತು ಮಾತಾಡಿಲ್ಲ. ಮಾತಾಡಿದ್ರೆ...., ನಾನು ಯಾವತ್ತು ಸ್ಟ್ರೈಟ್ ಫಾರ್ವಾಡ್. ಶಿವಣ್ಣ ಹೇಗೆ ಅಂತ ಎಲ್ಲರಿಗೂ ಗೊತ್ತು. ನಾನು ನೇರವಾಗಿ ಮಾತಾಡ್ತೀನಿ. ಯಾರಿಗೂ ಕೇರ್ ಮಾಡಲ್ಲ. ನಾನು ಕೇರ್ ಮಾಡೋದು. ನನ್ನ ಫ್ಯಾಮಿಲಿಗೆ, ಆ ದೇವರು ಮತ್ತು ನಮ್ಮ ಅಭಿಮಾನಿಗಳಿಗೆ ಮಾತ್ರ'' -(CiniAdda.comಗೆ ಶಿವರಾಜ್ ಕುಮಾರ್ ನೀಡಿದ ಪ್ರತಿಕ್ರಿಯೆ)

English summary
Kannada Actor Shivarajkumar Talk About 'Raj Leela Vinoda' Book. 'Raj Leela Vinoda' Written By Ravi Belagere and a book reveled about relationship Between Dr Rajkumar And Actress Leelavathi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada