»   » ಲಾಂಗು, ಮಚ್ಚು ಚಿತ್ರಗಳಿಗೆ ಗುಡ್ ಬೈ ಹೇಳಿದ ಶಿವಣ್ಣ

ಲಾಂಗು, ಮಚ್ಚು ಚಿತ್ರಗಳಿಗೆ ಗುಡ್ ಬೈ ಹೇಳಿದ ಶಿವಣ್ಣ

By: ಉದಯರವಿ
Subscribe to Filmibeat Kannada
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಲಾಂಗು, ಮಚ್ಚು ಇಲ್ಲಾ ಅಂದ್ರೆ ಆಗುತ್ತದೆಯೇ? ಓಂ ಚಿತ್ರದಲ್ಲಿ ಕೈಗೆತ್ತಿಕೊಂಡ ಲಾಂಗ್ ಅವರು ಬೇಡ ಬೇಡ ಎಂದರೂ ಅವರನ್ನು ಬಿಡುತ್ತಿಲ್ಲ. ಪ್ರತಿಯೊಬ್ಬ ನಿರ್ದೇಶಕರು ಲಾಂಗ್ ನ್ನು ಆಧಾರವಾಗಿಟ್ಟುಕೊಂಡೇ ಕಥೆ ಹೆಣೆಯುತ್ತಿದ್ದಾರೆ.

ಈ ಲಾಂಗ್ ಭರಾಟೆಯಲ್ಲಿ ಶಿವಣ್ಣ ಸಾಕಷ್ಟು ಸೋತು ಹೋಗಿದ್ದಾರೆ. ಕಡೆಗೂ ಅವರು ಲಾಂಗನ್ನು ಕೆಳಗಿಡುವ ಯೋಚನೆಯನ್ನು ಮಾಡಿದ್ದಾರೆ. ಲಾಂಗ್, ಮಚ್ಚು ರೌಡಿಯಿಸಂ ಚಿತ್ರಗಳ ಏಕತಾನತೆಯನ್ನು ಮುರಿಯಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಅವರು ಇನ್ನು ಮುಂದೆ ಹೆಚ್ಚಾಗಿ ರೌಡಿಯಿಸಂ ಪಾತ್ರಗಳನ್ನು ಮಾಡಲ್ಲ ಎಂದಿದ್ದಾರೆ. ಈಗ ಸದ್ಯಕ್ಕೆ ಲಾಂಗನ್ನು ಕೆಳಗಿಟ್ಟಿರುವ ಶಿವಣ್ಣ ಈಗ ಕಾಮಿಡಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಲಾಂಗು, ಮಚ್ಚು ಕೊಚ್ಚು ಚಿತ್ರಗಳಿಗೆ ಗುಡ್ ಬೈ ಹೇಳಿದ್ದಾರೆ.

ಅವರ ಸಿನಿಮಾ ಪಯಣದ ಬಗ್ಗೆ ಸ್ವತಃ ಶಿವಣ್ಣ ಹೇಳುವುದೇನೆಂದರೆ, ತಾನು ಸಾಕಷ್ಟು ಒಳ್ಳೆಯ ಹಾಗೂ ಕೆಟ್ಟ ಚಿತ್ರಗಳನ್ನು ಮಾಡಿದ್ದೇನೆ. ರೌಡಿಯಿಸಂ ಚಿತ್ರಗಳನ್ನು ಸ್ಟಾಫ್ ಮಾಡಬೇಕೆಂದಿದ್ದೇನೆ. ಸದ್ಯಕ್ಕೆ ತಮ್ಮ ಗಮನ ಔಟ್ ಅಂಡ್ ಔಟ್ ಕಾಮಿಡಿ ಚಿತ್ರಗಳ ಕಡೆಗಿದೆ ಎಂದಿದ್ದಾರೆ.

ಹಾಗಿದ್ದರೆ ರೌಡಿಯಿಸಂ ಲಾಂಗು ಮಚ್ಚು ಸಿನಿಮಾಗಳಿಂದ ಸಂಪೂರ್ಣ ದೂರವಿರುತ್ತಾರಾ ಎಂದರೆ, ಹಾಗೇನು ಇಲ್ಲ. ಒಂದು ವೇಳೆ ಸಂಪೂರ್ಣ ಭಿನ್ನವಾದ ಕಥೆ ಸಿಕ್ಕಿದರೆ ಮತ್ತೆ ಮಚ್ಚು ಕೈಗೆತ್ತಿಕೊಳ್ಳುತ್ತಾರಂತೆ. "ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್ನಾ..." ಎಂಬ ಚಿತ್ರಗಳು ಸದ್ಯಕ್ಕೆ ಸಾಕು ಎಂಬುದು ಅವರ ಮನದಾಳದ ಮಾತು.

English summary
Century Star Shivrajkumar says good bye to rowdyism films and he will doing out and out comedy films. Mean while he accepts that, he had done both good as well as bad films.
Please Wait while comments are loading...