»   » ಹೊಸ ಬಾಳಿನ ಹೊಸಿಲಲಿ ಶಿವಣ್ಣ ಪುತ್ರಿ ನಿರುಪಮಾ

ಹೊಸ ಬಾಳಿನ ಹೊಸಿಲಲಿ ಶಿವಣ್ಣ ಪುತ್ರಿ ನಿರುಪಮಾ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಆಗಸ್ಟ್ 3ರಂದು ದಾಮ್ ದೂಮ್ ಎಂದು ನಿಶ್ಚಿತಾರ್ಥ ನಡೆಯಲಿದೆ. ಯಾರ ಮದುವೆ, ಯಾವಾಗ, ವರ ಮಹಾಶಯ ಯಾರು ಎಂಬುದು ತಾನೆ ನಿಮ್ಮ ಸಂದೇಹ.

ಶಿವಣ್ಣ ಹಾಗೂ ಗೀತಾ ದಂಪತಿಗಳ ಹಿರಿಯ ಪುತ್ರಿ ಡಾ.ನಿರುಪಮಾ (27) ಅವರೇ ಹಸೆಮಣೆ ಏರುತ್ತಿರುವ ಮದುಮಗಳು. ಇದೇ ಆಗಸ್ಟ್ 3ರಂದು ಅವರ ನಿಶ್ಚಿತಾರ್ಥ ನೆರವೇರಲಿದೆ. ಇನ್ನೊಂದು ವಿಶೇಷ ಎಂದರೆ ಈ ಮದುವೆ ಸಂಭ್ರಮಕ್ಕೆ ಶಿವಣ್ಣ ಹಾಗೂ ರಮ್ಯಾ ಅಭಿನಯದ 'ಆರ್ಯನ್' ಚಿತ್ರವೂ ಜೊತೆಯಾಗುತ್ತಿರುವುದು.

Geetha Shivrajkumar with daughter

ಒಂದು ಕಡೆ 'ಆರ್ಯನ್' ಚಿತ್ರದ ಬಿಡುಗಡೆ ಸಂತಸ, ಇನ್ನೊಂದು ಕಡೆ ಮದುವೆ ಸಂಭ್ರಮ. ಒಟ್ಟಾರೆಯಾಗಿ ಡಬಲ್ ಸಂಭ್ರಮ. ಈಗಾಗಲೆ ನಿಶ್ಚಿತಾರ್ಥಕ್ಕೆ ಶಿವಣ್ಣ ಮನೆಯಲ್ಲಿ ಭರದ ತಯಾರಿ ನಡೆಯುತ್ತಿದೆ. ಸದ್ಯಕ್ಕೆ ಶಿವಣ್ಣ ಅವರ 'ಬೆಳ್ಳಿ' ಚಿತ್ರದ ಶೂಟಿಂಗ್ ಸಕಲೇಶಪುರದಲ್ಲಿ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಅವರು ಬೆಂಗಳೂರಿಗೆ ಆಗಮಿಸಿ ಮಗಳ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಎಂಬಿಬಿಎಸ್ ಮುಗಿಸಿರುವ ನಿರುಪಮಾ ಅವರು ಪ್ರಸ್ತುತ ಎಂಎಸ್ ಮಾಡುತ್ತಿದ್ದಾರೆ. ನಿರುಪಮಾ ಅವರ ಕೈಹಿಡಿಯುತ್ತಿರುವ ಹುಡುಗನ ಹೆಸರು ದಿಲೀಪ್. ಮೈಸೂರಿನಲ್ಲಿ ಓದಬೇಕಾದರೆ ಇಬ್ಬರೂ ಕ್ಲಾಸ್ ಮೇಟ್ ಆಗಿದ್ದರು. ದಿಲೀಪ್ ಸಹ ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ನಿವಾಸಿ.

ಒಳ್ಳೆಯ ಹುಡುಗನನನ್ನು ನಿಶೂ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಶಿವಣ್ಣ ದಂಪತಿಗಳಿಗೆ ತಮ್ಮ ಮಗಳ ಬಗ್ಗೆ ಅಪಾರ ಹೆಮ್ಮೆ, ಮೆಚ್ಚುಗೆ ಇದೆ. ನಿಶೂ ಹೊಸ ಬಾಳಿಗೆ ಅಡಿಯಿಡುತ್ತಿದ್ದರೂ ಅವಳು ಯಾ ಹೊತ್ತಿದ್ದರೂ ನನ್ನ ಪುಟ್ಟ ಮಗಳೇ ಎನ್ನುತ್ತಾರೆ ಶಿವಣ್ಣ.

ಒಳ್ಳೆಯ ಹುಡುಗ, ನಿಶೂಗೆ ತಕ್ಕ ಜೋಡಿ, ಎಲ್ಲಕ್ಕಿಂತ ಹೆಚ್ಚಾಗಿ ನಿಶೂ ಆಯ್ಕೆಯ ಹುಡುಗ ಸೂಪರ್. ತಮ್ಮ ಮಗಳನ್ನು ನಮಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ವಿಶ್ವಾಸವಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಬ್ಬರಿಗೂ ಎರಡೂ ಕುಟುಂಬಿಕರ ಆಶೀರ್ವಾದ ಇದೆ ಎನ್ನುತ್ತಾರೆ ಗೀತಾ ಶಿವರಾಜ್ ಕುಮಾರ್. (ಏಜೆನ್ಸೀಸ್)

English summary
Century Star Shivarajkumar's (52) daughter Dr. Nirupama (27) is getting engaged in 03rd September, 2014. Shivrajkumar himself confirmed that the marriage of his daughter has been fixed. The function will be held in Bangalore and preparations for the big day are on in full swing.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada