»   » ಶಿವಣ್ಣನ ಬರ್ತಡೇಗೆ ಒಂದಕ್ಕಿಂತ ಒಂದು ವಿಶೇಷ ಕಾರ್ಯಕ್ರಮ

ಶಿವಣ್ಣನ ಬರ್ತಡೇಗೆ ಒಂದಕ್ಕಿಂತ ಒಂದು ವಿಶೇಷ ಕಾರ್ಯಕ್ರಮ

Posted By: ಜೀವನರಸಿಕ
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜುಲೈ 12ಕ್ಕೆ 54ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಬಹುಷಃ ಇಷ್ಟು ಬೇಗ ಶಿವಣ್ಣನಿಗೆ 50 ಕಳೆದು 53 ಆಯ್ತಾ ಅಂತ ಒಂದು ಕ್ಷಣ ಅಚ್ಚರಿ ನಮ್ಮನ್ನ ಕಾಡೋಕೆ ಶುರುವಾಗುತ್ತೆ. ಶಿವರಾಜ್ಕುಮಾರ್ 54ರ ಹರೆಯದಲ್ಲೂ ಮಿನುಗೋ ಮಿಂಚು.

ಈ ವಯಸ್ಸಲ್ಲೂ ಬೇಡಿಕೆ ಕಳೆದುಕೊಳ್ಳದ ಸ್ಟಾರ್ ನಟ ಸಿಗೋದು ತೀರಾ ಅಪರೂಪ. ಅದಕ್ಕಿಂತ ಹೆಚ್ಚಾಗಿ ವರ್ಷಕ್ಕೆ ನಾಲ್ಕು ಸಿನಿಮಾಗಳಲ್ಲಿ ನಟಿಸೋದು. ಡೇ ಅಂಡ್ ನೈಟ್ ಶೂಟಿಂಗ್ ಇದ್ರೂ ಈ ವಯಸ್ಸಲ್ಲೂ ಫಿಟ್ನೆಸ್ ಉಳಿಸಿಕೊಳ್ಳೋದು ಸುಲಭದ ಮಾತಲ್ಲ. [ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]

ಚಿತ್ರರಂಗದಲ್ಲಿ ಯಾರನ್ನೇ ಕೇಳಿದ್ರೂ ಎನರ್ಜಿ ಅಂದ್ರೆ ಶಿವಣ್ಣನ ಹಾಗಿರ್ಬೇಕು ಅಂತಾರೆ. ಇವತ್ತಿಗೂ ಯಂಗ್ ಡಾನ್ಸರ್ಗಳು ಶಿವಣ್ಣನ ಡಾನ್ಸ್ ಮುಂದೆ ಡಾನ್ಸ್ ಮಾಡೋಕಾಗದೆ ಸುಸ್ತಾಗ್ತಾರೆ. ಅಂತಹಾ ಯಂಗ್ ಅಂಡ್ ಎನರ್ಜೆಟಿಕ್ ಹೀರೋ ಶಿವಣ್ಣ 2015ರಲ್ಲಿ ಕೂಡ 4-5 ಸಿನಿಮಾಗಳಲ್ಲಿ ಬ್ಯುಸಿ. ಶಿವಣ್ಣ ಬರ್ತಡೇಗೇ ಈ ವರ್ಷ ಹಲವು ಸಿನಿಮಾಗಳ ಹಲವು ವಿಶೇಷ ಕಾರ್ಯಕ್ರಮಗಳಿರ್ತವೆ.

ಕಿಲ್ಲಿಂಗ್ ವೀರಪ್ಪನ್ ಟೀಸರ್..

ಶಿವಣ್ಣ ರಾಮ್ ಗೋಪಾಲ್ ವರ್ಮಾ ಧಮಾಕಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾದ ಶೂಟಿಂಗ್ನಲ್ಲಿ ಹ್ಯಾಟ್ರಿಕ್ ಹೀರೋ ಭಾಗವಹಿಸಿದ್ದಾರೆ. ಉತ್ತರ ಕನ್ನಡ ದಾಂಡೇಲಿ ಭಾಗದ ಕಾಡುಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಬರ್ತಡೇ ದಿನ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಟೀಸರ್ ಹೊರಬರಲಿದೆ.

