»   » ಅಮೂಲ್ಯ ಮೆಹೆಂದಿ ಶಾಸ್ತ್ರಕ್ಕೆ ಸಿಂಗಾರಗೊಂಡ ಗಣೇಶ್ ಮನೆ: ಈ ದಿನದ ವಿಶೇಷತೆಗಳೇನು?

ಅಮೂಲ್ಯ ಮೆಹೆಂದಿ ಶಾಸ್ತ್ರಕ್ಕೆ ಸಿಂಗಾರಗೊಂಡ ಗಣೇಶ್ ಮನೆ: ಈ ದಿನದ ವಿಶೇಷತೆಗಳೇನು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಉದ್ಯಮಿ ಜಗದೀಶ್ ಮದುವೆ ತಯಾರಿ ಭರದಿಂದ ಸಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಅಮೂಲ್ಯ ಮತ್ತು ಜಗದೀಶ್ ರವರ ಕುಟುಂಬದವರು ಮದುವೆಗೆ ಶಾಸ್ತ್ರ-ಸಂಪ್ರದಾಯ ಕಾರ್ಯಕ್ರಮಗಳನ್ನು ಇಂದಿನಿಂದ ಆರಂಭಿಸಿದ್ದಾರೆ.[ಅಮೂಲ್ಯ ಮದುವೆಗೆ ಮುಂಚೆ ಶಿಲ್ಪಾ ಗಣೇಶ್ ಕೊಡ್ತಿರುವ ಗಿಫ್ಟ್!]

ಈಗಾಗಲೇ ಚಂದನವನದ ತಾರೆಯರಿಗೆ ಮದುವೆಯ ಮಮತೆಯ ಕರೆಯೋಲೆ ನೀಡಿರುವ ಅಮೂಲ್ಯ ರವರು ಖುಷಿ ಖುಷಿಯಾಗಿ ಹಸೆಮಣೆ ಏರಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಇಂದು ಮದುಮಗಳು ಅಮೂಲ್ಯ ಮೆಹೆಂದಿ ಶಾಸ್ತ್ರ ನಡೆಯಲಿದ್ದು, ಹಲವು ವಿಶೇಷತೆಗಳು ಮೆಹಂದಿ ಸಂಭ್ರಮದಲ್ಲಿ ಇರಲಿದೆ.

ಮೆಹೆಂದಿ ಸಂಭ್ರಮ

'ಚೆಲುವಿನ ಚಿತ್ತಾರ' ಬೆಡಗಿ ಅಮೂಲ್ಯ ರವರ ಮದುವೆ ಅಂಗವಾಗಿ ಮೆಹೆಂದಿ ಶಾಸ್ತ್ರ ಇಂದು (ಮೇ 10) ನಡೆಯಲಿದೆ. ಜೊತೆಗೆ ಈಗಾಗಲೇ ಚಪ್ಪರ ಶಾಸ್ತ್ರ ಆರಂಭಗೊಂಡಿದೆ. ರಾಜರಾಜೇಶ್ವರಿ ನಗರದಲ್ಲಿರುವ ವರ ಜಗದೀಶ್ ನಿವಾಸದಲ್ಲಿಯೂ ಮದುವೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮಲ್ಲೇಶ್ವರಂ ನಲ್ಲಿರುವ ಅಮೂಲ್ಯ ನಿವಾಸದಲ್ಲಿ ಅರಿಶಿನ ಶಾಸ್ತ್ರ ನಡೆದಿದೆ.['ಅಮೂಲ್ಯ-ಜಗದೀಶ್' ಮದುವೆಗೆ ಯಾರೆಲ್ಲ ಕಲಾವಿದರು ಆಗಮಿಸಲಿದ್ದಾರೆ?]

ಗಣೇಶ್ ಮನೆಯಲ್ಲಿ ಅಮ್ಮು ಮೆಹೆಂದಿ ಶಾಸ್ತ್ರ

ಅಮೂಲ್ಯ ರ ಮೆಹೆಂದಿ ಶಾಸ್ತ್ರ ಗಣೇಶ್ ಮನೆಯಲ್ಲಿ ಗ್ರ್ಯಾಂಡ್ ಆಗಿ ನಡೆಯಲಿದ್ದು, ಮೆಹೆಂದಿ ಶಾಸ್ತ್ರಕ್ಕೆ ಬಿಳಿ ಮತ್ತು ಗುಲಾಬಿ ಬಣ್ಣದ ವಸ್ತ್ರಗಳಿಂದ ಮಂಟಪವನ್ನು ಸಿದ್ದಗೊಳಿಸಲಾಗಿದೆ. ಅಲ್ಲದೆ ಗಣೇಶ್ ಮನೆಯನ್ನು ಸುಂದರವಾಗಿ ಡೆಕೊರೇಟ್ ಮಾಡಲಾಗಿದೆ.

ತಾರೆಯರು ಭಾಗಿ

ಸಂಜೆ 4-30 ಗಂಟೆಗೆ ಮೆಹೆಂದಿ ಶಾಸ್ತ್ರ ಶುರುವಾಗಲಿದ್ದು, ಮೆಹೆಂದಿ ಹಾಕಲು ಗಣೇಶ್ ಮನೆಗೆ ವಿಶೇಷ ತಂಡ ಆಗಮಿಸಲಿದೆ. ಈ ಶುಭ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ನಟರ ಪತ್ನಿಯರು ಮತ್ತು ಅಮೂಲ್ಯ ರ ಆಪ್ತ ಗೆಳತಿಯರು ಪಾಲ್ಗೊಳ್ಳಲಿದ್ದಾರೆ.

ಸಂಜೆ ಸಂಗೀತ ಕಾರ್ಯಕ್ರಮ

ಅಮೂಲ್ಯ-ಜಗದೀಶ್ ಮದುವೆಗೂ ಮುನ್ನ ಇಂದು ಮೆಹೆಂದಿ ಶಾಸ್ತ್ರದ ಜೊತೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮದ ವಿಶೇಷತೆ

ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ನಡೆಯಲಿರುವ ಅಮೂಲ್ಯ ರವರ ಮೆಹೆಂದಿ ಶಾಸ್ತ್ರ ಜೊತೆಗೆ ಸಂಗೀತ ಕಾರ್ಯಕ್ರಮ ಎರಡೂ ಸಹ ಉತ್ತರ ಭಾರತ ಶೈಲಿಯಲ್ಲಿ ನಡೆಯಲಿವೆ. ಅಮೂಲ್ಯ ಗೆ ಉತ್ತರ ಭಾರತ ಶೈಲಿಯ 5 ಮೆಹೆಂದಿ ಡಿಸೈನ್ ಅನ್ನು ಹಾಕಲಾಗುತ್ತದೆ.

ಪಂಜಾಬಿ ಡೋಲು ಬಾರಿಸುವವರು

ಮೆಹೆಂದಿ ಶಾಸ್ತ್ರದ ಜೊತೆ ನಡೆಯಲಿರುವ ಸಂಗೀತ ಕಾರ್ಯಕ್ರಮ ನೀಡಲು ಪಂಜಾಬಿ ಡೋಲು ಬಾರಿಸುವವರು ಮತ್ತು ಭಾಂಗಡ ಡ್ಯಾನ್ಸರ್ ಗಳನ್ನು ಶಿಲ್ಪಾ ಗಣೇಶ್ ಆಹ್ವಾನಿಸಿದ್ದಾರೆ.

English summary
Kannada Actress Amulya mehendi ceremony is scheduled at 4.30 PM today (May 10th) at Ganesh's house. Amulya is getting married to Jagadish.R.Chandra on May 12th. Here are the specialities of Amulya Mehendi Ceremony

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada