»   » ಸಿಂಗಪುರದಲ್ಲಿ ರಮ್ಯಾ ಜೊತೆ ಶಿವಣ್ಣ 'ಆರ್ಯನ್'

ಸಿಂಗಪುರದಲ್ಲಿ ರಮ್ಯಾ ಜೊತೆ ಶಿವಣ್ಣ 'ಆರ್ಯನ್'

Posted By:
Subscribe to Filmibeat Kannada

ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತೇ ಇದೆ. ರಾಘಣ್ಣನ ಜೊತೆಗೆ ಪತ್ನಿ ಮಂಗಳಾ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಸಿಂಗಪುರಕ್ಕೆ ಹೋಗಿದ್ದು ರಾಘಣ್ಣನ ಆರೋಗ್ಯವನ್ನು ಖುದ್ದು ನೋಡಿಕೊಳ್ಳುತ್ತಿದ್ದಾರೆ.

ಶಿವಣ್ಣ ಅಭಿನಯದ 105ನೇ ಚಿತ್ರ 'ಭಜರಂಗಿ' ಬಳಿಕ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಮತ್ತೊಂದು ಚಿತ್ರ ಆರ್ಯನ್. ಇದೇ ಜನವರಿ 2ರಿಂದ ಸಿಂಗಪುರದಲ್ಲಿ ಇಪ್ಪತ್ತೆರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಅಲ್ಲಿ ಮೂರು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಮಾಡಿಕೊಳ್ಳಲಿದ್ದಾರೆ. [ಲಕ್ಕಿ ಸ್ಟಾರ್ ರಮ್ಯಾ ಕೊನೆಯ ಸಿನಿಮಾ ಆರ್ಯನ್?]


ಡಿ.ಕೇಶವ್ ಫಿಲಂಸ್ ಲಾಂಛನದಲ್ಲಿ ಡಿ.ಕಮರ್ ನಿರ್ಮಿಸುತ್ತಿರುವ ಚಿತ್ರ. ಶಿವರಾಜ್ ಕುಮಾರ್, ರಮ್ಯಾ, ಶರತ್ ಬಾಬು, ರಘುಮುಖರ್ಜಿ, ಬುಲೆಟ್ ಪ್ರಕಾಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಡಿ.ರಾಜೇಂದ್ರ ಬಾಬು ಅವರು ಅಕಾಲಿಕ ನಿಧನದ ಬಳಿಕ ಈ ಚಿತ್ರದ ನಿರ್ದೇಶನವನ್ನು ಚಿ.ಗುರುದತ್ ಕೈಗೆತ್ತಿಕೊಂಡಿದ್ದಾರೆ.

ರಮ್ಯಾ, ಶರತ್ ಬಾಬು, ಬುಲೆಟ್ ಪ್ರಕಾಶ್, ರಘುಮುಖರ್ಜಿ, ವಿನಯಾ ಪ್ರಸಾದ್, ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ್ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Century Star Shivrajkumar and Lucky girl Ramya lead Kannada movie Aaryan three songs shooting to be hled in Singapore. The movie produced by D Kamar and directed by Chi Guru Dutt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada