For Quick Alerts
  ALLOW NOTIFICATIONS  
  For Daily Alerts

  ವಿದ್ಯಾರ್ಥಿಗಳ ಪರ ಶ್ರೀಮುರಳಿ, ಧ್ರುವ ಸರ್ಜಾ ದನಿ

  |

  ಶಾಲೆ ಆರಂಭ, ಆನ್‌ಲೈನ್ ಶಿಕ್ಷಣ, ಹಳ್ಳಿಗಾಡಿನಲ್ಲಿ ಇಂಟರ್ನೆಟ್ ಲಭ್ಯತೆ, ಆನ್‌ಲೈನ್ ಶಿಕ್ಷಣದಿಂದಾಗಿ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಆಗಬಹದಾದ ಸಮಸ್ಯೆ ಹೀಗೆ ವಿದ್ಯಾರ್ಥಿ ಮತ್ತು ಶಾಲಾ-ಕಾಲೇಜುಗಳ ಸುತ್ತಾ ದೊಡ್ಡ ಚರ್ಚೆಯೇ ನಡೆಯುತ್ತಿದೆ.

  Akshay Kumar only Indian in the top 100 richest celebrities list | Akshay Kumar | Forbes

  ಆನ್‌ಲೈನ್ ಪಾಠ ಮಾಡುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರ ಲಾಭ ಸಿಗುವುದಿಲ್ಲ ಎಂಬ ವಾದ ಎಲ್ಲೆಡೆ ಕೇಳಿಬರುತ್ತಿದ್ದು, ಆನ್‌ಲೈನ್ ಪಾಠಕ್ಕೆ ಭಾರಿ ವಿರೋಧ ಸಹ ವ್ಯಕ್ತವಾಗುತ್ತಿದೆ.

  'ನಾನು ಬದುಕಬೇಕು, 300-400 ರೂ. ಆದರೂ ಕೊಡಿ': 'ಮಂಗಲ್ ಪಾಂಡೆ' ಕಲಾವಿದನ ಕಣ್ಣೀರು

  ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ ಹಾಗೂ ಕೊರೊನಾ ಮುಗಿಯುವ ಮುನ್ನವೇ ಶಾಲೆ-ಕಾಲೇಜುಗಳನ್ನು ತೆರೆಯುವು ನಿರ್ಧಾರಕ್ಕೆ ಸಿನಿ ಸ್ಟಾರ್‌ಗಳು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ತಾವು ವಿದ್ಯಾರ್ಥಿಗಳೊಂದಿಗೆ ಇರುವುದಾಗಿ ಭರವಸೆಯನ್ನೂ ನೀಡಿದ್ದಾರೆ.

  ಆನ್‌ಲೈನ್‌ ತರಗತಿಯ ಸಮಸ್ಯೆ ಪಟ್ಟಿ ಮಾಡಿದ ಮುರಳಿ

  ಆನ್‌ಲೈನ್‌ ತರಗತಿಯ ಸಮಸ್ಯೆ ಪಟ್ಟಿ ಮಾಡಿದ ಮುರಳಿ

  ನಟ ಶ್ರೀಮುರಳಿ ಈ ಬಗ್ಗೆ ಪೋಸ್ಟ್ ಹಾಕಿದ್ದು, 'ಹಳ್ಳಿಗಳಲ್ಲೇ ಸಾಕಷ್ಟು ವಿಧ್ಯಾರ್ಥಿಗಳು ಪದವಿ ಪಡೆಯುವ ಕನಸಿನೊಂದಿಗೆ ವಿಧ್ಯಾಭ್ಯಾಸ ಮಾಡುತ್ತಿರುತ್ತಾರೆ.ಆನ್ ಲೈನ್ ಪಾಠ, ನೆಟ್‌ವರ್ಕ್ ಸಮಸ್ಯೆ, ಸತತ 5-6 ಗಂಟೆ ಮೊಬೈಲ್ ನೋಡಿ ಪಾಠ ಕಲಿಯುವುದು ನಿಜಕ್ಕೂ ಕಷ್ಟಕರ' ಎಂದು ಆನ್‌ಲೈನ್ ಪಾಠದ ಸಮಸ್ಯೆಗ ಪಟ್ಟಿ ಮಾಡಿದ್ದಾರೆ.

  ನಾವು ವಿದ್ಯಾರ್ಥಿಗಳೊಂದಿಗೆ ಇದ್ದೇವೆ: ಮುರಳಿ

  ನಾವು ವಿದ್ಯಾರ್ಥಿಗಳೊಂದಿಗೆ ಇದ್ದೇವೆ: ಮುರಳಿ

  'ಸರ್ಕಾರ ವಿಧ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಕೈಹಿಡಿಯಲಿ ಎಂಬ ಮನವಿಯ ಜೊತೆಗೆ ಎಲ್ಲಾ ವಿಧ್ಯಾರ್ಥಿಗಳ ಜೊತೆಗೆ ನಾವಿದ್ದೇವೆ.ಗೊಂದಲ ಬೇಡ' ಎಂದು ವಿದ್ಯಾರ್ಥಿಗಳಿಗೆ ಭರವಸೆಯನ್ನೂ ನೀಡಿದ್ದಾರೆ ನಟ ಶ್ರೀ ಮುರಳಿ.

  ವಿದ್ಯಾರ್ಥಿಗಳ ಸಮಸ್ಯೆ ಬಹಳ ಆತಂಕ್ಕೆ ಈಡುಮಾಡಿದೆ: ಪ್ರಥಮ್

  ವಿದ್ಯಾರ್ಥಿಗಳ ಸಮಸ್ಯೆ ಬಹಳ ಆತಂಕ್ಕೆ ಈಡುಮಾಡಿದೆ: ಪ್ರಥಮ್

  'ಕೊರೊನಾ ದಿಂದಾಗಿ ವಿಧ್ಯಾರ್ಥಿಗಳಿಗೆ ಆಗಿರೋ ಸಮಸ್ಯೆ ನನಗೆ ಬಹಳ ಆತಂಕಕ್ಕೀಡುಮಾಡಿದೆ.ಈಗಿನ ವಿಧ್ಯಾರ್ಥಿಗಳೇ ದೇಶದ ಆಧಾರಸ್ಥಂಭ.ಪರೀಕ್ಷೆಯ ಆತಂಕ ಬೇಡ.ಜ್ಞಾನ ಎಲ್ಲಕ್ಕಿಂತ ದೊಡ್ಡದು.ಯಾರೂಬ್ಬರೂ ಧೃತಿಗೆಡದೆ ಓದನ್ನು ಮುಂದುವರೆಸಿ.ನಿಮ್ಮೊಡನೆ ನಾವಿದ್ದೇವೆ.ಸರ್ಕಾರವಿದೆ' ಎಂದು ಧ್ರುವ ಸರ್ಜಾ ಸಹ ಭರವಸೆ ನೀಡಿದ್ದಾರೆ.

  ಒಳ್ಳೆ ಹುಡುಗ ಪ್ರಥಮ್ ಸಹಾಯ

  ಒಳ್ಳೆ ಹುಡುಗ ಪ್ರಥಮ್ ಸಹಾಯ

  ಒಳ್ಳೆ ಹುಡುಗ ಪ್ರಥಮ್ ಸಹ ಆನ್‌ಲೈನ್ ತರಗತಿಗಳು ಮತ್ತು ಕೊರೊನಾ ಮುಗಿಯುವ ಮೊದಲು ಶಾಲೆಗಳು ತೆರೆಯುವ ನಿರ್ಧಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವು ಪೋಸ್ಟ್‌ಗಳನ್ನು ಹಾಕಿರುವ ಅವರು, ಮಾಧ್ಯಮ ಚರ್ಚೆಗಳನ್ನು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

  English summary
  Sri Murali, Dhruva Sarja, Pratham and many other actors unhappy about online classes in this corona situation. They saying rural area students will suffer from this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X