»   » ಶಿವರಾಜ್ ಕುಮಾರ್ 'ಬೆಳ್ಳಿ' ಟ್ರೇಲರ್ ಬೊಂಬಾಟ್

ಶಿವರಾಜ್ ಕುಮಾರ್ 'ಬೆಳ್ಳಿ' ಟ್ರೇಲರ್ ಬೊಂಬಾಟ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳ ಬಲು ನಿರೀಕ್ಷೆಯ ಚಿತ್ರ 'ಬೆಳ್ಳಿ'. ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಸಿದೆ. ಸ್ವಲ್ಪ ಗ್ಯಾಪ್ ನ ಬಳಿಕ ಶಿವಣ್ಣ ಈ ಚಿತ್ರದಲ್ಲಿ ಮತ್ತೆ ಲಾಂಗ್ ಕೈಗೆತ್ತಿಕೊಂಡು ಡಿಫರೆಂಟ್ ಗೆಟಪ್ ನಲ್ಲಿ ಗಮನಸೆಳೆದಿದ್ದಾರೆ.

ಆಗಸ್ಟ್ 15ರಂದು 'ಬೆಳ್ಳಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಶಿವಣ್ಣ ಕೋರಿದ್ದಾರೆ. ಮೈಸೂರಿನ ಡಿಆರ್ ಸಿ ಚಿತ್ರಮಂದಿರದಲ್ಲಿ ಕಿಕ್ಕಿರದ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಯಿತು. [ಶಿವಣ್ಣ ಬೆಳ್ಳಿ ಚಿತ್ರದ ಇನ್ನಷ್ಟು ವಿಶೇಷಗಳು]

<iframe width="600" height="360" src="//www.youtube.com/embed/KCgKC3hs9g0?feature=player_detailpage" frameborder="0" allowfullscreen></iframe>

ಚಿತ್ರದಲ್ಲಿ ಶಿವಣ್ಣ ಬೆಳ್ಳಿಯಾದರೆ ಕೃತಿ ಕರಬಂಧ ಬಳುಕುವ ಬಳ್ಳಿ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಮುಸ್ಸಂಜೆ ಮಹೇಶ್. ಇದೇ ಮೊದಲ ಬಾರಿಗೆ ಮಹೇಶ್ ಮತ್ತು ಶಿವಣ್ಣ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.

ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್

ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಚಿತ್ರತಂಡದ ಬಹುತೇಕರು ಉಪಸ್ಥಿತರಿದ್ದರು. ಆದರೆ ಆದಿ ಲೋಕೇಶ್ ಅವರು ಬಿಗ್ ಬಾಸ್ ಮನೆಯಲ್ಲಿರುವ ಕಾರಣ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ತಾರೆಗಳು ಬೆಳ್ಳಿ ಟ್ರೇಲರ್ ಬಿಡುಗಡೆಗೆ ಸಾಕ್ಷಿಯಾದರು.

ಡೈಲಾಗ್ ಗಳೇ ಪ್ರಮುಖ ಆಕರ್ಷಣೆ

ಟ್ರೇಲರ್ ನಲ್ಲಿ ಶಿವಣ್ಣ ಡೈಲಾಗ್ ಗಳು ಪ್ರಮುಖ ಆಕರ್ಷಣೆಯಾಗಿವೆ. ಹಣೆಬರಹವನ್ನು ರೀರೈಟ್ ಮಾಡೋ ಕಾಂಟ್ರಾಕ್ಟ್ ಈ ಬೆಳ್ಳಿ ಹತ್ರ ಮಾತ್ರ ಇದೆ ಎಂದು ಶಿವಣ್ಣ ಡೈಲಾಗ್ ಹೊಡೀತಿದ್ರೆ ಅಭಿಮಾನಿಗಳ ಆನಂದಕ್ಕೆ ಪಾರವೇ ಇರಲ್ಲ.

ಇನ್ನೊಂದು ಭರ್ಜರಿ ಡೈಲಾಗ್ ಹಿಂಗಿದೆ

ಟ್ರೇಲರ್ ನಲ್ಲಿ ಬರುವ ಇನ್ನೊಂದು ಭರ್ಜರಿ ಡೈಲಾಗಿ ಹೀಗಿದೆ, ಕೊಟ್ಟಿದ್ದನ್ನು ಇಟ್ಕೋ ಬ್ಯಾಡ ಅದನ್ನು ವಾಪಸ್ ಕೊಟ್ಟು ಕಳ್ಸು ಅಂತ ನಮ್ಮವ್ವ ನನಗೆ ಕಲ್ಸಿರೋದು. ಫಸ್ಟ್ ಟೈಮ್ ಬೆಳ್ಳಿ ಬದುಕು ಅಂತ ಬಿಡ್ತಾನೆ. ಬಿಟ್ಟೋನ್ ಬೆನ್ನಿಗೆ ಗೂಟ ಹೊಡೆದ್ರೆ ಬಿಲಾ ತೋಡ್ತಾನೆ.

ಇದು ಸ್ಯಾಂಪಲ್ ಮಾತ್ರ ಅಸಲಿ ಚಿತ್ರ ಮುಂದಿದೆ

ಈ ರೀತಿಯ ಡೈಲಾಗ್ ಗಳೇ ಸಾಕಲ್ಲವೇ ಮಾಸ್ ಪ್ರೇಕ್ಷಕರನ್ನು ಸೆಳೆಯಲು. ಟ್ರೇಲರ್ ನೋಡಿ ಇದು ಕೇವಲ ಮಾಸ್ ಸಿನಿಮಾ ಎಂದು ನಿರ್ಧರಿಸಲು ಆಗಲ್ಲ. ಇದು ಕೇವಲ ಸ್ಯಾಂಪಲ್ ಅಷ್ಟೇ ಅಸಲಿ ಚಿತ್ರ ನೋಡಲು ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ.

ಬೆಳ್ಳಿ ತಾಂತ್ರಿಕ ಬಳಗ ಹೀಗಿದೆ

ಮಹೇಶ್ (ಮುಸ್ಸಂಜೆ ಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಪಾತ್ರವರ್ಗದಲ್ಲಿ ಯಾರ್ಯಾರು ಇದ್ದಾರೆ?

ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್ ಪ್ರಸಾದ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಸುಧಾರಾಣಿ, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬೆಳ್ಳಿ ಚಿತ್ರದ ವಿಡಿಯೋ ನೋಡಿ ಆನಂದಿಸಿ

ಚಿತ್ರದಲ್ಲಿ ಶಿವಣ್ಣ ಬೆಳ್ಳಿಯಾದರೆ ಕೃತಿ ಕರಬಂಧ ಬಳುಕುವ ಬಳ್ಳಿ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಮುಸ್ಸಂಜೆ ಮಹೇಶ್. ಇದೇ ಮೊದಲ ಬಾರಿಗೆ ಮಹೇಶ್ ಮತ್ತು ಶಿವಣ್ಣ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.

English summary
Hat Trick Hero Dr.Shivrajkumar and starlet Kriti Kharbanda lead Kannada movie Belli trailer released in Mysore on 15th August. Shivanna Portrays an underworld don, who gets into the whirlpool of love and emotions. Movie is Directed by "Mussanje mathu" Mahesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada