For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಹಠಾತ್ ಆಗಿ ಕುಸಿದು ಬಿದ್ದ ನಟಿ ಕಾನ್ಸ್ ಟೇಬಲ್ ಸರೋಜಾ

  |

  ಟಗರು ಸಿನಿಮಾದಲ್ಲಿ ಕಾನ್ಸ್ ಟೇಬಲ್ ಸರೋಜಾ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದ ನಟಿ ತ್ರಿವೇಣಿ ಶೂಟಿಂಗ್ ವೇಳೆ ಹಠಾತ್ ಆಗಿ ಕುಸಿದು ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

  ಸಕಲೇಶಪುರದಲ್ಲಿ ನಡೆಯುತ್ತಿದ್ದ 'ಅಲ್ಲೆ ಡ್ರಾ ಅಲ್ಲೆ ಬಹುಮಾನ' ಚಿತ್ರದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಚಿತ್ರೀಕರಣವನ್ನ ಸಕಲೇಶಪುರದಲ್ಲಿ ಮಾಡಲಾಗುತ್ತಿದೆ. ಇದು ಹಾರರ್ ಕಥೆಯನ್ನ ಹೊಂದಿರುವ ಚಿತ್ರವಾಗಿದ್ದರಿಂದ ಸಹಜವಾಗಿ ಚಿತ್ರತಂಡ ಅಚ್ಚರಿಯಾಗಿದೆ ಎನ್ನಲಾಗಿದೆ.

  'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ? 'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

  ಜನನಿ ಫಿಲಂಸ್ ಲಾಂಛನದಡಿ ನಿರ್ಮಾಪಕ ಬಿಜಿ ಪ್ರಶಾಂತ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ರತನ್ ತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

  ಡಾಲಿಯ ಡಾರ್ಲಿಂಗ್ 'ಕಾನ್ಸ್ ಟೇಬಲ್ ಸರೋಜ' ಸಂದರ್ಶನಡಾಲಿಯ ಡಾರ್ಲಿಂಗ್ 'ಕಾನ್ಸ್ ಟೇಬಲ್ ಸರೋಜ' ಸಂದರ್ಶನ

  ನಟಿ ತ್ರಿವೇಣಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು, ಶೌರ್ಯ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಸತೀಶ್ ಅವರ ಛಾಯಾಗ್ರಹಣ, ನಾಗಭೂಷಣ್ ಅವರ ಸಾಹಿತ್ಯ ಚಿತ್ರಕ್ಕಿದೆ. ವಿಜಯ್ ರಾಜ್ ಸಂಗೀತವಿದ್ದು, ಉಜ್ವಲ್ ಗೌಡ ಅವರ ಸಂಕಲನವಿದೆ. ಇನ್ನಿಳಿದಂತೆ ಶಂಕರ್ ಅಶ್ವಥ್, ನಿಖಿಲ್ ಗೌಡ, ಭಾರತಿ ನಟಿಸಿದ್ದಾರೆ.

  English summary
  Constable saroja fame actress triveni Fell down in alle draw alle bahumana movie set.
  Friday, May 31, 2019, 20:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X