ಕಬೀರನ ಝಲಕ್

ಶಿವಣ್ಣ ರಾಷ್ಟ್ರ ಪ್ರಶಸ್ತಿ ಬರ್ಬೇಕು ಅನ್ನೋ ನಿರೀಕ್ಷೆ ಇಟ್ಟುಕೊಂಡಿರೋ ಚಿತ್ರ ಕಬೀರದ ಶೂಟಿಂಗ್ ಅರ್ಧಬಾಗ ಮುಗಿದಿದೆ. ಕಬೀರ ಫಸ್ಟ್ಲುಕ್ ಟೀಸರ್ ಬರ್ತಡೇ ದಿನವೇ ಹೊರಬರಲಿದ್ದು ವಿಭಿನ್ನ ಪಾತ್ರದಲ್ಲಿ ಶಿವಣ್ಣನನ್ನ ನೋಡಿ ಅಭಿಮಾನಿಗಳು ಪುಳಕಗೊಳ್ಳಲಿದ್ದಾರೆ.

ಮಾಸ್ ಲೀಡರ್ ಫಸ್ಟ್ ಲುಕ್

ಇನ್ನೂ ಟೈಟಲ್ ಕನ್ಫ್ಯೂಷನ್ ಮುಗಿಯದ ಸಹನಾಮೂರ್ತಿ ನಿರ್ದೇಶನದ ಲೀಡರ್ ಸಿನಿಮಾದ ಫೋಟೋಶೂಟ್ ಮುಗಿದಿದ್ದು ಮಾಸ್ ಲೀಡರ್ ಫಸ್ಟ್ ಲುಕ್ ಹೊರಬರಲಿದೆ.

ಶಿವಲಿಂಗು ಟ್ರೈಲರ್

ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಅಭಿನಯದಲ್ಲಿ ಸದ್ಯದಲ್ಲೇ ರಿಲೀಸಾಗಲಿರೋ ಸಿನಿಮಾ ಯಾವ್ದು ಅಂದ್ರೆ ಶಿವಲಿಂಗು. ಪಿ ವಾಸು ನಿರ್ದೇಶನದ ಚಿತ್ರದ ಬಗ್ಗೆಯೂ ಭರ್ಜರಿ ನಿರೀಕ್ಷೆಗಳಿವೆ. ಶಿವಲಿಂಗು ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರದ ಟ್ರೈಲರ್ 12ನೇ ತಾರೀಕು ಹೊರ ಬರೋಕೆ ತಯಾರಾಗ್ತಿದೆ.

ಖದರ್ ಮುಹೂರ್ತ?

ಶಿವಲಿಂಗು ನಿರ್ಮಾಪಕ ಸುರೇಶ್ ಅವರ ಮತ್ತೊಂದು ಸಿನಿಮಾ ಖದರ್ ಕೂಡ ಶಿವಣ್ಣನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದೆ. ಸಿನಿಮಾದ ಮುಹೂರ್ತವನ್ನ ಈ ಬರ್ತಡೇಗೆ ಮಾಡೋ ಸಾಧ್ಯತೆ ಹೆಚ್ಚಿದೆ.

ವಜ್ರಕಾಯ ಸಕ್ಸಸ್

25ನೇ ದಿನಕ್ಕೆ ಕಾಲಿಡ್ತಿರೋ ವಜ್ರಕಾಯನ ಯಶಸ್ಸನ್ನ ಶಿವಣ್ಣ ಅಭಿಮಾನಿಗಳಲ್ಲಿ ಥಿಯೇಟರ್ಗಳಲ್ಲಿ ಆಚರಿಸಿಲಿದ್ದಾರೆ. ಈ ವರ್ಷದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ತಿರೋ ಶಿವಣ್ಣ ವಜ್ರಕಾಯನಾಗಿ 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕ್ವಾರ್ಟರ್ ಸೆಂಚುರಿ ಹೊಡೀತಿದ್ದಾರೆ.

    English summary
    Special programs have been arranged on Hat trick Hero Shiva Rajkumar's birthday on 12th July. Even at 54 Shivanna looks young and energetic. Young dancers get tired dancing with this ever green hero. Let's look at what Kannada movies Shivanna has been doing this year.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada