For Quick Alerts
  ALLOW NOTIFICATIONS  
  For Daily Alerts

  ಈ ಸಿನಿಮಾ ನೋಡಿ ಸುನಿ ಹೆದರಿದ್ರಂತೆ, ಆಶ್ಚರ್ಯವಾದರಂತೆ

  |

  ಸಾಮಾನ್ಯವಾಗಿ ಒಬ್ಬ ನಟನ ಸಿನಿಮಾ ನೋಡಿ ಇನ್ನೊಬ್ಬ ನಟ ಮೆಚ್ಚಿಕೊಳ್ಳುವುದು ಅಥವಾ ಒಬ್ಬ ನಿರ್ದೇಶಕ ಇನ್ನೊಬ್ಬ ನಿರ್ದೇಶಕನ ಚಿತ್ರವನ್ನ ನೋಡಿ ಅಪ್ಪಿಕೊಳ್ಳುವುದು ಅಪರೂಪ. ಆದ್ರೆ, ಸಿಂಪಲ್ ಸುನಿ ಮಾತ್ರ ಹೊಸದಾಗಿ ಯಾವುದೇ ಚಿತ್ರ ಬಂದರೂ ಅದನ್ನ ನೋಡುವ ಅಭ್ಯಾಸ ಹೊಂದಿದ್ದಾರೆ.

  ಸಿನಿಮಾ ಇಷ್ಟವಾದ್ರೆ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಮತ್ತಷ್ಟು ಪ್ರೇಕ್ಷಕರನ್ನ ಸಿನಿಮಾ ನೋಡುವಂತೆ ಪ್ರೋತ್ಸಾಹಿಸುತ್ತಾರೆ. ಅಂದ್ಹಾಗೆ, ಸುನಿ ಈಗ ನೋಡಿದ ಸಿನಿಮಾ 'ಒಂದು ಕಥೆ ಹೇಳ್ಲಾ'.

  Ondh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾ

  ಕಳೆದ ವಾರ ಬಿಡುಗಡೆಯಾದ ಈ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರಕಥೆ, ಮೇಕಿಂಗ್, ನಟನೆ ಎಲ್ಲದರಲ್ಲೂ ಮೆಚ್ಚುಗೆ ಗಳಿಸಿಕೊಂಡಿದೆ. ಇದೀಗ, ಸುನಿ ಕೂಡ ಸಿನಿಮಾ ನೋಡಿ, ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

  ''"ಒಂದ್ ಕಥೆ ಹೇಳ್ಲಾ" ಚಿತ್ರಕ್ಕೆ ನಿರೀಕ್ಷೆ ಇಡದೆ ಸುಮ್ಮನೆ ಹೋಗಿದ್ದೆ.. ಚಿತ್ರದ ದೆವ್ವದ ಪಾತ್ರಗಳಿಗೆ ಹೆದರಿದೆಚಿತ್ರಕಥೆಯ ತಿರುವಿಗೆ ಆಶ್ಚರ್ಯನಾದೆಕೊನೆಗೆ ಇಡೀ ತಂಡಕ್ಕೆ ಚಪ್ಪಾಳೆ ತಟ್ಟಿದೆ.. ಇದು ಎಲ್ಲೂ ಎತ್ತಿಲ್ಲದೆ ..ಕನ್ನಡದ ಸ್ವಂತ ಚಿತ್ರವಾಗಿದ್ದಲ್ಲಿಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ..'' ಎಂದು ಟ್ವೀಟ್ ಮಾಡಿದ್ದಾರೆ.

  'ಒಂದ್ ಕಥೆ ಹೇಳ್ಲಾ' ಚಿತ್ರ ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

  ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಮತ್ತು ಒಳ್ಳೆಯ ಚಿತ್ರಗಳಿಗೆ ಹೀಗೆ ಒಳ್ಳೆಯ ಮಾತುಗಳು ಸಿಗುತ್ತೆ. ಇನ್ನು ಒಂದು ಕಥೆ ಹೇಳ್ಲಾ ಚಿತ್ರದ ಬಗ್ಗೆ ಹೇಳುವುದಾದರೇ,ಕಾರ್ತಿಕ್ ರಾಮ್, ಶಕ್ತಿ ಸೊಮಣ್ಣ, ತಾಂಡವ್ ರಾಮ್, ಪ್ರಿಯಾಂಕ, ಪ್ರತೀಕ್, ತಾರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಗಿರೀಶ್ ಜಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದೆ.

  English summary
  Kannada director simple suni watched ondu kathe hella movie and he taken his twitter account to appreciate this movie. the movie has released on march 8th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X